ಇಂಡೋನೇಷ್ಯಾದಲ್ಲಿ ವಿಮಾನ ಪತನ ಪ್ರಕರಣ : ಸ್ಟೋಟದ ಶಬ್ದ ಕೇಳಿ ಗಾಬರಿಗೊಂಡ ಮೀನುಗಾರರು!

ಇಂಡೋನೇಷ್ಯಾದ ಜಕಾರ್ತಾದಿಂದ ಟೇಕಾಫ್ ಆಗಿದ್ದ 62 ಜನ ಪ್ರಯಾಣಿಕರಿದ್ದ ಶ್ರೀವಿಜಯ ವಿಮಾನದ ಅವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ಶನಿವಾರ ಸಂಜೆ ಜಕಾರ್ತಾದಿಂದ ಟೇಕ್‌ಆಫ್ ಆದ ಕೆಲವೇ ಸಮಯದಲ್ಲಿ ಪ್ಲೇನ್ ನಾಪತ್ತೆಯಾಗಿತ್ತು. ಭಾನುವಾರ ಜಾವಾ ಸಮುದ್ರದಲ್ಲಿ 23 ಮೀಟರ್ (75 ಅಡಿ) ಆಳದಲ್ಲಿ ಬೋಯಿಂಗ್ 737-500 ರ ಧ್ವಂಸದ ಭಾಗಗಳನ್ನು ಪತ್ತೆ ಮಾಡಲಾಗಿದೆ.

ಅಲ್ಲಿನ ಮೀನುಗಾರರು ಹೇಳುವ ಪ್ರಕಾರ, ಪ್ಲೇನ್ ಸಮುದ್ರಕ್ಕೆ ಬಿದ್ದಂತೆ ದೊಡ್ಡ ಪ್ರಮಾಣದ ಶಬ್ದ ಕೇಳಿಬಂದಿದೆ. ಸಮುದ್ರದ ನೀರು 2 ಮೀಟರ್ ಎತ್ತರದಿಂದ ದೋಣಿಗೆ ಬಂದು ಬಡೆದಿದೆ. ಸ್ಪೋಟದ ಶಬ್ದ ಗಾಬರಿಗೊಂಡ ಮೀನುಗಾರರು ಭಗ್ನದ ಅವಶೇಷಗಳು ಪತ್ತೆಯಾಗಿವೆ ಎಂದಿದ್ದಾರೆ.

ಜಕಾರ್ತಾದ ಕರಾವಳಿಯ ಲಂಕಾಂಗ್ ಮತ್ತು ಲಕಿ ದ್ವೀಪಗಳ ನಡುವಿನ ಪ್ರದೇಶದಲ್ಲಿನ ಮೀನುಗಾರರು ಶನಿವಾರ ಮಧ್ಯಾಹ್ನ 2: 30 ರ ಸುಮಾರಿಗೆ ಸ್ಫೋಟದ ಶಬ್ದ ಕೇಳಿದ್ದಾರೆ. ಸಮುದ್ರದಿಂದ ದೇಹದ ಭಾಗಗಳು, ಬಟ್ಟೆಯ ತುಂಡುಗಳು ಮತ್ತು ಲೋಹದ ತುಣುಕುಗಳನ್ನು ಹೊರತೆಗೆದಿದ್ದಾರೆ.

ಪತನವಾದ ವಿಮಾನದಲ್ಲಿ ಏಳು ಜನ ಮಕ್ಕಳು, 43 ಪ್ರಯಾಣಿಕರು, 12 ಸಿಬ್ಬಂದಿಗಳಿದ್ದರು. ವಿಮಾನ ಅಪಘಾತಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights