ಮುಂಬೈ ಗೋಡೌನ್‌ನಲ್ಲಿ ಬೃಹತ್ ಬೆಂಕಿ : 19 ಅಗ್ನಿಶಾಮಕದಳ ಸ್ಥಳಕ್ಕೆ ದೌಡು!

ಮುಂಬೈನ ಮನ್‌ಖುರ್ಡ್ ಪ್ರದೇಶದ ಗೋಡೌನ್‌ನಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಯಾಚರಣೆಗೆಂದು ಸ್ಥಳಕ್ಕೆ 19 ಅಗ್ನಿಶಾಮಕದಳ ದೌಡಾಯಿಸಿವೆ. ಈವರೆಗೆ ಯಾವುದೇ ಗಾಯಗಳ ವರದಿಯಾಗಿಲ್ಲ.

ಗೋಡೌನ್ ಸುತ್ತ ಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಇನ್ನೂ ಸ್ಥಳೀಯರು ಗೋಡೌನ್ ಸುತ್ತಲು ಸೇರಿದ್ದು ದೃಶ್ಯದಲ್ಲಿ ಕಾಣಬಹುದು. ಕೆಲವರು ರಕ್ಷಣೆಗೆ ಮುಂದಾಗಿದ್ದಾರೆ.

ಸ್ಥಳೀಯ ಅಗ್ನಿಶಾಮಕ ಇಲಾಖೆ ಪ್ರಕಾರ, ಇಂದು ಮಧ್ಯಾಹ್ನ 2.45 ರ ಸುಮಾರಿಗೆ ಈ ಘಟನೆ ನಡೆದಿದೆ. ಗೊಡೌನ್ ಸ್ಕ್ರ್ಯಾಪ್ ವಸ್ತುಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights