ಡ್ರಗ್ಸ್‌ ಪ್ರಕರಣ: ಖ್ಯಾತ ಕಾಮಿಡಿ ಸ್ಟಾರ್‌ ಭಾರತಿ ಸಿಂಗ್‌ ಬಂಧನ!

ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಖ್ಯಾತ ಹಾಸ್ಯಗಾರ್ತಿ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಮಾದಕ ವಸ್ತು ನಿಯಂತ್ರಣ (ಎನ್‌ಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ದಾಳಿ ನಡೆಸಿದಾಗ 86.5 ಗ್ರಾಂನಷ್ಟು ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಆನಂತರ ಭಾರತಿ ಹಾಗೂ ಅವರ ಪತಿ ಹರ್ಷ್ ಲಿಂಬಚಿಯ ಅವರನ್ನು ಎನ್‌ಸಿಬಿಯ ಮುಂಬೈ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆಗ ಮಾದಕ ವಸ್ತು ಸೇವನೆಯ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಈ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್‌ ಅನ್ನು ಗುರಿಯಾಗಿಸಿಕೊಂಡು ಅನೇಕ ನಟ-ನಟಿಯರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ರಾಗಿಣಿ ಮತ್ತು ಸಂಜನಾ ಅವರು ಇನ್ನೂ ಬಂಧನದಲ್ಲಿದ್ದಾರೆ.


ಇದನ್ನೂ ಓದಿ: 2021ರ ಸರ್ಕಾರಿ ರಜೆಗಳ ಪಟ್ಟಿ ಪ್ರಟಿಸಿದ ರಾಜ್ಯ ಸರ್ಕಾರ: ಎಷ್ಟಿವೆ ಗೊತ್ತಾ ಸಾರ್ವತ್ರಿಕ ರಜೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights