ಭಾನುವಾರ ತಮಿಳುನಾಡಿಗೆ ಮೋದಿ; ಪ್ರಧಾನಿ ವಿರುದ್ಧ ಶನಿವಾರವೇ #GoBackModi ಟ್ರೆಂಡಿಂಗ್!
ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲೇ ತಮಿಳುನಾಡು, ಬಂಗಾಳ, ಅಸ್ಸಾಂ, ಕೇರಳ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಪಕ್ಷವು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಚುನಾವಣೆಯನ್ನು ಎದುರಿಸಲು ಮುಂದಾಗಿದೆ. ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿ ಭಾರೀ ಪ್ರಯತ್ನ ಮಾಡುತ್ತಿದ್ದು, ಭಾನುವಾರ ಪ್ರಧಾನಿ ಮೋದಿ ದ್ರಾವಿಡರ ನಾಡಿಗೆ ಆಗಮಿಸಿಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರವೇ #GoBackModi (ಮೋದಿ ವಾಪಸ್ ಹೋಗಿ) ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಫೆಬ್ರವರಿ 14 ಪ್ರೇಮಿಗಳ ದಿನವು ತಮಿಳುನಾಡಿನ ಜನರಿಗೆ ಕರಾಳ ದಿನವಾಗಿದೆ. ಗೋ ಬ್ಯಾಕ್ ಮೋದಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
https://twitter.com/akshayamani12/status/1360465816236355585?s=20
ತಮಿಳು ನಟಿ ಓವಿಯಾ ಮೋದಿ ವಾಪಾಸು ಹೋಗು ಎಂದು ಟ್ವೀಟ್ ಮಾಡಿದ್ದಾರೆ. ಓವಿಯಾ ಅವರು ಕನ್ನಡದ ಪ್ರಮುಖ ನಟ ಯಶ್ ನಾಯಕನಟನಾಗಿ ನಟಿರುವ ಕಿರಾತಕ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ ಅವರು ತಮಿಳು, ತೆಲುಗು, ಮಳಯಾಲಂ ಚಿತ್ರಗಳಲ್ಲೂ ನಟಿಸಿದ್ದರು.
— Oviyaa (@OviyaaSweetz) February 13, 2021
ಹೋರಾಟಗಾರ್ತಿ ಮೀನಾ ಕಂದಸ್ವಾಮಿ ಅವರು, “ಮೋದಿ ವಾಪಾಸು ಹೋಗು ಎನ್ನುವುದರಲ್ಲಿ ನಾವು ಒಂದು ದಿನ ಮುಂದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
Didn't know we are a day ahead on #GoBackModi.
— andolanjeevi dr. meena kandasamy || இளவேனில் (@meenakandasamy) February 13, 2021
ಅಮಾನುಲ್ಲಾ ಅವರು, 56 ಇಂಚು ಸುಮ್ಮನೆ ಹಾಳು ಎಂದು ಟ್ವೀಟ್ ಮಾಡಿದ್ದಾರೆ.
ಟ್ರೋಲ್ ಮಾಫಿಯಾ ಎಂಬ ಟ್ವಿಟ್ಟರ್ ಹ್ಯಾಂಡಲ್ ತಮಿಳು ಸಿನಿಮಾ ಹಾಸ್ಯ ದೃಶ್ಯಕ್ಕೆ ಮೋದಿಯ ಮುಖವನ್ನು ಎಡಿಟ್ ಮಾಡಿ, ಪ್ರಧಾನಿ ಮೋದಿ ತಮಿಳು ನಾಡಿಗೆ ಬರುವಾಗೆಲ್ಲಾ ಅಲ್ಲಿನ ಜನರು ಹೇಗೆ ಸ್ವಾಗತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.
https://twitter.com/offl_trollmafia/status/1360467365134147588?s=20
56". Simply Waste#GoBackCowardModi #GoBackModi pic.twitter.com/oFbb4zg04Z
— அமானுல்லாஹ் சை.உ (@Amanullah_23) February 13, 2021
I am ready. Are you ready guys ?#GoBackModi pic.twitter.com/3l78YhBOVv
— இரா.அன்பு Msc Bed (@Anbuvasanth1991) February 13, 2021
ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆಗಾಗಿ 8 ಕೋಟಿ ಖರ್ಚು ಮಾಡಿದೆ ಮೋದಿ ಸರ್ಕಾರ!

