BJP ಸೇರಿದ ಸಂಸದರನ್ನು ಸುತ್ತುವರಿದ TMC ಕಾರ್ಯಕರ್ತರು: ಕಪ್ಪು ಬಾವುಟ ತೋರಿಸಿ ಪ್ರತಿಭಟನೆ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದ ಸಂಸದ ಸುನಿಲ್ ಮೊಂಡಾಲ್ ಅವರನ್ನು ಬಿಜೆಪಿ ಕಚೇರಿಯ ಬಳಿ ಟಿಎಂಸಿ ಕಾರ್ಯಕರ್ತರು ಶನಿವಾರ ಸುತ್ತುವರೆಸಿದ್ದಾರೆ. ಸಂಸದ ಮೊಂಡಾಲ್‌ ಅವರನ್ನು ಅಡ್ಡಗಟ್ಟಿದ ಕಾರ್ಯಕರ್ತರು ಮೊಂಡಾಲ್‌ ವಿರುದ್ಧ ಕಪ್ಪು ಧ್ವಜಗಳನ್ನು ತೋರಿಸಿ, ಘೋಷಣೆಗಳನ್ನು ಕೂಗಿದ್ದಾರೆ.

ಮೊಂಡಾಲ್ ಅವರು ಡಿಸೆಂಬರ್ 19 ರಂದು ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದರು. ಟಿಎಂಸಿ ತೊರೆದು ಬಿಜೆಪಿಗೆ ಸೇರಿದ ಬಂಡಾಯ ನಾಯಕರಿಗೆ ಬಿಜೆಪಿ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಕಚೇರಿಗೆ ಬಂದ ಮೊಂಡಾಲ್‌ ಅವರ ಕಾರನ್ನು ತಡೆದ ಟಿಎಂಸಿ ಕಾರ್ಯಕರ್ತರು ಅವರಿಗೆ ಕಪ್ಪು ಬಾವುಟ ತೋರಿಸಿ, ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ಸ್ಥಾನ ಗೆಲ್ಲುವುದಿಲ್ಲ; ಗೆದ್ದರೆ ರಾಜಕೀಯ ತೊರೆಯುವೆ: ಪ್ರಶಾಂತ್ ಕಿಶೋರ್

ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ ನಂತರ, ಬಿಜೆಪಿ ಕಚೇರಿಯ ಬಳಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಪ್ರತಿಭಟನೆ ಸ್ವಯಂಪ್ರೇರಿತವಾಗಿ ನಡೆದಿರಬಹುದು ಎಂದು ಟಿಎಂಸಿ ಸಂಸದ ಸೌಗತಾ ರಾಯ್ ಹೇಳಿದ್ದಾರೆ.

ಬಿಜೆಪಿಯನ್ನು ನಿಗ್ರಹಿಸಲು ಟಿಎಂಸಿ ಮಾಡಿದ ಈ ತಂತ್ರಗಳು ವಿಫಲವಾಗುತ್ತವೆ ಎಂದು ಬಿಜೆಪಿ ನಾಯಕ ಜೇ ಪ್ರಕಾಶ್ ಮಜುಂದಾರ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು 2021ರ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಪ.ಬಂಗಾಳದಲ್ಲಿ ಭಾರೀ ಕಸರತ್ತು ನಡೆಸುತ್ತಿದೆ.


ಇದನ್ನೂ ಓದಿ: ಬಂಗಾಳ: ಬಿಜೆಪಿಯ ಹೊಸ ಕಾರ್ಯಕರ್ತರು ಮತ್ತು ಹಳೇ ಕಾರ್ಯಕರ್ತರ ನಡುವೆ ಮಾರಾಮಾರಿ-ಹಿಂಸಾಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights