ಕೊರೆವ ಚಳಿಯಲಿ ರೈತರು; ದೇವ್ ದೀಪಾವಳಿಯಲ್ಲಿ ಮೋದಿ; ನಮೋ-ನಮೋ ಎನ್ನುತ್ತಿವೆ ಮಾಧ್ಯಮಗಳು!
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರಿಯಾಣ ಗಡಿಯಲ್ಲಿ ರೈತರು ಚಳಿಗೂ ಕುಗ್ಗದೆ ಹೋರಾಟ ಮುಂದುವರೆಸಿದ್ದಾರೆ. ಹೋರಾಟ ನಿರತ ರೈತರ ಮೇಲೆ ಜಲಪಿರಂಗಿಗಳು ಮತ್ತು ಅಶ್ರುವಾಯುಗಳ ದಾಳಿಗಳೂ ನಡೆದಿವೆ. ರೈತರ ಕೂಗಿಗೆ ಕಿವಿಗೊಡದ ಪ್ರಧಾನಿ ಮೋದಿ ದೇವ್ ದೀಪಾವಳಿ ಆಚರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯ ಬಕೆಟ್ ಮಾಧ್ಯಮಗಳು ಮೋದಿಯ ದೀಪಾವಳಿ ಸಂಭ್ರಮವನ್ನು ತಮ್ಮ ಸುದ್ದಿಗಳಲ್ಲಿ ಸಂಭ್ರಮಿಸುತ್ತಿವೆ.
ದಿನೇ ದಿನೇ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳುತ್ತಿರುವುದರ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಕಿಂಚಿತ್ತು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಾಮಕಾವಸ್ಥೆಗೆ ಮಾತುಕತೆಗೆ ಕರೆದಂತೆ ಮಾಡಿದ್ದ “ಷರತ್ತುಬದ್ಧ” ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.
ರೈತರನ್ನು ದೇಶದ ಬೆನ್ನೆಲುಬು ಎಂದು ಕರೆದು, ಇಂದು ಆ ಬೆನ್ನೆಲುಬು ರಸ್ತೆಯಲ್ಲಿ, ಈ ಚಳಿಯಲ್ಲಿ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದರೇ ಇತ್ತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ದಿನವನ್ನು ಹಾಡು, ನೃತ್ಯಗಳಿಗೆ ಮೀಸಲಿಟ್ಟು ಮನರಂಜನೆ ಪಡೆಯುತ್ತಿದ್ದಾರೆ.

ಉತ್ತರಪ್ರದೇಶದ ಕಾಶಿಯಲ್ಲಿ ಪ್ರಧಾನಿ ಮಂತ್ರಿ ಅವರು ದೇವ್ ದೀಪಾವಳಿ ಆಚರಿಸಿ, ಹಾಡು, ನೃತ್ಯ, ವಾಟರ್ ಡ್ಯಾನ್ಸ್, ಬೆಳಕಿನ ನೃತ್ಯಗಳನ್ನು ನೋಡಿ ಆನಂದ ಅನುಭವಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ತಾವು ಕಾಶಿಯಲ್ಲಿ ದೇವ್ ದೀಪಾವಳಿಯಲ್ಲಿ ಭಾಗವಹಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Har Har Mahadev! pic.twitter.com/k2XD2Q74xl
— Narendra Modi (@narendramodi) November 30, 2020
ಲಕ್ಷಾಂತರ ಸಂಖ್ಯೆಯಲ್ಲಿ ರೈತರು ರಸ್ತೆಗಳಲ್ಲಿ, ಬಿದಿಗಳಲ್ಲಿ ಕೊರೆಯುವ ಚಳಿಯಲ್ಲಿ, ಮಳೆ, ಗಾಳಿ ಬಿಸಿಲೆನ್ನದೇ ತಮ್ಮ ಹೋರಾಟ ಮುಂದುವರೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸದೇ, ಅನ್ನದಾತ ತನ್ನ ಕಷ್ಟ ಹೇಳಲು ಬಂದರೇ ಅವರ ಮಾತನ್ನೂ ಕೇಳದೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರ ಮತ್ತು ಪ್ರಧಾನಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ದೀಪಾವಳಿ ಕಾರ್ಯಕ್ರಮದಲ್ಲಿರುವ ಪ್ರಧಾನಿ ವಿಡಿಯೋಗೆ, ರೈತರ ಮೇಲೆ ಪೊಲೀಸರ ದೌರ್ಜನ್ಯದ ವಿಡಿಯೋವನ್ನು ಟ್ಯಾಗ್ ಮಾಡಿರುವ ಆಮ್ ಆದ್ಮಿ ಪಕ್ಷ ಇವರು ಯಾವ ಪ್ರಧಾನ ಸೇವಕರು ಎಂದು ಪ್ರಶ್ನೆ ಮಾಡಿದೆ. #किसान_के_मन_की_बात ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪ್ರಧಾನಿಯವರ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದೆ.
ये कैसा प्रधानसेवक?#किसान_के_मन_की_बात pic.twitter.com/DYOMLRfGn3
— AAP (@AamAadmiParty) November 30, 2020
ರೈತರ ಪ್ರತಿಭಟನೆಯ ಬಗ್ಗೆ, ರೈತರ ಬಗ್ಗೆ ಬಿಜೆಪಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದನ್ನು ಪ್ರಧಾನಿ, ಕೃಷಿ ಸಚಿವರ ಆದಿಯಾಗಿ ಬಿಜೆಪಿಗರು ಸಾಬೀತು ಪಡಿಸಿದ್ದಾರೆ. ಕರ್ನಾಟಕದ ಬಿಜೆಪಿ ಶಾಸಕ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಭಟನಾ ನಿರತ ರೈತರನ್ನು ಕಾಂಗ್ರೆಸ್ ರೈತರು ಎಂದು ವ್ಯಂಗ್ಯವಾಡುತ್ತಿದ್ದಾರೆ.
They said This Is covid Time . No permission for any crowd and agitation .
And other side @AmitShah did Road show in munsiple election in hydrabad .
Why duble standards of BJP ? #किसान_के_मन_की_बात pic.twitter.com/DaGjQTg6C8
— Rakesh Kumar (@AAPKA_RK) November 30, 2020
ಬಿಜೆಪಿಗೆ ಬಕೆಟ್ ಹಿಡಿಯುತ್ತಿರುವ ಮಾಧ್ಯಮಗಳೂ ಕೂಡ ರೈತರ ಪ್ರತಿಭಟನೆಯನ್ನು ನಿರ್ಲಕ್ಷಿಸಿವೆ. ಮೋದಿಯ ಭಜನೆ ಮಾಡುತ್ತಿರುವ ಮಾಧ್ಯಮಗಳು ನಿನ್ನೆ ಮೋದಿ ದೇವ್ ದೀಪಾವಳಿಯಲ್ಲಿ ಭಾಗಿಯಾದ್ದನ್ನು ಸುದ್ದಿ ಮಾಡಿಕೊಂಡು ಸಂಭ್ರಮಿಸಿವೆ.
https://twitter.com/AapKaTanu/status/1333417472981041155?s=20
ಪ್ರಧಾನಿ ದೀಪಾವಳಿ ಸಂಭ್ರಮದಲ್ಲಿದ್ದರೇ, ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಮಾತುಕತೆ ನಡೆಸದೆ ಕಳ್ಳಾಟ ಆಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಬಿಜೆಪಿ ಸರ್ಕಾರದ ನಿಜ ರೂಪ ಹೀಗಿದೆ ಎಂದು ಟ್ವಿಟರ್ ಬಳಕೆದಾರರು ಅನ್ನದಾತ ಮೇಲೆ ಪೊಲಿಸರು ನಡೆಸಿದ ದೌರ್ಜನ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.

