ಹೆಣ್ಣುಮಕ್ಕಳು 15ನೇ ವಯಸ್ಸಿಗೆ ಮಕ್ಕಳನ್ನು ಪಡೆಯಬಹುದು; ವಿವಾಹದ ವಯಸ್ಸನ್ನು ಏಕೆ ಏರಿಸಬೇಕು: ಕಾಂಗ್ರೆಸ್‌ ನಾಯಕ ವಿವಾದಾತ್ಮಕ ಹೇಳಿಕೆ

ಹೆಣ್ಣು ಮಕ್ಕಳು 15ನೇ ವಯಸ್ಸಿಗೆ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿರುತ್ತಾರೆ. ಹೀಗಿರುವಾಗ ಅವರ ಮದುವೆಯ ವಯಸ್ಸನ್ನು ಏಕೆ 18 ವರ್ಷದಿಂದ 21 ವರ್ಷಕ್ಕೆ ಏರಿಸಬೇಕು ಎಂದು ಮಧ್ಯಪ್ರದೇಶ ಮಾಜಿ ಸಚಿವ, ಹಿರಿಯ ಕಾಂಗ್ರೆಸ್​ ನಾಯಕ ಸಜ್ಜನ್​ ಸಿಂಗ್​ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ಟೀಕೆಗೆ ಒಳಗಾಗಿದ್ದಾರೆ.

ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡುವತ್ತ ಕೇಂದ್ರ ಚಿಂತನೆ ನಡೆಸಬೇಕು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಣ್​ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕ, ಹೆಣ್ಣು ಮಕ್ಕಳಿಗೆ 15ನೇ ವಯಸ್ಸಿಗೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದ್ದು ವಿವಾದಕ್ಕೆ ಸಿಲುಕಿದ್ದಾರೆ.

15ನೇ ವಯಸ್ಸಿಗೆ ಮಕ್ಕಳನ್ನು ಹೆರಲು ಹೆಣ್ಣುಮಕ್ಕಳು ಅರ್ಹವಾಗಿರುತ್ತಾರೆ. ಇದು ನನ್ನ ಹೇಳಿಕೆಯಲ್ಲ, ವೈದ್ಯರೇ ತಿಳಿಸಿದ್ದಾರೆ. ಹಾಗಾಗಿ ಹೆಣ್ಣುಮಕ್ಕಳು 18 ವರ್ಷಕ್ಕೆ ಮದುವೆಯಾಗಲು ಪ್ರಬುದ್ಧರಾಗುತ್ತಾರೆ. ಅಷ್ಟೇ ಅಲ್ಲದೇ ಹುಡುಗಿಯರು ತಮ್ಮ ಗಂಡನ ಮನೆಗೆ ಹೋಗಿ ಸುಖ ಸಂತೋಷದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.

ಹುಡುಗಿರಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಶಿವರಾಜ್‌ ಸಿಂಗ್‌ ವಿಜ್ಞಾನಿಯೋ ಅಥವಾ ಮಹಾನ್​ ವೈದ್ಯರೋ ಎಂದು ಅವರು ಟೀಕಿಸಿದ್ದಾರೆ.

ಸದ್ಯ, ಸಜ್ನ್ ಸಿಂಗ್‌ ವರ್ಮಾ ಅವರ ಹೇಳಿಕೆಗೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್‌ ನಾಯಕ ಟ್ರೋಲ್‌ ಆಗುತ್ತಿದ್ದಾರೆ.


ಇದನ್ನೂ ಓದಿ: ‘ರೈತರಿಗೆ ಏನು ಬೇಕು ಎಂದು ತಿಳಿದಿಲ್ಲ, ಅವರನ್ನು ಪ್ರಚೋದಿಸಲಾಗುತ್ತಿದೆ’ : ಹೇಮಾ ಮಾಲಿನಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights