ನಾವು ಹೊರಗಿನಿಂದ ಬಂದವರು, ಬಿಜೆಪಿ ಅಂತರಂಗದ ಗುಟ್ಟು ಬಿಟ್ಟುಕೊಡುತ್ತಿಲ್ಲ: ಸಚಿವ ಎಸ್‌.ಟಿ. ಸೋಮಶೇಖರ್

ನಾವೆಲ್ಲಾ ಈಗಷ್ಟೇ ಹೊರಗಿನಿಂದ ಬಿಜೆಪಿಗೆ ಬಂದಿರುವವರು. ಬಿಜೆಪಿ ತನ್ನ ಅಂತರಾಳವನ್ನು ಬಿಟ್ಟುಕೊಡುತ್ತಿಲ್ಲ. ಬಿಜೆಪಿಯ ಒಳಗಿನ ನಿರ್ಧಾರಗಳ ಬಗ್ಗೆ ನಮಗೆ ತಿಳಿದಿಲ್ಲ. ಸಂಪುಟ ಪುನರ್ ರಚನೆ ಮಾಡ್ತಾರೋ, ವಿಸ್ತರಣೆ ಮಾಡ್ತಾರೋ ಗೊತ್ತಿಲ್ಲ. ಅವೆಲ್ಲ ನಮಗೆ ಎಲ್ಲಿ ಹೇಳ್ತಾರೆ ಎಂದು ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿ ಸಚಿವರಾಗಿರುವ ಸಚಿವ ಎಚ್.ಟಿ. ಸೋಮಶೇಖರ್ ಹೇಳಿದರು.

ಬಿಜೆಪಿಯಿಂದ 105 ಮಂದಿ ಗೆದ್ದಿದ್ದಾರೆ. ಅವರಿಗೂ ಸಂಪುಟದಲ್ಲಿ ಅವಕಾಶ ನೀಡಬೇಕು. ನಾವು 17 ಜನ ಸೇರಿದ್ದೇವೆ. ನಮಗೂ ಅವಕಾಶ ನೀಡಿದ್ದಾರೆ. 10 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದವರಿಗೆ ಅವಕಾಶ ಸಿಗಬಹುದು. ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದು. ಅವೆಲ್ಲ ನಮಗೆ ತಿಳಿಸುವುದಿಲ್ಲ. ನಾವು ಈಗ ಬಿಜೆಪಿಗೆ ಎಂಟರ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಎಂಟಿಬಿ ನಾಗರಾಜ್, ಶಂಕರ್, ಮುನಿರತ್ನ, ವಿಶ್ವನಾಥ್ ಪ್ರತಾಪ್ ಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಸೋತವರನ್ನು ವಿಧಾನ ಪರಿಷತ್‌‌ಗೆ ಆಯ್ಕೆ ಮಾಡಲಾಗಿದೆ. ಅವರಿಗೂ ಅವಕಾಶ ದೊರೆಯುತ್ತೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Read Also: ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ನಿಂದ ಸಮಿತಿ ರಚನೆ!

ಆರ್.ಆರ್. ನಗರದಿಂದ ಮುನಿರತ್ನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮುನಿರತ್ನ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಹಿಂದಿನಂತೆ ಚೆನ್ನಾಗಿಯೇ ಇದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾವು ಎಸ್.ಬಿ.ಎಂ. ಇದ್ದ ಹಾಗೆ. ಹಿಂದೆ ಸೋಮಶೇಖರ್, ಬೈರತಿ ಬಸವರಾಜು ಮತ್ತು ಮುನಿರತ್ನ ಅವರನ್ನು ಎಸ್.ಬಿ.ಎಂ. ಎಂದು ಕರೆಯುತ್ತಿದ್ದರು. ಈಗ ಮುನಿರತ್ನ ಗೆದ್ದಿರುವುದರಿಂದ ಎಸ್.ಬಿ. ಗೆ ಎಂ ಸೇರಿದಂತೆ ಆಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಕುರಿತು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.


ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್‌ ಚುಣಾವಣೆ: ಕಾಂಗ್ರೆಸ್‌ ಸೋಲಿಸಲು BJP ಮೊರೆಹೋದ JDS

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights