‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ : ಫೈಟರ್ ಮೃತ..!

‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ. ಈ ಬಗ್ಗೆ ಸಿನಿಮಾ ನಿರ್ಮಾಪಕ ಗುರು ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ರಾಮನಗರ ತಾಲೂಕು ಜೋಗನಪಾಳ್ಯ ಬಳಿ ಈ ಘಟನೆ ನಡೆದಿದೆ. ಮೃತನನ್ನು ತಮಿಳುನಾಡು ಮೂಲದ ವಿವೇಕ್ ಸ್ಟಂಟ್ ಮಾಸ್ಟರ್ ಆಗಿದ್ದಾರೆ. ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ನಟಿಯಾಗಿ ಅಭಿನಯಿಸುತ್ತಿರುವ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಮೆಟಲ್ ರೋಪ್ ಹೈಟೆನ್ಷನ್ ವೈಯರ್ ಗೆ ತಗುಲಿ ದುರಂತ ಸಂಭವಿಸಿದೆ. ಫೈಟರ್ ವಿವೇಕ್ ರೋಪ್ ಎಳೆಯುವಾಗ ದುರಂತ ಸಂಭವಿಸಿದೆ. ಜಾಕೆಟ್ ಹಾಕಿದವರಿಗೂ ಕರೆಂಟ್ ಹೊಡೆದಿದೆ.

ಮುಂಜಾಗೃತ ಕ್ರಮ ತೆಗೆದುಕೊಳ್ಳದಿದ್ದರಿಂದ ಘಟನೆ ನಡೆದಿದೆ ಎನ್ನಲಾಗುತ್ತಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ವಿವೇಕ್ ಮೃತದೇಹ ಇಡಲಾಗಿದ್ದು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.

ರಜಿತಾ ರಾಮ್ ಘಟನಾ ಸ್ಥಳದಲ್ಲಿ ಇರಲಿಲ್ಲ. ಆದರೆ ನಟ ಅಜಯ್ ರಾವ್ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿದೆ. ಒಂದಿಷ್ಟು ಸಿನಿಮಾ ಮಾಡಿದ್ದಾರೆಂದು ಹೇಳಲಾಗುವ ವಿವೇಕ್ ಸ್ಟಂಟ್ ಮಾಸ್ಟರ್ ಆಗಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights