ಬಿಜೆಪಿ ಕಟ್-ಮನಿ ಸಂಸ್ಕೃತಿಯನ್ನು ಕೊನೆಗೊಳಿಸುತ್ತದೆ; ಅಕ್ರಮ ವಲಸಿಗರನ್ನು ತಡೆಯುತ್ತದೆ: ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ “ಕಟ್-ಮನಿ” ಸಂಸ್ಕೃತಿಯನ್ನು ಪರಿಚಯಿಸಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದನ್ನು ಕೊನೆಗೊಳಿಸಿ ರಾಜ್ಯವನ್ನು ಅಭಿವೃದ್ಧಿಯ ಹಾದಿಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ಪರಿವರ್ತನಾ ಯಾತ್ರೆಯು ರಾಜ್ಯದಲ್ಲಿ ಮುಖ್ಯಮಂತ್ರಿ, ಶಾಸಕರು ಅಥವಾ ಮಂತ್ರಿಯನ್ನು ಬದಲಿಸುವುದಲ್ಲ. ಬದಲಾಗಿ, ಅಕ್ರಮ ವಲಸಿಗರ ಒಳನುಸುಳುವಿಕೆಯನ್ನು ಕೊನೆಗೊಳಿಸಿ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವುದು ಎಂದು ಅವರು ಹೇಳಿದ್ದಾರೆ.
ನೀವು ಬಿಜೆಪಿಗೆ ಮತ ಚಲಾಯಿಸಿದರೆ, ಅಕ್ರಮ ವಲಸಿಗರಷ್ಟೇ ಅಲ್ಲ, ಗಡಿಯುದ್ದಕ್ಕೂ ಒಂದು ಪಕ್ಷಿಯೂ ಸಹ ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
‘”ಓಲೈಕೆಯ ರಾಜಕಾರಣ ಮಾಡುತ್ತಿರುವ ಬಂಗಾಳ ಸಿಎಂ ಅವರು ಜೈ ಶ್ರೀರಾಮ್ ಘೋಷಣೆಯ ಬಗ್ಗೆ ಕೋಪಗೊಳ್ಳುತ್ತಾರೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಕಾರ್ಯಕ್ರಮವೊಂದರಲ್ಲಿ ಮಾತನಾಡಲು ಬ್ಯಾನರ್ಜಿ ನಿರಾಕರಿಸಿದ್ದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಲಾಗಿತ್ತು” ಎಂದು ಅವರು ಹೇಳಿದ್ದಾರೆ.
“ಅಮ್ಫಾನ್ ಚಂಡಮಾರುತದ ನಂತರ ಕೇಂದ್ರ ಸರ್ಕಾರವು ಪರಿಹಾರ ನಿಧಿಗಳನ್ನು ಕಳುಹಿಸಿತ್ತು. ಆ ಹಣವನ್ನು ಟಿಎಂಸಿ ನಾಯಕರು ಕೈಬಿಟ್ಟರು. ನಾವು ಅಧಿಕಾರಕ್ಕೆ ಬಂದರೆ, ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತೇವೆ. ಚಂಡಮಾರುತಗಳು ಮತ್ತು ಪರಿಸರ ವಿಪತ್ತುಗಳಿಂದ ಜೀವಗಳನ್ನು ಉಳಿಸಲು ನಾವು ಕಾರ್ಯಪಡೆ ರಚಿಸುತ್ತೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಹುಲ್ಗಾಂಧಿ ಬಳಿ ಸರ್ಕಾರದ ವಿರುದ್ದ ಮಹಿಳೆ ಆರೋಪ; ನಮ್ಮನ್ನು ಹೊಗಳಿದ್ದಾರೆಂದು ಅನುವಾದಿಸಿದ ಪುದುಚೇರಿ ಸಿಎಂ!

