ದೇಶದ 30 ಕೋಟಿ ಜನರಿಗೆ ಉಚಿತ ಲಸಿಕೆ : ಮೊದಲ ಹಂತದ ವೆಚ್ಚ ಭರಿಸಲಿದೆ ಸರ್ಕಾರ!

ದೇಶಕ್ಕೆ ಬ್ರಿಟನ್ ಹೊಸ ಪ್ರಬೇಧದ ಕೊರೊನಾ ಕಾಲಿಟ್ಟ ಪ್ರಾರಂಭದ ಹಂತದಲ್ಲೇ ಕೊರೊನಾ ಲಸಿಕೆ ತಯಾರಿಕೆ ಯಶಶ್ವಿಯಾಗಿದೆ. ಇದರ ಬೆನ್ನಲ್ಲೆ ಮೊದಲ ಹಂತದಲ್ಲಿ ದೇಶದ 30 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದೆ. ಇದರ ವೆಚ್ಚ ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ.

ಹೌದು…ದೇಶದ 30 ಕೋಟಿ ಜನರಿಗೆ ವ್ಯಾಕ್ಸಿನ್ ಸಿಗಲಿದ್ದು ಇದರ ವೆಚ್ಚ ಸರ್ಕಾರ ಭರಿಸಲಿದೆ. ಮುಂದಿನ 6 ತಿಂಗಳಲ್ಲಿ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ನ್ಯಾಷನಲ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿನೋದ್ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷಿಣಿಸುತ್ತಿದ್ದು, ಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರಿ ಸದ್ದು ಮಾಡುತ್ತಿರುವ ರೂಪಾಂತರಿ ಕೋವಿಡ್ ಸೋಂಕಿಗೆ ತುತ್ತಾದ ಭಾರತೀಯರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೊರೊನಾ ಲಸಿಕೆ ವಿತರಣೆ ತಾಲೀಮು ಆರಂಭಗೊಂಡಿದ್ದು ನರ್ಸ್, ಕೊರೊನಾ ವಾರಿಯರ್ಸ್ಗಳಿಗೆ ಕೊರೊನಾ ಲಸಿಕೆ ತಾಲೀಮು ನಡೆಯಲಿದೆ.

ದೇಶದಲ್ಲಿ ಶನಿವಾರ 19,078 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿ 224 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,03,05,788ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 1,49,218ಕ್ಕೆ ತಲುಪಿದೆ.

ಇನ್ನು ಹೊಸ ರೂಪಾಂತರಿ ಕೊರೋನಾ ವೈರಸ್ ಸೋಂಕಿತ ರಾಷ್ಟ್ರಗಳ ಪಟ್ಟಿ ಕೂಡ ಸೋಂಕಿತರ ಪಟ್ಟಿಯಂತೆಯೇ ಬೆಳೆಯುತ್ತಾ ಸಾಗಿದ್ದು, ಈ ವರೆಗೂ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ,  ದೇಶಗಳಲ್ಲೂ ಹೊಸ ಮಾದರಿ ಸೋಂಕು ಪತ್ತೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights