ಕುಸ್ತಿ ಅಖಾಡದಲ್ಲಿ ಗುಂಡಿನ ದಾಳಿ ಪ್ರಕರಣ : ಪ್ರಮುಖ ಆರೋಪಿ ಅರೆಸ್ಟ್!

ಹರ್ಯಾಣದ ರೋಹ್ಟಕ್ ನ ಕುಸ್ತಿ ಕೇಂದ್ರ(ಅಖಾಡ)ವೊಂದರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು 30 ವರ್ಷದ ಸುಖ್ವಿಂದರ್  ಎಂದು ಗುರುತಿಸಲಾಗಿದ್ದು ಈತನೂ ಕುಸ್ತಿ ತರಬೇತುದಾರನಾಗಿದ್ದಾನೆ. ಈತನನ್ನು ಸಮೈಪುರ್ ಬದ್ಲಿ ಮೆಟ್ರೋ ನಿಲ್ದಾಣದ ಬಳಿ ಮಧ್ಯಾಹ್ನ 2.30 ರ ಸುಮಾರಿಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆತನನ್ನು ದೆಹಲಿ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದ್ದು, ನಮ್ಮ ತಂಡಗಳು ಅವರೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ರೋಹ್ಟಕ್ ಎಸ್ಪಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಈಗ ಪ್ರೊಡಕ್ಷನ್ ವಾರಂಟ್‌ನಲ್ಲಿ ಆರೋಪಿಯನ್ನು ಹರಿಯಾಣಕ್ಕೆ ಕರೆತರಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಖಾಸಗಿ ಕಾಲೇಜೊಂದರ ಬಳಿಯಿರುವ ಕುಸ್ತಿ ಕೇಂದ್ರ, ಮೆಹರ್ ಸಿಂಗ್ ಅಖಾಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಈ ಬಗ್ಗೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights