ಬಿಜೆಪಿಗೆ ಮಾಜಿ ಕೇಂದ್ರ ಸಚಿವ ಜಯಸಿಂಗ್ ರಾವ್ ಗಾಯಕ್ವಾಡ್ ಪಾಟೀಲ್ ರಾಜೀನಾಮೆ!
ಕೇಂದ್ರದ ಮಾಜಿ ಸಚಿವ ಮತ್ತು ಮಹಾರಾಷ್ಟ್ರ ಬಿಜೆಪಿಯ ಹಿರಿಯ ಮುಖಂಡ ಜಯಸಿಂಗ್ ರಾವ್ ಗಾಯಕ್ವಾಡ್ ಪಾಟೀಲ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧವಿದ್ದರೂ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿರುವ ಗಾಯಕ್ವಾಡ್ ಪಾಟೀಲ್ ಅವರು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಅಧಿಕಾರದ ಆಸೆಯನ್ನು ಹೊಂದಿಲ್ಲ. ಪಕ್ಷ ಬಲಪಡಿಸುವ ಕೆಲಸ ಮಾಡಲು ಸಿದ್ಧವಾಗಿದ್ದು, ಅಂತಹ ಹೊಣೆ ವಹಿಸಿಕೊಳ್ಳಲು ದಶಕದಿಂದ ಕೇಳುತ್ತಿದ್ದರೂ ಯಾವುದೇ ಅವಕಾಶವೇ ನೀಡಲಿಲ್ಲ. ರಾಜ್ಯದಲ್ಲಿ ಪಕ್ಷ ಬೆಳೆಸುವ ಪ್ರಯತ್ನ ಮಾಡುವವರು ಬಿಜೆಪಿಗೆ ಬೇಕಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಘಟಕ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಜಯಸಿಂಗ್ ರಾವ್ ಗಾಯಕ್ವಾಡ್ ಪಾಟೀಲ್, ಈ ಹಿಂದೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಕನ್ನಡಿಗರ ಹಿತ ಮರೆತ BJP: ಚುನಾವಣೆಗಾಗಿ ಮರಾಠಿಗರ ಅಭಿವೃದ್ಧಿ 50 ಕೋಟಿ ಅನುದಾನ!

