447 ಎಕರೆ ಗೋಮಾಳ ಗುಳುಂ: ಒತ್ತುವರಿ ಭೂಮಿಯಲ್ಲಿ 258 ಅನಧಿಕೃತ ಕಟ್ಟಡಗಳ ನಿರ್ಮಾಣ!
ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಹುಲಿಮಂಗಲದ ಸರ್ವೆ ನಂಬರ್ 154 ಸೇರಿದಂತೆ ಒಟ್ಟು 4 ಸರ್ವೇ ನಂಬರ್‌ಗಳಲ್ಲಿ 447 ಎಕರೆ 48 ಗುಂಚೆ ವಿಸ್ತೀರ್ಣದ ಮೂಲ ಗೋಮಾಳ ಕಬಳಿಕೆಯಾಗಿದೆ ಎಂದು ತಿಳಿದು ಬಂದಿದೆ.
ಹಲವಾರು ಜನರು ಗೋಮಾಳದಲ್ಲಿ ಕಟ್ಟಡಗಳನ್ನು ಕಟ್ಟಿದ್ದಾರೆ. ಅವರಿಗೆ ಗೋಮಾಳ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರಾರ ಬಳಿಯೂ ಮಂಜೂರಾತಿ ದಾಖಲೆಗಳೇ ಲಭ್ಯವಿಲ್ಲ. ಈ ಕಬಳಿಕೆ ಆಗಿರುವ ಗೋಮಾಳದಲ್ಲಿ 258ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಕಂದಾಯ ಸಚಿವರಾದ ಆರ್ ಅಶೋಕ್ ಅವರಿಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿದ್ದರು.
ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಕಂದಾಯ ಸಚಿವರು, ಅನೇಕಲ್ ತಾಲೂಕಿನ ಜಿಗಣಿ ಹೋಬಳಿಯೊಂದರಲ್ಲಿ 469 ಎಕರೆ ವಿಸ್ತೀರ್ಣದ ಮೂಲ ಗೋಮಾಳ ಕಬಳಿಕೆಯಾಗಿದೆ ಎಂದು ಹೇಳಿದ್ದಾರೆ. ಇದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹೊಣೆಗೇಡಿತನವನ್ನು ಬಯಲು ಮಾಡಿದೆ.
ಹುಲಿಮಂಗಲ ಜಿಗಣಿ ಹೋಬಳಿಯ ಸರ್ವೆ ನಂಬರ್ 154, 155, 156, 350ರಲ್ಲಿ ಒಟ್ಟು 469 ಎಕರೆ 57 ಗುಂಟೆ ವಿಸ್ತೀರ್ಣದ ಮೂಲ ಗೋಮಾಳವಿದೆ. ಈ ಪೈಕಿ ಮೂರು ಸರ್ವೆ ನಂಬರ್‌ಗಳಲ್ಲಿನ ಒಟ್ಟು 447 ಎಕರೆ 48 ಗುಂಟೆ ವಿಸ್ತೀರ್ಣದ ಮೂಲ ಗೋಮಾಳದಲ್ಲಿ 66 ಮಂದಿಗೆ ಮಂಜೂರಾಗಿರುವ ಕುರಿತು ದಾಹಿಲೆಗಳೇ ಇಲ್ಲ.
ಇದನ್ನೂ ಓದಿ: ಸಿಸಿಟಿವಿ ಟೆಂಡರ್: ಸರ್ಕಾರವನ್ನೇ ದಿಕ್ಕು ತಪ್ಪಿಸುತ್ತಿದೆ ಪೊಲೀಸ್ ಇಲಾಖೆ? ನಿಂಬಾಳ್ಕರ್ ಪತ್ರ ಬಿಚ್ಚಿಟ್ಟ ಸತ್ಯ?
ಸರ್ವೆ ನಂಬರ್ 154ರಲ್ಲಿ ಇರುವ 177 ಎಕರೆ 23 ಗುಂಟೆ ವಿಸ್ತೀರ್ಣದ ಮೂಲ ಗೋಮಾಳ ಮಂಜೂರಿಯಾಗಿದೆ. ಎಂದು ಹೇಳಲಾಗುತ್ತಿದೆಯಾದರೂ ಮಂಜೂರಿ ದಾಖಲೆಗಳೇ ಲಭ್ಯವಿಲ್ಲ ಎಂದು ಸಚಿವ ಆರ್ ಅಶೋಕ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಸರ್ವೆ ನಂಬರ್ 755ರಲ್ಲಿ 125 ಎಕರೆ 17 ಗುಂಚೆ ವಿಸ್ತೀರ್ಣದಲ್ಲಿ ಮೂಲ ಗೋಮಾಳವನ್ನು 32 ಮಂದಿಗೆ ಮಂಜೂರಾಗಿರುವ ಕುರಿತು ಮಂಜೂರಿ ದಾಹಿಲೆಗಳೇ ಲಭ್ಯವಿಲ್ಲ. ಈ ಪ್ರದೇಶದಲ್ಲಿ ಒಟ್ಟು ನಿರ್ಮಿಸಿರುವ 45 ಕಟ್ಟಡಗಳ ಪೈಕಿ 41 ಕಟ್ಟಡಗಳು ಅನಧಿಕೃತ ಎಂಬುದು ಉತ್ತರದಿಂದ ಗೊತ್ತಾಗಿದೆ.
ಅದೇ ರೀತಿ ಸರ್ವೆ ನಂಬರ್ 156ರಲ್ಲಿ ಒಟ್ಟು 145 ಎಕರೆ 08 ವಿಸ್ತೀರ್ಣದ ಗೋಮಾಳವಿದೆ. ಇದನ್ನು 34. ಮಂದಿಗೆ ಮಂಜೂರಿ ಮಾಡಲಾಗಿದೆ ಎಂದು ಇಲಾಖೆ ಹೇಳಿದ್ದರೂ ಈ ಪೈಕಿ ಯಾವುದೇ ಮಂಜೂರಿ ದಾಹಿಲಾತಿಗಳೇ ಲಭ್ಯವಿಲ್ಲ. 145 ಎಕರೆ ವಿಸ್ತೀರ್ಣದ ಈ ಗೋಮಾಳದಲ್ಲಿ ಅನಧಿಕೃತವಾಗಿ 217 ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಈ ಜಮೀನಿಗೆ ಭೂ ಪರಿವರ್ತನೆಯೇ ಆಗಿಲ್ಲ. ಆದರೂ 217 ಕಟ್ಟಡಗಳನ್ನು ನಿರ್ಮಿಸಿರುವುದು ಅಚ್ಚರಿ ಮೂಡಿಸಿದೆ.

ಸರ್ವೆ ನಂಬರ್ 350ರಲ್ಲಿ ಒಟ್ಟು 22 ಎಕರೆ 09 ಗುಂಟೆ ವಿಸ್ತೀರ್ಣದ ಮೂಲ ಗೋಮಾಳವಿದ್ದು, ಇದರಲ್ಲಿ 2 ಎಕರೆ 15 ಗುಂಚೆ ವಿಸ್ತೀರ್ಣದ ಜಮೀನನ್ನು ಸಾರ್ಪಜನಿಕ ರಸ್ತೆಗೆ ಕಾಯ್ದಿರಿಸಲಾಗಿದೆ. ಉಳಿದ 17 ಎಕರೆ 17 ಗುಂಚೆ ವಿಸ್ತೀರ್ಣದ ಜಮೀನು ಹರಾಜು ಪ್ರಕ್ರಿಯೆ ನಡಸುವ ಸಂಬಂಧದ ಪ್ರಸ್ತಾವನೆ ಜಿಲ್ಲಾಧಿಕಾರಿ ಹಂತದಲ್ಲಿದೆ ಎಂದು ಸಚಿವ ಅಶೋಕ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಹಾಗೆಯೇ ಕೆ.ಆರ್ ಪುರಂ ವಿಧಾನಸಭೆ ಕ್ಷೇತ್ರದಲ್ಲಿನ ವಾರ್ಡ್ 81ರಲ್ಲಿನ ಸರ್ವೆ ನಂಬರ್ 199ರಲ್ಲಿ ಇರುವ ಸರ್ಕಾರಿ ಜಮೀನನ್ನು ಕಳಿಸಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಹೋಬಳಿಯ ಮಹದೇವಪುರ ಗ್ರಾಮದ ಸರ್ಪೆ ನಂಬರ್ 199ರಲ್ಲಿ. ಖರಾಬು ಬಂಡೆ ಜಮೀನಿದೆ. ಈ ಜಮೀನನ್ನು ಮಹೇಶ್ ಎಂಬುವರು ಸೇರಿದಂತೆ ಒಟ್ಟು 14 ಮಂದಿ ಕಬಳಿಕೆ ಮಾಡಿದ್ದಾರಲ್ಲದೆ ಅನಧಿಕೃತ. ಮನೆಗಳನ್ನೂ ನಿರ್ಮಿಸಿದ್ದಾರೆ ಎಂದು ಅಶೋಕ್ ಅವರು ಉತ್ತರ ನೀಡಿದ್ದಾರೆ.
ಗೋಮಾಳವೂ ಸೇರಿದಂತೆ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳಲು ಆಯಾ ತಾಲೂಕಿನ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಪಂಚಾಯ್ತಿ. ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿಯೇ ಆನೇಕಲ್ ತಾಲೂಕು ಸೇರಿದಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ವಿವಿಧೆಡೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆದರೂ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ. ಪಂಚಾಯತ್‌ರಾಜ್ ಇಲಾಖೆ ಎಚ್ಚಿತ್ತುಕೊಂಡಿಲ್ಲ.
ಕೃಪೆ: ದಿ ಫೈಲ್
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟ ಬಿಸಿ ಪಾಟೀಲ್; ಸಾಕ್ಷಿ ಇದ್ರೂ ರಾಜೀನಾಮೆ ಪಡೆಯುತ್ತಿಲ್ಲ ಏಕೆ?


ಕಂದಾಯ ಸಚಿವರೇ ಈ ಗೋಮಾಳ ಜಮೀನಿನ ಅಕ್ರಮ ಮಾಡಿರೋ ಹಾಗೆ ಕ್ಯಾಪ್ಷನ್ ಮಾಡಲಾಗಿದೆ ಆದರೆ ಸುದ್ದಿಯನ್ನ ಬಿಡುಗಡೆ ಮಾಡಿರೋದ ಕಂದಾಯ ಸಚಿವರು ಅಂತ ಓದಿದಾಗ ತಿಳಿಯುತ್ತೆ,ಮಾಧ್ಯಮದವರು ಸುದ್ದಿಯನ್ನ ಹೇಗೆ ಬೇಕಾದರೂ project ಮಾಡಬಲ್ಲರು ಅನ್ನೋದಿಕ್ಕೊಂದು ಉದಾಹರಣೆ
go mala ya golmal?>!< do you say???!
ಗೋಮಾಳ ಜಮೀನಿನಲ್ಲಿ ಮನೆಗಳನ್ನು ಅನಧಿಕೃತ ಎಂದು ಘೋಷಿಸಿರುವ ನೀವು ಈಗ ಅದೇ ಜಮೀನುಗಳ ಮನೆಗಳಿಗೆ ಹಕ್ಕುಪತ್ರ ನೀಡಿ. ವ್ಯಕ್ತಿಗಳಿಗೆ ತೊಂದರೆ ನೀಡದಂತೆ ಅವರಿಗೆ ಅವಕಾಶ ಮಾಡಿಕೊಡಿ ಇನ್ಯಾವ ಅಧಿಕಾರ ಮಾಡುವುದು ನೀವು. ನಿಮ್ಮ ಆಸ್ತಿಗೆ ಬಂದಿಲ್ಲ ತಾನೆ, ಸಾರ್ವಜನಿಕರ ಜಾಗ ಸಾರ್ವಜನಿಕರಿಗೆ ಮಿಸಲಾಗಿರಲಿ ಮನೆ ಕಟ್ಟಲು ಅವಕಾಶ ನೀಡಿ, ಅವರಿಗೆ ಯಾವ ಆಧಾರಗಳ ಬೇಕಾದನ್ನು ಹಕ್ಕುಪತ್ರಗಳನ್ನು ನೀಡಿ .