ಮದುವೆ ಶೂಟಿಂಗ್ ವೇಳೆ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಛಾಯಾಗ್ರಾಹಕ..!
ದುಲ್ಹಾ-ದುಲ್ಹಾನ್ ಪ್ರವೇಶವನ್ನು ರೆಕಾರ್ಡ್ ಮಾಡುವಾಗ ಛಾಯಾಗ್ರಾಹಕನೊಬ್ಬ ಸ್ವಿಮ್ಮಿಂಗ್ ಪೂಲ್ ಗೆ ಬೀಳುವ ವೀಡಿಯೋ ವೈರಲ್ ಆಗಿದೆ.
ಉತ್ತರ ಕ್ಯಾಲಿಫೋರ್ನಿಯಾ ಮೂಲದ ಛಾಯಾಗ್ರಾಹಕ ಆಕಸ್ಮಿಕವಾಗಿ ಸ್ಥಳದಲ್ಲಿದ್ದ ಈಜುಕೊಳಕ್ಕೆ ಬಿದ್ದಿದ್ದದ್ದಾನೆ. ಮದುವೆಯ ದಿನ ಈ ಘಟನೆ ತಮಾಷೆಯ ಕ್ಷಣಕ್ಕೆ ಸಾಕ್ಷಿಯಾಯಿತು. ಹೌದು ಜುಲೈನಲ್ಲಿ ನಡೆದ ಘಟನೆಯ ಒಂದು ಚಿಕ್ಕ ತುಣುಕು ಸದ್ಯಕ್ಕೆ ಭಾರೀ ವೈರಲ್ ಆಗುತ್ತಿದೆ.
ಕ್ಲಿಪ್‌ನಲ್ಲಿ ಅದ್ದೂರಿ ವಿಲ್ಲಾದಲ್ಲಿ ವಿವಾಹವನ್ನು ಆಯೋಜಿಸಲಾಗಿದೆ. ದುಲ್ಹಾ ಮತ್ತು ದುಲ್ಹಾನ್ ಸಾಂಪ್ರದಾಯಿಕ ಉಡುಪನ್ನು ಧರಿಸಿ ವಿಲ್ಲಾದಿಂದ ಹೊರಟು ಕೊಳದ ಕಡೆಗೆ ಹೋಗುತ್ತಾರೆ. ಈ ಕ್ಷಣವನ್ನು ರೆಕಾರ್ಡ್ ಮಾಡಲು ಕೊಳದ ಬಳಿ ನಿಂತಿದ್ದ ಛಾಯಾಗ್ರಾಹಕ ತನ್ನ ಕ್ಯಾಮರಾದಲ್ಲಿ ಚಿತ್ರೀಕರಿಸುವಾಗ ಹಿಂದಕ್ಕೆ ನಡೆದಿದ್ದಾನೆ. ಈ ವೇಳೆಪೂಲ್ ಗೆ ಬಿದ್ದಿದ್ದಾನೆ.
ಕೊಳದಲ್ಲಿ ಮುಳುಗುತ್ತಿದ್ದಂತೆ ಛಾಯಾಚಿತ್ರಗ್ರಾಹಕ ತಮ್ಮ ಕ್ಯಾಮೆರಾವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಈ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ವೀಡಿಯೋವನ್ನು ಇಲ್ಲಿ ನೋಡಿ: