ಜ. 16ರಿಂದ ಕೋವಿಡ್‌ ಲಸಿಕೆ ವಿತರಣೆ ಆರಂಭ; ಲಸಿಕೆ ಪಡೆಯುವ ಮುನ್ನ ತಿಳಿಯಬೇಕಾದ ಮಾಹಿತಿಗಳು ಹೀಗಿವೆ!

ಜಗತ್ತನ್ನೇ ಕಾಡಿದ್ದ ಕೊರೊನಾಗೆ ಭಾರತದಲ್ಲಿ ಲಸಿಕೆ ಸಿದ್ದಪಡಿಸಲಾಗಿದೆ ಎಂದು ಹೇಳಲಾಗಿದ್ದು, ದೇಶಾದ್ಯಂತ ನಾಳೆ (ಜನವರಿ 16)ಯಿಂದ ಕೊರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗುತ್ತಿದೆ. ಪ್ರಧಾನಿ ಮೋದಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಕೋವಿಡ್‌ ಲಸಿಕೆ ವಿತರಣೆಯ ಬಗ್ಗೆ ಮಾಹಿತಿ ಪಡೆಯಲು ಮತ್ತು ಮೇಲ್ವಿಚಾರಣೆಗಾಗಿ ಕೋ-ವಿನ್‌ ಅಪ್ಲಿಕೇಶನ್ ಅನ್ನು ಸಹ ಮೋದಿ ಪ್ರಾರಂಭಿಸಲಿದ್ದಾರೆ.

ಯಾರು ಮೊದಲು ಲಸಿಕೆ ಪಡೆಯುತ್ತಾರೆ?

ರಾಷ್ಟ್ರವ್ಯಾಪಿ ಬೃಹತ್ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ದಿನ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟವರು ಮಾತ್ರ ಲಸಿಕೆ ಪಡೆಯಬಹುದು.

ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ಇಲ್ಲ.

ಎಷ್ಟು ವ್ಯಾಕ್ಸಿನೇಷನ್ ಕೇಂದ್ರಗಳು ಇರುತ್ತವೆ?

ಸುಮಾರು 2,934 ಇನಾಕ್ಯುಲೇಷನ್ (ಲಸಿಕೆ ವಿತರಣೆ) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೆಹಲಿ ಸರ್ಕಾರವು 75 ಆಸ್ಪತ್ರೆಗಳನ್ನು ಗೊತ್ತುಪಡಿಸಿದೆ. ಅಲ್ಲಿ ಕೋವಿಡ್ ಲಸಿಕೆಗಳ ಚುಚ್ಚುಮದ್ದನ್ನು ಜನವರಿ 16 ರಿಂದ ಪ್ರಾರಂಭಿಸಲಾಗುವುದು.

ಮೊದಲ ಆದ್ಯತೆ ಯಾರಿಗೆ?

50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆದ್ಯತೆ ನೀಡಲಾಗಿದೆ.

ಅಸ್ವಸ್ಥತೆ ಹೊಂದಿರುವವರು. ಅದರಲ್ಲಿಯೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎಂದು ಹೇಳಲಾಗಿದೆ.

ಆದ್ಯತೆಯ ಜನರಿಗೆ ವ್ಯಾಕ್ಸಿನೇಷನ್ ಮುಗಿದ ನಂತರ, ಉಳಿದ ಜನರಿಗೆ ಚುಚ್ಚುಮದ್ದು ನೀಡಲಾಗುತ್ತದೆ.

ಇದನ್ನೂ ಓದಿ: ಕೊವ್ಯಾಕ್ಸಿನ್‌ ಪಡೆದಿದ್ದ ಸ್ವಯಂಸೇವಕ ಸಾವು; ವಿಷ ಸೇವಿಸಿರಬಹುದೆಂಬ ಶಂಕೆ!

ವ್ಯಾಕ್ಸಿನೇಷನ್ ಪ್ರಕ್ರಿಯೆ ಏನು?

ಲಸಿಕೆ ನೀಡಿದ ನಂತರ, ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಪರೀಕ್ಷಿಸಲು ಲಸಿಕೆ ಪಡೆದವರನ್ನು 30 ನಿಮಿಷಗಳ ಕಾಲ ವೀಕ್ಷಣಾ ಕೊಠಡಿಯಲ್ಲಿ ಇರಿಸಲಾಗುತ್ತದೆ.

ಒಬ್ಬ ವ್ಯಕ್ತಿಗೆ ಎರಡು ಬಾರಿ ಲಸಿಕೆ ನೀಡಲಾಗುವುದು. 28 ದಿನಗಳಲ್ಲಿ ಎರಡು ಡೋಸ್ ಲಸಿಕೆಗಳನ್ನು ನೀಡಲಾಗುತ್ತದೆ. ಒಂದು ಡೋಸ್‌ ನೀಡಿದ 14 ದಿನಗಳ ನಂತರ ಮೊತ್ತೊಂದು ಡೋಸ್‌ ನೀಡಲಾಗುವುದು. ಎರಡೂ ಬಾರಿಯೂ ಒಂದೇ ಕಂಪನಿಯ ಲಸಿಕೆ ಪಡೆಯಬೇಕು.

ಮೊದಲ ಡೋಸ್‌ ಪಡೆದ ಬಳಿಕ ಏನಾದರೂ ಆನಾರೋಗ್ಯ ಉಂಟಾದರೆ ಎರಡನೇ ಲಸಿಕೆ ಪಡೆಯುವಂತಿಲ್ಲ.

ಲಸಿಕೆ ಪಡೆದ ವ್ಯಕ್ತಿಯಲ್ಲಿ ಏನಾದರೂ ಸೈಡ್‌ ಎಫೆಕ್ಟ್ ಕಂಡು ಬಂದರೆ ಅದಕ್ಕೆ ಕಂಪನಿಗಳೇ ಜವಬ್ದಾರರು.


ಇದನ್ನೂ ಓದಿ: ಭೋಪಾಲ್‌ ಅನಿಲ ದುರಂತ ಸಂತ್ರಸ್ಥರ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ ದಾಳಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights