ಎರಡನೇ ಟೆಸ್ಟ್‌ನಲ್ಲಿ ಮೈಕೊಡವಿದ ಟೀಂ ಇಂಡಿಯಾ; ಶತಕ ಬಾರಿಸಿದ ರೋಹಿತ್‌; ನಗೆ ಬೀರಿದ ತಂಡ!

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮುಗ್ಗರಿಸಿದ್ದ ಟೀ ಇಂಡಿಯಾ, ಎರಡನೇ ಟೆಸ್ಟ್‌ನಲ್ಲಿ ಮೈಕೊಡವಿ ನಿಂತಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕದ ಸಹಾಯದಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಚೇತರಿಕೆ ಪಡೆದುಕೊಂಡಿದೆ. 70 ಓವರ್ ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟ ಅನುಭವಿಸಿರುವ ಟೀಂ ಇಂಡಿಯಾ 233 ರನ್ ಗಳಿಸಿದೆ.

ಭಾರತ ತಂಡದ ಇನ್ನೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್(0) ಹಾಗೂ ನಾಯಕ ವಿರಾಟ್ ಕೊಹ್ಲಿಯವರನ್ನು(0)ಬೇಗನೆ ಕಳೆದುಕೊಂಡಿತು. ಚೇತೇಶ್ವರ ಪೂಜಾರ 21 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ರೋಹಿತ್ ಅವರೊಂದಿಗೆ 2ನೇ ವಿಕೆಟ್‍ಗೆ 85 ರನ್ ಜೊತೆಯಾಟ ನಡೆಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗಡೆದ ಆಡಿದ ರೋಹಿತ್ 130 ಎಸೆತಗಳನ್ನು ಎದುರಿಸಿ 14 ಬೌಂಡರಿ, 2 ಸಿಕ್ಸರ್ ಗಳನ್ನು ಒಳಗೊಂಡ 7ನೇ ಶತಕ ಸಿಡಿಸಿದರು.

ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಛಾಪು ಮೂಡಿಸುತ್ತಿರುವ ರೋಹಿತ್ ಶರ್ಮಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2018ರ ಬಳಿಕ 106 ಇನಿಂಗ್ಸ್ ಗಳಲ್ಲಿ 19ನೇ ಶತಕ ಸಿಡಿಸಿದರು. ಯಾವ ಬ್ಯಾಟ್ಸ್ ಮನ್ ಕೂಡ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಇಷ್ಟೊಂದು ಶತಕ ಸಿಡಿಸಿಲ್ಲ.

ರೋಹಿತ್ 21 ಟೆಸ್ಟ್ ಇನಿಂಗ್ಸ್ ಗಳಲ್ಲಿ 4 ಶತಕ, 49 ಏಕದಿನ ಇನಿಂಗ್ಸ್ ಗಳಲ್ಲಿ 13 ಶತಕ ಹಾಗೂ 36 ಟಿ-20 ಅಂತರ್ ರಾಷ್ಟ್ರೀಯ ಇನಿಂಗ್ಸ್ ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ 120 ಅಂತರ್ ರಾಷ್ಟ್ರೀಯ ಇನಿಂಗ್ಸ್ ನಲ್ಲಿ 18 ಶತಕಗಳನ್ನುಸಿಡಿಸಿದ್ದರು.

Read Also: IPL 2021: ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ ಸಚಿನ್‌ ಪುತ್ರನ ಮೂಲ ಬೆಲೆ ಎಷ್ಟು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights