ತುಪ್ಪದ ಹುಡುಗಿಗೆ ಕೈತಪ್ಪಿದ ಜಾಮೀನು : ಜನವರಿಗೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್!
ತುಪ್ಪದ ಹುಡುಗಿ ನಟಿ ರಾಗಿಣಿಗೆ ಮತ್ತೆ ಜಾಮೀನು ಕೈತಪ್ಪಿದ್ದು ಸುಪ್ರೀಂಕೋರ್ಟ್ ಜನವರಿಗೆ ವಿಚಾರಣೆ ಮುಂದೂಡಿದೆ.
ಹೌದು… ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿಗೆ ಮುಂದೂಡಿದೆ. ಹೀಗಾಗಿ ನಶೆಯ ಜಾಲಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಇನ್ನೂ ಒಂದು ತಿಂಗಳೂ ಜೈಲೇ ಗತಿ ಎಂಬಂತಾಗಿದೆ.
ಹೊಸ ವರ್ಷಕ್ಕೆ ಜಾಮೀನು ಪಡೆದು ಹೊಸ ಜೀವನ ಆರಂಭ ಮಾಡಬೇಕು ಅಂದುಕೊಂಡಿದ್ದ ಮಾದಕ ಲೋಕ ನಟಿಮಣಿ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರೆರೆಚಿದೆ. ಈ ಹಿಂದೆ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ರಾಗಿಣಿ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಸಪ್ರೀಂ ಕೋರ್ಟ್ ಕೂಡ ತುಪ್ಪದ ಬೆಡಗಿಯ ಕೈಹಿಡಿಯಲಿಲ್ಲ. ಹೀಗಾಗಿ ರಾಗಿಣಿ ಜೈಲುವಾಸದಲ್ಲೇ ಹೊಸ ವರ್ಷ ಆಚರಿಸುವಂತಾಗಿದೆ.
ಡ್ರಗ್ಸ್ ಮಾಫಿಯಾದಲ್ಲಿ ಚಂದನವನದ ನಟಿ ರಾಗಿಣಿ ಮತ್ತು ಸಂಜನಾಳನ್ನು ಬಂಧಿಸಲಾಗಿದೆ. ಇಬ್ಬರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಪಡ್ಡೆ ಹುಡುಗರಿಗೆ ಜುಂ ಜುಂ ಮಾಯಾವಾಗಿದ್ದ ರಾಗಿಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದು ಅದ್ಯಾಕೋ ಬಿಗುಗಡೆ ಭಾಗ್ಯ ಮಾತ್ರ ಸಿಗುತ್ತಿಲ್ಲ.