ದೀದಿಯನ್ನು ಬೆಂಬಲಿಸುವವರು ಕೈ-ಕಾಲು ಕಳೆದುಕೊಂಡು ಕೊಲೆಯಾಗುತ್ತಾರೆ: ಬಿಜೆಪಿ ರಾಜ್ಯಧ್ಯಕ್ಷ ಬೆದರಿಕೆ

ಪಶ್ಚಿಮ ಬಂಗಾಳದಲ್ಲಿ 2021ರ ಮೇ ಅಥವಾ ಜೂನ್‌ ತಿಂಗಳಿನಿಲ್ಲಿ ವಿಧಾನಸಭಾ ಚುನಾವಣೆಯ ನಡೆಯಲಿದ್ದು, ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯನ್ನು ಶುರುಮಾಡಿಕೊಂಡಿವೆ. ಈ ಮಧ್ಯೆ ಬಿಜೆಪಿಗರು ಸಮಾವೇಶವನ್ನು ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪ. ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವವರಿಗೆ ಕೈ ಕಾಲು ಮುರಿಯುವ ಹಾಗೂ ಕೊಲೆ ಮಾಡುವುದಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ದೀದಿ ಎಂದು ಕರೆಯುತ್ತಾ, ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತಿರುವ ಸಹೋದರರು ಮುಂದಿನ 6 ತಿಂಗಳಲ್ಲಿ ತಮ್ಮ ನಡೆಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಅವರಿಗೆ ಕೈ-ಕಾಲು ಕಳೆದುಕೊಳ್ಳುವ, ಪ್ರಾಣವನ್ನೂ ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸಮಾವೇಶವೊಂದರಲ್ಲಿ ಹೇಳಿದ್ದು, ಅವರ ಹೇಳಿಕೆ ವಿಡಿಯೋದಲ್ಲಿ ದಾಖಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಹಲ್ದಿಯಾದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ದಿಲೀಪ್ ಘೋಷ್, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದು,  “ರಾಜ್ಯದಲ್ಲಿ ಕಿರಿಕಿರಿ ಉಂಟುಮಾಡುತ್ತಿರುವ ದೀದಿಯ ಸಹೋದರರು ತಮ್ಮನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರು ಕೈ-ಕಾಲು ಮುರಿದುಕೊಂಡು ಆಸ್ಪತ್ರೆಗೆ ಹೋಗಬೇಕಾಗುತ್ತದೆ, ಇನ್ನೂ ಹೆಚ್ಚು ಮಾಡಿದರೆ ಪ್ರಾಣಕ್ಕೇ ಕುತ್ತು ಎದುರಾಗಬಹುದು ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.”


ಇದನ್ನೂ ಓದಿ: ವೆಟ್ರಿ ವೆಲ್‌ ಯಾತ್ರೆ ನಡೆಸಲು ಮುಂದಾಗಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.