‘ನನ್ನ ಬಯೋಪಿಕ್ ನಲ್ಲಿ ಅಕ್ಷಯ್ ಅಥವಾ ರಣದೀಪ್ ನಟಿಸಬೇಕು ಎನ್ನುವ ಆಸೆ’ – ನೀರಜ್ ಚೋಪ್ರಾ!

ಟೊಕಿಯೊ ಒಲಂಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಇಡೀ ಜಗತ್ತಿನಾದ್ಯಂತ ಶುಭಾಶಯಗಳು ಮಳೆ ಗರಿಯುತ್ತಿವೆ. ಅದ್ರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಅಂತು ನೀರಜ್ ಜೋಪ್ರಾ ಸ್ಟಾರ್ ಆಗಿ ಮೆರೆದಿದ್ದಾರೆ. ಪ್ರತಿಯೊಬ್ಬರ ವಾಟ್ಸಪ್ ಸ್ಟೇಟಸ್, ಫೇಸ್ಬುಕ್ ಎಲ್ಲಾ ಕಡೆಯಲ್ಲೂ ಇವರದ್ದೇ ಹವಾ ಇದೆ. ಈಗ ಕ್ರೀಡಾಪಟುವಿನ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದರ್ಶನದಲ್ಲಿ ನೀರಜ್ ಜೋಪ್ರಾ ಅವರು ತಮ್ಮ ಜೀವನಚರಿತ್ರೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲು ಬಯಸುವ ಬಾಲಿವುಡ್ ನಟರ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅಥವಾ ನಟ ರಣದೀಪ್ ಹೂಡಾ ಅವರು ತಮ್ಮ ಜೀವನಚರಿತ್ರೆಯ  ಪಾತ್ರವನ್ನು ನಿರ್ವಹಿಸಬೇಕೆಂದು ಜಾವಲಿನ್ ಥ್ರೋನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ನೀರಜ್ ಜೋಪ್ರಾ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ನೀರಜ್ ಅವರ ಗೆಲುವಿಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. 2018 ರಲ್ಲಿ ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ (ಏಷ್ಯನ್ ಗೇಮ್ಸ್ ನಂತರ), ನೀರಜ್ ಅವರು ರಂದೀಪ್ ಹೂಡಾ ಅಥವಾ ಅಕ್ಷಯ್ ಕುಮಾರ್ ಅವರ ಜೀವನಚರಿತ್ರೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ನೀರಜ್ ಚಿನ್ನದ ಗೆದ್ದ ನಂತರ ಅಕ್ಷಯ್ ಕುಮಾರ್ ಟ್ವಿಟ್ ಮೂಲಕ ನೀರಜ್ ಜೋಪ್ರಾ ಗೆ ಅಭಿನಂದಿಸಿದ್ದಾರೆ.

https://twitter.com/akshaykumar/status/1423983957368999943?ref_src=twsrc%5Etfw%7Ctwcamp%5Etweetembed%7Ctwterm%5E1423983957368999943%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fcelebrities%2Fstory%2Fneeraj-chopra-wants-akshay-kumar-or-randeep-hooda-to-play-his-role-in-biopic-1838641-2021-08-09

ನೀರಜ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ತಕ್ಷಣ ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆರಂಭಿಸಿದರು. ನಟ ತನ್ನ ಹೊಸ ಸಿನಿಮಾವನ್ನು ಕಂಡುಕೊಂಡಿದ್ದಾನೆ ಎಂದು ನೆಟಿಜನ್‌ಗಳು ಅಕ್ಷಯ್ ಮೇಲೆ ಉಲ್ಲಾಸದ ಮೆಮೆಗಳನ್ನು ಹಂಚಿಕೊಂಡಿದ್ದಾರೆ. 1948 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ತಪನ್ ದಾಸ್ ಪಾತ್ರವನ್ನು 2018 ರ ‘ಗೋಲ್ಡ್‌’ ಸಿನಿಮಾದಲ್ಲಿ ಅಕ್ಷಯ್ ನಿರ್ವಹಿಸಿದ್ದು ನೆಟ್ಟಿಗರು ನೆನೆದಿದ್ದಾರೆ.

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಅಕ್ಷಯ್ ಅವರ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡು ‘ಅಕ್ಷಯ್ ಕುಮಾರ್ ಅವರ ಹೊಸ ಚಲನಚಿತ್ರವನ್ನು ಈಗಷ್ಟೇ ಕಂಡುಕೊಂಡಿದ್ದಾರೆ’ ಎಂದು ಬರೆದಿದ್ಧಾರೆ.

ಇಡೀ ವಿಶ್ವದ ಗಮನ ಸೆಳೆದಿರುವ ನೀರಜ್ ಚೋಪ್ರಾ, ಮೂಲತಃ ಹರಿಯಾಣದವರಾದರೂ ಕೂಡ ಗಡಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿರುವ ಜಿಂದಾಲ್ ಕಂಪನಿಯಲ್ಲಿನ ಇನ್ಸ್‌ಪೈಯರ್ ಇನ್ಸ್ ಟ್ಯೂಟ್ ಆಪ್ ಸ್ಪೋರ್ಟ್ಸ್​​ನಲ್ಲಿ ತರಬೇತಿ ಪಡೆದಿದ್ದಾರೆ..ಅತ್ಯಂತ ಕಠಿಣ ತರಬೇತಿಯನ್ನು ಪಡೆದು, ಪರಿಶ್ರಮ ಹಾಕಿ ದಿನದ 8 ಗಂಟೆಗಳಿಗೂ ಹೆಚ್ಚು ಸಮಯ ಅಭ್ಯಾಸವನ್ನು ಮಾಡಿ ಇವತ್ತು ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಇವತ್ತು ಇವರ ಸಾಧನೆ ಹಿಂದೆ ಅವರ ಪರಿಶ್ರಮ ಎದ್ದು ಕಾಣುತ್ತದೆ. ಇನ್ನೊಂದು ಮುಖ್ಯ ಅಂದ್ರೆ ನೀರಜ್ ಚೋಪ್ರಾ ಅವರು ಗಡಿನಾಡು ಬಳ್ಳಾರಿಯಲ್ಲಿ ತರಬೇತಿ ಪಡೆಯುತ್ತಿದ್ದರು ಎಂಬುದು ನಾವು ಹೆಮ್ಮೆ ಪಡಲೇಬೇಕಾದ ವಿಷಯವಾಗಿದೆ‌‌.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights