ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆ 09ನೇ ದಿನಕ್ಕೆ ಕಾಲಿಟ್ಟಿದೆ. ವೈದ್ಯರು, ವಿದ್ಯಾರ್ಥಿಗಳು, ವಕೀಲರು, ಸರಕು ಸಾಗಾಣಿಕೆದಾರರ ಒಕ್ಕೂಟ ಸೇರಿದಂತೆ ದೇಶದ ನಾಗರಿಕರು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಮಾಧ್ಯಮಗಳು ಮಾತ್ರ ರೈತರ ಪ್ರತಿಭಟನೆಯ ಹಾದಿ ತಪ್ಪಿಸುವ, ರೈತರರನ್ನು ಭಯೋತ್ಪಾದಕರು, ಪ್ರತ್ಯೇಕವಾದಿಗಳು ಮತ್ತು ದೇಶ ದ್ರೋಹಿಗಳು ಎಂಬಂತೆ ಚಿತ್ರಿಸುವುದರಲ್ಲಿ ಬಿಸಿಯಾಗಿವೆ.

ರೈತರ ಪ್ರತಿಭಟನೆಯ ಸುದ್ದಿಗಳನ್ನು ಪ್ರಸಾರ ಮಾಡಲು ನಿರಾಕರಿಸುತ್ತಿರುವ ಮಾಧ್ಯಮಗಳು, ಪ್ರತಿಭಟನೆಯನ್ನು ತಿರುಚುತ್ತಿರುವುದೇಕೆ ಎಂಬುದಕ್ಕೆ ಕಾರಣವೂ ಇದೆ. ಅದನ್ನು ಆ ಮಾಧ್ಯಮಗಳ ಮಾಲೀಕರು ಯಾರು ಎಂದು ತಿಳಿದುಕೊಂಡರೆ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

  • ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ 20 ಸುದ್ದಿ ವಾಹಿನಿಗಳಿಗೆ ಮಾಲೀಕನಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ನ್ಯೂಸ್ 18, ಸಿಎನ್‌ಬಿಸಿ ಆವಾಜ್, ಸಿಎನ್‌ಎನ್-ನ್ಯೂಸ್ 18, ಮತ್ತು ಸಿಎನ್‌ಬಿಸಿ ಟಿವಿ 18. ಇದಲ್ಲದೆ, ಫಸ್ಟ್ ಪೋಸ್ಟ್ ಮತ್ತು ಮನಿ ಕಂಟ್ರೋಲ್‌ನಂತರ ಸುದ್ದಿ ವೆಬ್‌ ಪೋರ್ಟಲ್‌ಗಳನ್ನು ಹೊಂದಿದ್ದಾರೆ.
  • ಜೀ ನ್ಯೂಸ್‌ನ ಎಲ್ಲಾ ಚಾನೆಲ್‌ಗಳು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಭಾಷ್ ಚಂದ್ರ ಅವರ ಒಡೆತನದಲ್ಲಿವೆ. ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷೆಯ ಸುದ್ದಿ ವಾಹಿನಿಯಾದ WION ನ ಮಾಲೀಕರೂ ಇವರೇ ಅಗಿದ್ದಾರೆ.
  • ರಿಪಬ್ಲಿಕ್‌ ಟಿವಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ಅರ್ನಾಬ್ ಗೋಸ್ವಾಮಿ ಜಂಟಿಯಾಗಿ ನಡೆಸುತ್ತಿದ್ದಾರೆ.
  • ಇಂಡಿಯಾ ಟಿವಿಯ ಮಾಲೀಕ ರಜತ್ ಶರ್ಮಾ ಅವರು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಂಗ್‌ ಎಬಿವಿಪಿ ಸದಸ್ಯರಾಗಿದ್ದರು.
  • ನ್ಯೂಸ್ 24 ಸುದ್ದಿವಾಹಿನಿಯು ಮೋದಿ ಸರ್ಕಾರದಲ್ಲಿ ಹಾಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಸಹೋದರಿ ಅನುರಾಧಾ ಪ್ರಸಾದ್ ಅವರ ಒಡೆತನದಲ್ಲಿದೆ.
  • ಸುದರ್ಶನ್ ನ್ಯೂಸ್‌ನ ಮಾಲೀಕ ಸುರೇಶ್ ಚವಾಂಕೆ ಅವರು ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನ ಸ್ವಯಂಸೇವಕ ಮತ್ತು ಪದಾಧಿಕಾರಿ.
  • ಇಂಡಿಯಾ ನ್ಯೂಸ್ ಮತ್ತು ನ್ಯೂ ನ್ಯೂಸ್ ಎಕ್ಸ್ ಚಾನೆಲ್‌ಗಳು ಕಾರ್ತಿಕ್ ಶರ್ಮಾ ಅವರ ಒಡೆತನದಲ್ಲಿದ್ದು, ಅವರು ಕೆ ಮನ್ನು ಶರ್ಮಾ (ಜೆಸ್ಸಿಕಾ ಲಾಲ್ ಅವರನ್ನು ಗುಂಡಿಕ್ಕಿ ಕೊಂದವ) ಅವರ ಸಹೋದರ.
  • ಬ್ಯುಸಿನೆಸ್ ಲೈನ್ ಪ್ರಕಾರ, ರಿಲಯನ್ಸ್ ಜಿಯೋ ಮಂಡಳಿಯ ಸದಸ್ಯ ಹಾಗೂ ಮುಖೇಶ್ ಅಂಬಾನಿಯ ಆಪ್ತ ಸಹವರ್ತಿ ಮೊಹಿಂದರ್ ನಹಾತಾ ಅವರು ಎನ್‌ಡಿಟಿವಿಯಲ್ಲಿ ಶೇ 52 ರಷ್ಟು ಪಾಲನ್ನು ಪಡೆದುಕೊಂಡಿದ್ದಾರೆ. ಅವರು ಎನ್‌ಡಿ ಟಿವಿ ಚಾನೆಲ್‌ನ ನಿಜವಾದ ಮಾಲೀಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ಅವರ ಸಂಪಾದಕೀಯ ನೀತಿಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಹೆಣಗಾಡುತ್ತಿದ್ದಾರೆ.

ಅದಕ್ಕಾಗಿಯೇ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವು ನಮ್ಮ ಪೀಳಿಗೆಯ ಐತಿಹಾಸಿಕ ಹೋರಾಟವಾದ ಬಹುದೊಡ್ಡ ಪ್ರತಿಭಟನೆಯ ಬಗ್ಗೆ ಮೌನವಾಗಿದೆ. ಮಾತ್ರವಲ್ಲ ದಾರಿತಪ್ಪಿಸಲು ಯತ್ನಿಸುತ್ತಿದೆ. ಆದರೆ ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ ವರ್ಲ್ಡ್, ವಾಷಿಂಗ್ಟನ್ ಪೋಸ್ಟ್, ಗಾರ್ಡಿಯನ್ ಇತ್ಯಾದಿ ಮಾಧ್ಯಮಗಳೂ ಸಹ ಇದೇ ದಾರಿ ಹಿಡಿದಿವೆ. ಇದು ವಿಪರ್ಯಾಸ.

ಈ ಮಾಧ್ಯಮಗಳು ರೈತರನ್ನು ಭಯೋತ್ಪಾದಕರು, ಸ್ವಂತತ್ರ್ಯ ಸಿಖ್‌ ತಾಯ್ನಾಡಿಗಾಗಿ ಹೋರಾಡುತ್ತಿರುವ ಪ್ರತ್ಯೇಕವಾದಿಗಳು, ಖಲಿಸ್ಥಾನಿಗಳು ಎಂದು ಬಿಂಬಿಸುತ್ತಿವೆ. ಇಂತಹ ಮಾಧ್ಯಮಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ನೀತಿಯ ಅನುಸಾರ, ಧಾನ್ಯ ಸಂಗ್ರಹ ಮಿತಿ ಹೆಚ್ಚಾದ ದಿನ ಸಾಮಾನ್ಯ ಜನರು ಸಾಯುತ್ತಾರೆ. ಅವರಲ್ಲಿ ಮೀಡಿಯಾದವರು ಇರುತ್ತಾರೆ. ಆದರೆ, ಇದು ಮಾಧ್ಯಮಗಳಿಗೆ ಅರ್ಥವಾಗುತ್ತಿಲ್ಲ. ಅವರು ನಮ್ಮ ಹೋರಾಟವನ್ನು ದಿಕ್ಕು ತಪ್ಪಿಸಲು ಹವಣಿಸುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights