ಕೋವಿಡ್ -19 ಸೆಕೆಂಡ್ ಡೋಸ್ ಪಡೆದ ಬಿಗ್ ಬಿ..!

ಕೋವಿಡ್ -19 ಸೆಕೆಂಡ್ ಡೋಸ್ ಅನ್ನು ಬಿಗ್ ಬಿ ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

ಅಮಿತಾಬ್ ಬಚ್ಚನ್ ಅವರು ತಮ್ಮ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಾವು ಎರಡನೇ ಡೋಸ್ ಪಡೆದ ಫೋಟೋ ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಏಪ್ರಿಲ್‌ನಲ್ಲಿ ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು. ಅದರ ಬಗ್ಗೆ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು.

ಅಮಿತಾಬ್ ಬಚ್ಚನ್ ಪ್ರಸ್ತುತ ಬ್ರಹ್ಮಾಸ್ತ್ರ ಮತ್ತು ಚೆಹ್ರೆ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಬ್ರಹ್ಮಾಸ್ತ್ರದಲ್ಲಿ ಅಲಿಯಾ ಭಟ್, ರಣಬೀರ್ ಕಪೂರ್, ಡಿಂಪಲ್ ಕಪಾಡಿಯಾ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಚೆಹ್ರೆಯಲ್ಲಿ ಎಮ್ರಾನ್ ಹಶ್ಮಿ, ಅನ್ನೂ ಕಪೂರ್ ಮತ್ತು ರಿಯಾ ಚಕ್ರವರ್ತಿಇದ್ದಾರೆ.

Spread the love

Leave a Reply

Your email address will not be published. Required fields are marked *