FACT CHECK | ಅಮೆರಿಕದ ಟೆಕ್ಸಾಸ್ನಲ್ಲಿ ಪ್ರವಾಹ ಎಂದು AI ವಿಡಿಯೋ ಹಂಚಿಕೆ
ಅಮೆರಿಕದ ಟೆಕ್ಸಾಸ್ ನಲ್ಲಿ ಪ್ರವಾಹವುಂಟಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
![]()
ವಿಡಿಯೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಈ ವಿಡಿಯೋ ಕೃತಕವಾಗಿ ರೂಪಿಸಿದಂತೆ ಕಂಡುಬಂದಿದೆ. ರಸ್ತೆಯಲ್ಲಿ ಬರುವ ಕಾರುಗಳು ಅಂಡರ್ ಪಾಸ್ ಬಳಿ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ನಾಪತ್ತೆಯಾಗುವುದು, ಅಂಡರ್ ಪಾಸ್ ಅನಂತರ ತೇಲಿದಂತೆ ಇರುವುದು ಇದು ಎಐನಿಂದ ಮಾಡಿದ್ದಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ವಾಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಈ ಚಿತ್ರ ಅಥವಾ ಈ ಚಿತ್ರದ ಭಾಗವನ್ನು ಎಐ ನಿಂದ ಮಾಡಲ್ಪಟ್ಟಿದೆ ಎಂದು ಹೇಳಿದೆ. ಡಿಕಾಪಿ ಎಐ ಮೂಲಕ ಪರಿಶೀಲಿಸಿದಾಗ, ಶೇ.99.24ರಷ್ಟು ಎಐ ಮೂಲಕ ಮಾಡಿದ್ದು ಎಂಬ ಫಲಿತಾಂಶವನ್ನು ನೀಡಿದೆ.
![]()
ಆ ನಂತರದಲ್ಲಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದ್ದೇವೆ. ಈ ವೇಳೆ Disaster Strucks ಎಂಬ ಫೇಸ್ಬುಕ್ ಪೇಜ್ ಲಭ್ಯವಾಗಿದೆ. ಬಳಕೆದಾರರು ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಜುಲೈ 9ರಂದು ಪೋಸ್ಟ್ ಮಾಡಿದ್ದಾರೆ.
![]()
ಇದರ ವಿವರಣೆಯಲ್ಲಿ “ನೀರಿನ ಒತ್ತಡ ಹೆಚ್ಚಿದ್ದರಿಂದ ಭೂಗತ ರಸ್ತೆ ಮುಳುಗಿ ಹಲವು ಕಾರುಗಳು ಹಾನಿಗೊಳಗಾದವು.” ಎಂದು ಬರೆದಿದ್ದಾರೆ. ಈ ಪೇಜ್ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಪೇಜ್ ಪೀಠಿಕೆಯಲ್ಲಿ, “ವಿಪತ್ತು ಆಘಾತಗಳು” ಪುಟಕ್ಕೆ ಸುಸ್ವಾಗತ AI – ಮರುಸೃಷ್ಟಿಸಿದ ವಿಪತ್ತು ಘಟನೆಗಳು. AI ನಿಂದ ರಚಿಸಲಾದ ವಿಷಯ” ಎಂದು ಬರೆದಿರುವುದನ್ನು ಗಮನಿಸಿದ್ದೇವೆ.
![]()
Disaster Strucks ಪೇಜ್ ನಲ್ಲಿ ಕಂಡುಬಂದ ರೀಲ್ Disaster Strucks ಫೇಸ್ಬುಕ್ ಪೇಜ್ ಇಂಟ್ರೋ ಇದೇ ರೀತಿ ಬಳಕೆದಾರರು ವಿವಿಧ ಎಐ ರಚಿತ ವೀಡಿಯೋಗಳನ್ನು ಮಾಡಿರುವುದನ್ನು ಕಾಣಬಹುದು. ಇನ್ಸ್ಟಾಗ್ರಾಂನಲ್ಲೂ ಜುಲೈ 8ರಂದು Disasterstrucks1 ಬಳಕೆದಾರರು ವೈರಲ್ ವಿಡಿಯೋ ಹೋಲುವ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ಸಾಕ್ಷ್ಯಾಧಾರಗಳ ಪ್ರಕಾರ, ಟೆಕ್ಸಾಸ್ ನಲ್ಲಿ ಪ್ರವಾಹ ಎಂದು ಹಂಚಿಕೊಳ್ಳಲಾದ ವೀಡಿಯೋ, ಎಐನಿಂದ ಮಾಡಿದ್ದು ಎಂದು ಕಂಡುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಟೆಕ್ಸಾಸ್ ನಲ್ಲಿ ಪ್ರವಾಹಕ್ಕೆ ವಾಹನಗಳು ಕೊಚ್ಚಿಹೋಗಿವೆ ಎಂದು AI ನಿಂದ ರಚಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತಂಗಿಯ ಮೇಲೆ ದೌರ್ಜನ್ಯ ಎಸಗಿದಕ್ಕೆ ತನ್ನ ಸಹೋದರ ವ್ಯಕ್ತಿಯ ಕತ್ತು ಸೀಳಿ ಹತ್ಯೆ ಮಾಡಿದ್ದು ನಿಜವೇ?

