ಮೊಸಳೆ ಬಾಯಿಯಿಂದ ಮರಿನಾಯಿಯನ್ನು ಕಾಪಾಡಿದ ವ್ಯಕ್ತಿಗೆ ಜೈ ಎಂದ ನೆಟ್ಟಿಗರು….!

ಮೊಸಳೆ ಇರುವ ಕೊಳದಲ್ಲಿ ಜಿಗಿದ ವ್ಯಕ್ತಿಯೋರ್ವ ಪುಟ್ಟ ನಾಯಿ ಮರಿಯನ್ನು ಕಾಪಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು… ಫ್ಲೋರಿಡಾ ವನ್ಯಜೀವಿ ಒಕ್ಕೂಟ ಮತ್ತು ಎಫ್‌ಸ್ಟಾಪ್ ಫೌಂಡೇಶನ್ ನಡುವಿನ ಸಹಭಾಗಿತ್ವದ ಪ್ರದೇಶದಲ್ಲಿನ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. 74 ವರ್ಷದ ರಿಚರ್ಡ್ ವಿಲ್ಬ್ಯಾಂಕ್ಸ್ ಮೂರು ತಿಂಗಳ ನಾಯಿ ಮರಿಯನ್ನು ಮೊಸಳೆ ಬಾಯಿಯಿಂದ ಬಿಡಿಸಿ ಜೀವ ಕಾಪಾಡಿದ್ದಾರೆ. ಜೀವದ ಹಂಗು ತೊರೆದು ನಾಯಿಯನ್ನು ರಕ್ಷಿಸಿದ ವಿಲ್ಬ್ಯಾಂಕ್ಸ್ ಗೆ ಸಾಧನೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ನಾವು ಕೊಳದ ಮೂಲಕ ನಡೆದುಕೊಂಡು ಹೋಗುತ್ತಿದ್ದೆ ಆಗ ಮೊಸಳೆ ನೀರಿನಿಂದ ಹೊರಬಂತು. ಅಷ್ಟು ವೇಗವಾಗಿರಬಹುದೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಮರು ಕ್ಷಣ ನಾಯಿ ಮರಿಯನ್ನು ಹಿಡಿದು ತಿನ್ನಲು ಮುಮದಾಗಿದೆ.

ತನ್ನ ಸಾಕುಪ್ರಾಣಿ ನಾಯಿ ಮರಿಯನ್ನು ರಕ್ಷಿಸಲು ತಕ್ಷಣ ರಿಚರ್ಡ್ ನೀರಿಗೆ ಹಾರಿದ್ದಾರೆ. ನಾಯಿಮರಿಯನ್ನು ಉಳಿಸುವ ಸಲುವಾಗಿ ಅವನು ನೀರೊಳಗೆ ನುಗ್ಗಿ ಮೊಸಳೆ ದವಡೆಗಳನ್ನು ತೆರೆದು ನಾಯಿಯನ್ನು ಬಿಡಿಸಿದ್ದಾರೆ. ಈ ವೇಳೆ ನಾಯಿ ಮರಿ ಹಾಗೂ ರಿಚರ್ಡ್ ಗೆ ಸಣ್ಣ ಗಾಯಗಳಾಗಿವೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು 74 ವರ್ಷದ ರಿಚರ್ಡ್ ಧೈರ್ಯಕ್ಕಾಗಿ ಶ್ಲಾಘಿಸಿದ್ದಾರೆ. ಪಶುವೈದ್ಯರು ನಾಯಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ರಿಚರ್ಡ್ ನಾಯಿಯನ್ನುಕರೆದೊಯ್ಯುವಾಗ ಹೆಚ್ಚು ಜಾಗರೂಕರಾಗಿ ಕೊಳದಿಂದ ಕನಿಷ್ಠ 10 ಅಡಿಗಳಷ್ಟು ದೂರವನ್ನು ಕಾಯ್ದುಕೊಳ್ಳುತ್ತಾರೆ.

https://www.facebook.com/1430675857032371/videos/3067962433303697/

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights