ಕೊಹ್ಲಿ ಮನೆಗೆ ಜ್ಯೂನಿಯರ್ ಅನುಷ್ಕಾ ಎಂಟ್ರಿ : ಮಗುವಿನ ಮೊದಲ ಫೋಟೋ ವೈರಲ್…!

ಜನವರಿ 11 ರಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಹೆಣ್ಣು ಮಗು ಜನಿಸಿದೆ. ದಂಪತಿಗಳಿಗೆ ಸ್ನೇಹಿತರು, ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಂದ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ.

ಭಾರೀ ಕುತೂಹಲ ಮೂಡಿಸಿದ್ದ ಮಗುವಿನ ಮೊದಲ ಫೋಟೋ ಭಾರೀ ವೈರಲ್ ಆಗಿದ್ದು, ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಅಂತಿಮವಾಗಿ ಅನುಷ್ಕಾ-ವಿರಾಟ್ ಅಭಿಮಾನಿಗಳಿಗೆ ಕುಟುಂಬದ ಹೊಸ ಸದಸ್ಯರ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗುವಿನ ಪುಟ್ಟ ಪಾದಗಳ ಫೋಟೋವನ್ನು ವಿಕಾಸ್ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿಯ ಸಹೋದರ ವಿಕಾಸ್ ಕೊಹ್ಲಿ ಮಗುವಿನ ಪುಟ್ಟ ಪಾದಗಳ  ಫೋಟೋವನ್ನು ಹಂಚಿಕೊಂಡಿದ್ದಾರೆ. “ಸಂತೋಷದ ಅತಿರೇಕ … ಮನೆಯಲ್ಲಿ ದೇವತೆ” ಎಂದು ಅವರು ತಮ್ಮ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವಿಕಾಸ್ ಕೊಹ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗಳ ಫೋಟೋವನ್ನು ಪೋಸ್ಟ್ ಮಾಡಿದ ತಕ್ಷಣ, ಅವರ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಅಭಿನಂದನಾ ಸಂದೇಶಗಳ ಬಾಂಬ್ ಸ್ಫೋಟಿಸಿದ್ದಾರೆ. ಹಲವರು ಹೃದಯ ಎಮೋಜಿಗಳನ್ನು ಕಳುಹಿಸಿದರೆ, ಇತರರು ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ವಿಕಾಸ್ ಕೊಹ್ಲಿ ಚಿಕ್ಕಪ್ಪನಾಗಿದ್ದಕ್ಕಾಗಿ ಅನೇಕರು ಅಭಿನಂದಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights