ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ “ರಾಷ್ಟ್ರವನ್ನು ವಿಭಜಿಸಲು ಮತ್ತು ದೇಶದ ಕೋಮುಸೌರ್ಹದತೆಗೆ ಭಂಗ ತರಲು ಲವ್ ಜಿಹಾದ್ ಎಂಬ ಪದವನ್ನು ಹುಟ್ಟುಹಾಕಿದೆ. ಮುಸ್ಲಿಂ ವಿರೋಧಿ ದ್ವೇಷವನ್ನು ಹೊಂದಿರುವ ಬಿಜೆಪಿ, ಮುಸ್ಲಿಂ ಯುವಕರು ಮತ್ತು ಹಿಂದೂ ಯುವತಿಯರ ನಡುವಿನ ಸ್ನೇಹ-ಪ್ರೀತಿ ಸಂಬಂಧವನ್ನು ರಾಜಕೀಯ ಮಾಡುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಬಿಜೆಪಿ ಆಡಳತದಲ್ಲಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ದ ಕಾನೂನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರಗಳು, ಜೀವನದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ವಿವಾಹವು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ… ಅದನ್ನು ತಡೆಯಲು ಕಾನೂನನ್ನು ತರುವುದು ಸಂಪೂರ್ಣವಾಗಿ ಅಸಂವಿಧಾನಿಕಗಿದೆ. ಈ ಕಾನೂನು ಯಾವುದೇ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ‘ಜಿಹಾದ್’ಗೆ ಪ್ರೀತಿಯಲ್ಲಿ ಸ್ಥಾನವಿಲ್ಲ. ಲವ್ ಜಿಹಾದ್ ಎಂಬುದು ದೇಶವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿರುವ ಪದ” ಎಂದು ಗೆಹ್ಲೋಟ್ ಹೇಳಿದರು.
“ಅವರು ರಾಷ್ಟ್ರದಲ್ಲಿ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ, ಅಲ್ಲಿ ವಯಸ್ಕರು ಒಪ್ಪಿಕೊಳ್ಳುವುದು ರಾಜ್ಯ ಅಧಿಕಾರದ ಕರುಣೆಯಿಂದ ಕೂಡಿರುತ್ತದೆ. ಮದುವೆ ವೈಯಕ್ತಿಕ ನಿರ್ಧಾರ. ಬಿಜೆಪಿ ಅದರ ಮೇಲೆ ನಿರ್ಬಂಧ ಹೇರುತ್ತಿದ್ದಾರೆ, ಇದು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿದೆ. ಬಿಜೆಪಿಗರು ರಾಷ್ಟ್ರದಲ್ಲಿ ಯುವಜನರು ಬಲವಂತದ ಕರುಣೆಯಿಂದ ಅದನ್ನು ಒಪ್ಪಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ” ಎಂದು ರಾಜಸ್ಥಾನದ ಮುಖ್ಯಮಂತ್ರಿ ಹೇಳಿದರು.
ಬಿಜೆಪಿಯ ಲವ್ ಜಿಹಾದ್ ವಿರೋಧಿ ಕಾನೂನು, “ಕೋಮು ಸೌಹಾರ್ದತೆಯನ್ನು ಭಂಗಗೊಳಿಸುವ, ಸಾಮಾಜಿಕ ಸಂಘರ್ಷವನ್ನು ಉತ್ತೇಜಿಸುವ ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ಕಡೆಗಣಿಸುವ ತಂತ್ರ” ಎಂದು ಅವರು ಬಣ್ಣಿಸಿದ್ದಾರೆ.
Love Jihad is a word manufactured by BJP to divide the Nation & disturb communal harmony. Marriage is a matter of personal liberty, bringing a law to curb it is completely unconstitutional & it will not stand in any court of law. Jihad has no place in Love.
1/— Ashok Gehlot (@ashokgehlot51) November 20, 2020
ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ,ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ಲವ್ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದಾಗಿ ಘೋಷಿಸಿವೆ.
ಇದನ್ನೂ ಓದಿ: MPಯಲ್ಲಿ ಲವ್ ಜಿಹಾದ್ ತಡೆಗೆ ಬಿಜೆಪಿ ಸರ್ಕಾರದ ಕಾನೂನು: ಮತಾಂತರಕ್ಕೆ 05 ವರ್ಷ ಜೈಲು ಶಿಕ್ಷೆ!

