ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿ ಸಾವು : ತನಿಖಾ ವರದಿ ಏನಿತ್ತು?

ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಿಖೆ ನಡೆದಿದ್ದು ಸಾಕಷ್ಟು ವಿಚಾರಗಳು ತಿಳಿದು ಬಂದಿವೆ.

ಕೋವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಮಾಡಿದ ಐದು ದಿನಗಳ ನಂತರ ರಾಜಸ್ಥಾನ ಚಿತ್ತೋರ್‌ಗಢ ಜಿಲ್ಲೆಯ ಸುರೇಶ್ ಚಂದ್ರ ಶರ್ಮಾ ಎನ್ನುವ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇದಕ್ಕೆ ಕಾರಣ ಕೊರೊನಾ ಲಸಿಕೆ ಎನ್ನುವ ಅನುಮಾನಗಳು ಮೂಡಿದ್ದು ಆದರೆ ತನಿಖೆಯಿಂದ ಸಾಕಷ್ಟು ವಿಚಾರಗಳು ಬಹಿರಂಗಗೊಂಡಿದೆ.

ರೋಗನಿರೋಧಕ (ಎಇಎಫ್‌ಐ) ಸಮಿತಿ ಸಹಾಯಕ ಆಡಳಿತಾಧಿಕಾರಿ ಸುರೇಶ್ ಚಂದ್ರ ಶರ್ಮಾ ಅವರ ಸಾವಿನ ಬಗ್ಗೆ ತನಿಖಾ ವರದಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಜಿಲ್ಲಾ ಎಇಎಫ್‌ಐ ಸಮಿತಿಯು ತನ್ನ ವರದಿಯಲ್ಲಿ ಶರ್ಮಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ದೀರ್ಘಕಾಲದಿಂದ ಮೂತ್ರಪಿಂಡದ ಸಮಸ್ಯೆ ಇತ್ತು. ಇದು ಮಿದುಳಿನ ರಕ್ತಸ್ರಾವಕ್ಕೆ ಕಾರಣವಾಗಿ ಶರ್ಮಾ ಸಾವನ್ನಪ್ಪಿದ್ದಾರೆಂದು ತಿಳಿಸಿದೆ.

ಸುರೇಶ್ ಚಂದ್ರ ಶರ್ಮಾ ಜನವರಿ 21 ರಂದು ರಾಜಸ್ಥಾನದ ಉದಯಪುರ ಜಿಲ್ಲೆಯ ಗೀತಾಂಜಲಿ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. ಇವರು ಕಳೆದ ಮೂರು ವರ್ಷಗಳಿಂದ ಗುಜರಾತ್‌ನ ನಾಡಿಯಾಡ್‌ನಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಅಧಿಕ ರಕ್ತದೊತ್ತಡ ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಉಂಟಾದ ಗಂಭೀರ ಮೆದುಳಿನ ರಕ್ತಸ್ರಾವದಿಂದಾಗಿ ಸುರೇಶ್ ಚಂದ್ರ ಶರ್ಮಾ ಅವರ ನಿಧನವು ಸಂಭವಿಸಿದೆ. ಕೋವಿಡ್ -19 ವ್ಯಾಕ್ಸಿನೇಷನ್‌ಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ತೋರಗಢದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಸಹಿ ಮಾಡಿದ ಪ್ರಕಟಣೆಯಲ್ಲಿ ತೀರ್ಮಾನಿಸಲಾಗಿದೆ.

ರಾಜಸ್ಥಾನದಲ್ಲಿ ಮೊದಲ ಹಂತದ ಕೊರೋನವೈರಸ್ ಲಸಿಕೆ ಪ್ರಾರಂಭವಾದ ದಿನವಾದ ಜನವರಿ 16 ರಿಂದ ಇದುವರೆಗೆ 44 ಎಇಎಫ್‌ಐ ಪ್ರಕರಣಗಳು ದಾಖಲಾಗಿವೆ. ಜನವರಿ 19 ರವರೆಗೆ 32,379 ಜನರಿಗೆ ರಾಜಸ್ಥಾನದಲ್ಲಿ ಕೊರೋನವೈರಸ್ ಲಸಿಕೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights