ಜಾಮಾ ಮಸೀದಿಯಲ್ಲಿ ನಮಾಜ್ ಮಾಡಿ ಹೊಸ ವರ್ಷ ಸ್ವಾಗತಿಸಿದ್ರಾ ದೆಹಲಿ ಸಿಎಂ?
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟೋಪಿ ಧರಿಸಿದ ಫೋಟೋವೊಂದು ದೆಹಲಿಯ ಜಮಾ ಮಸೀದಿಯಲ್ಲಿ ನಮಾಜ್ ಮಾಡುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿದೆ.
“ದೊಡ್ಡ ಸುದ್ದಿ: ಹೊಸ ವರ್ಷದ ಮೊದಲ ದಿನ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜಮಾ ಮಸೀದಿಯಲ್ಲಿ ನಮಾಜ್ ಮಾಡಿ ದೆಹಲಿ ಮತ್ತು ದೇಶಕ್ಕಾಗಿ ಪ್ರಾರ್ಥಿಸಿದರು” ಎಂದು ಅನುವಾದಿಸಿರುವ ಫೇಸ್ಬುಕ್ ಮತ್ತು ಟ್ವಿಟರ್ ಫೋಸ್ಟರನ್ನು ಅನೇಕ ಜನರು ಹಂಚಿಕೊಂಡಿದ್ದಾರೆ.
बड़ी खब़र: साल के पहले दिन जामा मस्जिद जाकर दिल्ली के मालिक जनाब भो श्री अरविंद केजरीवाल ने पढ़ी नमाज़ देश और दिल्ली के लिये पढ़ी दुआ । pic.twitter.com/YwMxKDJrLg
— Ajay Kumar (@AjayKum88711375) January 1, 2021
ಆದರೆ ಈ ಫೋಟೋದಲ್ಲಿನ ಹೇಳಿಕೆ ತಪ್ಪಾಗಿದ್ದು, ಕೇಜ್ರಿವಾಲ್ ನಮಾಜ್ ಚಿತ್ರ ನಾಲ್ಕು ವರ್ಷ ಹಳೆಯದು. ಜುಲೈ 4, 2016 ರಂದು ಪಂಜಾಬ್ನ ಮಲೆರ್ಕೋಟ್ಲಾದಲ್ಲಿ ಪವಿತ್ರ ರಂಜಾನ್ ತಿಂಗಳಲ್ಲಿ ರೋಜಾ ಬಿಡುವ ಮೊದಲು ಭಕ್ತರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಫೋಟೋ ಇದಾಗಿದೆ.
ಪೋಸ್ಟ್ಗಳ ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಉಳಿಸಲಾಗಿದೆ.
2016 ರಲ್ಲಿ ಹಿಂದಿ ಸುದ್ದಿ ವೆಬ್ಸೈಟ್ ನಲ್ಲಿ ಪ್ರಕಟವಾದ ಕೇಜ್ರಿವಾಲ್ ಅವರ ಅದೇ ಫೋಟೋವನ್ನು ಕಾಣಬಹುದು. ಕೇಜ್ರಿವಾಲ್ ಪಕ್ಕದಲ್ಲಿ ಕುಳಿತಿರುವ ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನೂ ಒಳಗೊಂಡಂತೆ ಅದೇ ಫೋಟೋವನ್ನು ಜಾಗ್ರಾನ್ನಲ್ಲಿ ಪ್ರಕಟಿಸಲಾಗಿದೆ.
ಹೀಗಾಗಿ ಹೊಸ ವರ್ಷದ ಮೊದಲ ದಿನದಂದು ದೆಹಲಿ ಸಿಎಂ ಜಮಾ ಮಸೀದಿಯಲ್ಲಿ ನಮಾಜ್ ಮಾಡಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಕೇಜ್ರಿವಾಲ್ ಪ್ರಾರ್ಥನೆ ಸಲ್ಲಿಸುವ ಫೋಟೋ ನಾಲ್ಕು ವರ್ಷ ಹಳೆಯದು.

