‘Mitron’ ಆ್ಯಪ್ ಭಾರತದ್ದಲ್ಲ, ಪಾಕಿಸ್ತಾನದ TicTicನ ರಿಮೇಕ್

ಮಿತ್ರೋನ್ ಆ್ಯಪ್ 5 ಮಿಲಿಯನ್  ಡೌನ್‌ಲೋಡ್ ಮಾಡಲಾಗಿದೆಯೆಂದು ಸುದ್ದಿ ವೈರಲ್‌ ಆಗಿತ್ತು. ವಿತ್ರೋನ್ ಆ್ಯಪ್ ಅನ್ನು ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವುದಕ್ಕಾಗಿ ಭಾರತದಲ್ಲಿ ಅಭಿವೃದ್ದಿ ಪಡಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ವಾಸ್ತತವದ ಸಂಗತಿ ಎಂದರೆ, ಈ ಆ್ಯಪ್ ಅನ್ನು ಐಐಟಿ ರೂರ್ಕಿಯ ಭಾರತೀಯರು ಅಭಿವೃದ್ಧಿಪಡಿಸಿಲ್ಲ.

mitron become most popular app than tiktok, 50 lakh users download ...

ಚೀನಾದಲ್ಲಿ ಅಭಿವೃದ್ಧಿ ಪಡಿಸಲಾದ ಟಿಕ್‌ಟಾಕ್ ಆ್ಯಪ್ಅನ್ನು ಚೀನಾ ವಿರೋಧಿ ಮನೋಭಾವದಿಂದ ಬಳಸಬಾರದು ಎಂದು ಪ್ರಚಾರ ಮಾಡಲಾಗಿತ್ತು. ಚೀನಾದ ಟಿಕ್‌ಟಾಕ್‌ಗೆ ಪ್ರತಿಯಾಗಿ ಮಿತ್ರೋನ್ ಆ್ಯಪ್ ಬಿಡುಗಡೆಯಾಗಿದ್ದು, ದೇಶಿಯ ಆ್ಯಪ್ ಎಂದು ಹೆಚ್ಚಿನ ಸ್ಥಾನ ಪಡೆದುಕೊಂಡಿತ್ತು. ಆದರೆ, ಈ ಆ್ಯಪ್ ಪಾಕಿಸ್ತಾನದ ಟಿಕ್‌ಟಿಕ್ ಎಂಬ ಅಪ್ಲಿಕೇಶನ್‌ನಿಂದ ಮರುಹೆಸರಿಸಲ್ಪಟ್ಟಿದೆ ಎಂದು ಆ್ಯಪ್ ಅಭಿವೃದ್ಧಿಪಡಿಸಿದ ಪಾಕಿಸ್ತಾನ ಮೂಲದ ಕ್ಯೂಬಾಕ್ಸಸ್ ಕಂಪನಿಯು ಅಪ್ಲಿಕೇಶನ್‌ನ ಮೂಲ ಕೋಡ್‌ನ ವಿವರರನ್ನು ನೀಡಿದೆ. ಅಪ್ಲಿಕೇಶನ್‌ನ ವಿಶ್ಲೇಷಣೆಯನ್ನು ದಿ ಕ್ವಿಟ್‌ ವರದಿ ಮಾಡಿದೆ.

ಏಪ್ರಿಲ್ 11 ರಂದು ಪ್ರಾರಂಭವಾದ ಮಿತ್ರೋನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿಯನ್ನು ಐಐಟಿ ರೂರ್ಕಿಯ ವಿದ್ಯಾರ್ಥಿ ಶಿವಂಕ್ ಅಗರ್ವಾಲ್ ಅವರಿಗೆ ನೀಡಲಾಯಿತು. ಮಿತ್ರೋನ್ ಒಂದು ಸಣ್ಣ ವೀಡಿಯೊ ತಯಾರಿಕೆಯ ಅಪ್ಲಿಕೇಶನ್‌ ಆಗಿದ್ದು, ಇದು ಬಳಕೆದಾರರಿಗೆ 15 ಸೆಕೆಂಡುಗಳವರೆಗೆ ಸಣ್ಣ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಡುತ್ತದೆ.

ಈ ಹಿಂದೆ, ಅಗರ್‌ವಾಲ್‌ ಈ ಆ್ಯಪ್ಅನ್ನು ಸ್ವತಃ ಅಭೀವೃದ್ಧಿ ಪಡಿಸಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಟಿಕ್‌ಟಿಕ್‌ ಕೋಡ್ ಅನ್ನು ಅಗರ್‌ವಾಲ್‌ ಖರೀದಿಸಿ ಅದನ್ನು ಮರುಬ್ರಾಂಡ್ ಮಾಡಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.

ಎರಡು ಅಪ್ಲಿಕೇಶನ್‌ಗಳ ಮೂಲ ಕೋಡ್‌ಗಳ ಪರಿಶೀಲಿಸಿದಾಗ ಟಿಕ್‌ಟಿಕ್‌ನೊಂದಿಗೆ ಹಲವಾರು ಸಾಮ್ಯತೆಗಳು ಹಾಗೆಯೇ ಉಳಿದಿವೆ ಎಂದು ಕ್ಯೂಬಾಕ್ಸಸ್ ಕಂಪನಿ ಬಹಿರಂಗಪಡಿಸಿದೆ.

ಉದಾಹರಣೆಗೆ, ಮಿತ್ರೋನ್‌ನ ಕೋಡ್‌ನಲ್ಲಿ ಕಂಡುಬರುವಂತೆ “com.dinosoftlabs.tictic >> Main_Menu >> MainMenuFragment” ಅಂದರೆ, ಮಿತ್ರೋನ್‌ ಆ್ಯಪ್‌ನಲ್ಲಿ ‘tictic’ ಅನ್ನು ಇನ್ನೂ ಒಳಗೊಂಡಿದೆ. “com.dinosoftlabs.tictic” ಎಂಬುದು ಆಂಡ್ರಾಯ್ಡ್ ಪ್ಯಾಕೇಜ್ ಹೆಸರು ಮತ್ತು ಅಪ್ಲಿಕೇಶನ್‌ಗಾಗಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸೆರ್ಚ್‌ ಮಾಡುವ ಐಡಿಯಾಗಿದ್ದು, ಅದು ಇನ್ನೂ ಟಿಕ್‌ಟಿಕ್‌ನ ಐಡಿಯನ್ನೇ ಒಳಗೊಂಡಿದೆ.

ಕ್ಯೂಬಾಕ್ಸಸ್ ತನ್ನ ಮೈಕ್ರೋ-ವಿಡಿಯೋ ಹಂಚಿಕೆ ಅಪ್ಲಿಕೇಶನ್‌ನ ಮೂಲ ಕೋಡ್ ಅನ್ನು ಕೋಡ್ conyonನಲ್ಲಿ ಮಾರಾಟಕ್ಕೆ ಇಟ್ಟಿತ್ತು. ಈ ಸೈಟ್ ಮೊದಲೇ ನಿರ್ಮಿಸಿದ ಸೈಟ್‌ಗಳು, ಸ್ಕ್ರಿಪ್ಟ್‌ಗಳು, ಪ್ಲಗಿನ್‌ಗಳ ಅಪ್ಲಿಕೇಶನ್‌ಗಳು ಮತ್ತು ಥೀಮ್‌ಗಳನ್ನು ಸಹ ಖರೀದಿಸಬಹುದು.

ಮೂಲ ಕೋಡ್ $ 34 ಅಥವಾ ಅಂದಾಜು 2,570 ರೂ. ಆದಾಗ್ಯೂ, ಮಿತ್ರೋನ್ ಏಕೈಕ ಖರೀದಿದಾರನಾಗಿಲ್ಲ. ಟಿಕ್ ಟಿಕ್ ಅಪ್ಲಿಕೇಶನ್ ಮೂಲ ಕೋಡ್ ಅನ್ನು 274 ಬಾರಿ ಮಾರಾಟ ಮಾಡಲಾಗಿದೆ ಎಂದು ಕೋಡ್ ಕ್ಯಾನ್ಯನ್ ವೆಬ್‌ಸೈಟ್ ತಿಳಿಸಿದೆ.

ಎರಡೂ ಅಪ್ಲಿಕೇಶನ್‌ಗಳ ಆರಂಭಿಕ ನೋಟವು ಕೆಲವು ವೈಶಿಷ್ಟ್ಯಗಳನ್ನು ಹೋಲುತ್ತದೆ ಎಂದು ಸೂಚಿಸುತ್ತದೆ, ಆದರೆ ಟಿಕ್ ಟಾಕ್ ಬಳಕೆದಾರರ ಅನುಭವವನ್ನು ಅನುಕರಿಸಲು ಇಬ್ಬರೂ ಪ್ರಯತ್ನಿಸುತ್ತಿರುವುದರಿಂದ ಅದನ್ನು ಗುರುತಿಸಬಹುದು.

ಕೆಳಗೆ, ಟಿಕ್‌ಟಿಕ್‌ ಅಪ್ಲಿಕೇಶನ್‌ನ ಕೋಡ್ ಹಾಗೂ ಮಿತ್ರೋನ್ ಆ್ಯಪ್‌ನ ಕೋಡ್‌ನ ಸ್ಕ್ರೀನ್‌ಶಾಟ್ ಹಾಕಲಾಗಿದೆ. ಮೊದಲನೆಯದು ಟಿಕ್‌ಟಿಕ್‌ನದ್ದು, ಎರಡನೆಯದ್ದು ಮಿತ್ರೋನ್‌ ಆ್ಯಪ್‌ನದ್ದು. ಇರಡರಲ್ಲೂ ಟಿಕ್‌ಟಿಕ್‌ನ ಕೋಡ್‌ ಒಳಗೊಂಡಿದೆ.

TicTic’s library

TicTicನ ಲೈಬ್ರರಿ

 

Mitron’s library

Mitronನ ಲೈಬ್ರರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights