Corona survey : ರಾಜ್ಯದಲ್ಲಿ ಕೊರೋನಾ ಸರ್ವೇ, ಚುನಾವಣಾ ಕೆಲಸದಲ್ಲಿದ್ದ ಶಿಕ್ಷಕರಿಗೆ ಬುಲಾವ್

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ವೇ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜ್ಯದ ಎಲ್ಲ ಕುಟುಂಬಗಳನ್ನು ಈ ಸರ್ವೇಗೆ ಒಳಪಡಿಸಲಾಗುತ್ತಿದ್ದು, ಇದಕ್ಕಾಗಿ ಶಿಕ್ಷಕರಿಗೆ ಬುಲಾವ್ ನೀಡಲಾಗಿದೆ. ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದವರ ಪಟ್ಟಿ ತಯಾರಿಸಿ ಅವರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲು ಸರ್ಕಾರ ಆದೇಶಿಸಿದೆ.

ಮತದಾರರ ಪಟ್ಟಿಗನುಗುಣವಾಗಿ ಪ್ರತಿ ಮತಗಟ್ಟೆ ಅಧಿಕಾರಿಯ ವ್ಯಾಪ್ತಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಕೊರೋನಾ ಸರ್ವೇ ಕಾರ್‍ಯ ನಡೆಸಲು ಸರಕಾರ ಆದೇಶಿಸಿದೆ. ರಾಜ್ಯಾದ್ಯಂತ ನಡೆಯಲಿರುವ ಈ ಸರ್ವೇ ಕಾರ್‍ಯವನ್ನು 5 ದಿನಗಳ ಒಳಗಾಗಿ ಪೂರ್ಣಗೊಳಿಸಲು ರಾಜ್ಯ ಸರಕಾರವು ಅಧಿಕಾರಿಗಳು ಸೂಚನೆ ನೀಡಿದೆ.

ಈ ಸರ್ವೇಯ ಮಾಹಿತಿಯನ್ನು ಕೂಡಲೇ ವೆಬ್‌ಸೇಯಟ್‌ಗೆ ಅಪ್‌ಲೋಡ್ ಮಾಡಲು ಅನುವಾಗುವಂತೆ ಮೊಬೈಲ್ ಆಪ್‌ ಅನ್ನು ಸಹ ಸಿದ್ಧಪಡಿಸಲಾಗಿದೆ. ಈಗಾಗಲೇ ಮತಗಟ್ಟೆ ಅಧಿಕಾರಿಯಾಗಿ ಕಾರ್‍ಯ ನಿರ್ವಹಿಸಿರುವ ಎಲ್ಲ ಶಿಕ್ಷಕರೂ ಈ ಸರ್ವೇ ಕಾರ್‍ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದ್ದು, ಸಕಾರ ನಿಮಿತ್ತ ಅವರ ಗೈರಾದರೇ ಅವರ ಸ್ಥನಕ್ಕೆ ಮತ್ತೊಬ್ಬ ಶಿಕ್ಷಕರನ್ನು ನೇಮಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಮತಗಟ್ಟೆ ಅಧಿಕಾರಿ ಜೊತೆ ಒಬ್ಬ ಸರಕಾರಿ ಅಥವಾ ಅನುದಾನಿತ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸರ್ವೇ ಕಾರ್‍ಯವು ಇದೇ 30ರಿಂದ ಆರಂಭವಾಗಿ ಐದು ದಿನಗಳಲ್ಲಿ ಅಂದರೆ ಮೇ. ನಾಲ್ಕರ ವೇಳೆಗೆ ಪೂರ್ಣಗೊಳ್ಳಬೇಕೆಂದು ಸೂಚಿಸಲಾಗಿದೆ.

ಇತರ ತೀವ್ರ ಗತಿಯ ಆರೋಗ್ಯ ಸಮಸ್ಯೆ ಇರುವವರನ್ನು ಮುಂಚಿತವಾಗಿಯೇ ಗುರುತಿಸಿ ಅವರನ್ನು ಕೊರೋನಾದಿಮದ ರಕ್ಷಿಸಲು ಕ್ರಮ ಕೈಗೊಳ್ಳುವುದು ಈ ಸರ್ವೇಯ ಮುಖ್ಯ ಉದ್ದೇಶವಾಗಿದೆ.

ರಾಜ್ಯದಲ್ಲಿ ಕ್ರಮೇಣ ಕೊರೋನಾ ವೈರಾಣುವಿನ ಅಟ್ಟಹಾಸ ಇಳಿಮುಖವಾಗುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಹೊಸದಾಗಿ ಸೋಂಕು ಪೀಡಿತರ ಸಂಖ್ಯೆಗಿಂತ ಸೋಂಕಿನಿಂದ ಗುಣವಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿರುವುದು ಇದಕ್ಕೆ ಪೂರಕವಾಗಿದೆ.

ರಾಜ್ಯದಲ್ಲಿ ಮಂಗಳವಾರ ಸಂಜೆಯ ವೇಳೆಗೆ 295 ಮಂದಿ ಕೊರೋನಾ ಸೋಂಕಿತರಿದ್ದರೇ, 207 ಮಂದಿ ಇದರಿಂದ ಮುಕ್ತಿ ಪಡೆದಿದ್ದಾರೆ. 20 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights