ಫ್ಯಾಕ್ಟ್‌ಚೆಕ್: AAP ನಾಯಕರು ಮಾಂಸ ಮತ್ತು ಮದ್ಯ ಸೇವನೆ ಮಾಡಿದ್ದು ನಿಜವೆ?

2022ರ ವರ್ಷಾಂತ್ಯಕ್ಕೆ ಗುಜರಾತ್ ನ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷ ಈಗಾಗಲೇ ರಾಜ್ಯದಲ್ಲಿ ಪ್ರಚಾರ ಆರಂಭಿಸಿದೆ. ಇದರ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಇಬ್ಬರು ತಮ್ಮ ಬೆಂಬಲಿಗರೊಂದಿಗೆ ಮದ್ಯ ಮತ್ತು ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಚಿತ್ರವು ವೈರಲ್ ಆಗಿದೆ.

ಒಟ್ಟು ನಾಲ್ಕು ಜನರಿದ್ದು ಪ್ರತಿಯೊಬ್ಬರ ತಟ್ಟೆಯಲ್ಲಿ ಕೆಂಪು ಮಾಂಸದಂತೆ ಕಾಣುವ ಆಹಾರ ಪದಾರ್ಥವನ್ನು ಕಾಣಬಹುದು, ಮತ್ತು ಲೋಟಗಳಲ್ಲಿ ಮದ್ಯದಂತೆ ಕಾಣುವ ಲೋಟಗಳು, ಭಗವಂತ್ ಮನ್  ಅವರು ತಮ್ಮ ಮುಂದೆ ಕುಳಿತಿರುವ ಪಕ್ಷದ ಕಾರ್ಯಕರ್ತನ ಕಡೆ ನೋಡುತ್ತಿರುವ ದೃಶ್ಯಗಳನ್ನು ಈ ಫೋಟೋದಲ್ಲಿ ನೋಡಬಹುದು.

ಫೋಟೋವನ್ನು ಶೇರ್ ಮಾಡಿದ ಅನೇಕರು, “ಮಫ್ಲರ್ ಗ್ಯಾಂಗ್ ಎಣ್ಣೆ ಹೊಡೆದು ಆನಂದಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅಮ್ ಆದ್ಮಿ ಪಕ್ಷದ ನಾಯಕರು ವೈರಲ್ ಪೋಸ್ಟ್‌ನಲ್ಲಿ ತೋರಿಸುವಂತೆ ಮದ್ಯಪಾನ ಮಾಡಿ ಮಾಂಸಾಹಾರ ಸೇವಿಸುತ್ತಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡದಾಗ ವೈರಲ್ ಚಿತ್ರವನ್ನು ಹೋಲುವ ಮೂಲ ಫೋಟೋವನ್ನು ಕೆಲವು ತಿಂಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ನಂತರ ಮೂಲ ಫೋಟೋಗೆ  ಮಾಂಸ ಮತ್ತು ಮದ್ಯದ ಡಿಜಿಟಲ್ ಚಿತ್ರಗಳನ್ನು ಸೇರಿಸಿ ಎಡಿಟ್ ಮಾಡಲಾಗಿದೆ. ಹಾಗಾಗಿ ವೈರಲ್ ಆಗಿರುವ ಫೋಟೋಗಳು  ಡಿಜಿಟಲ್ ತಂತ್ರಜ್ಞಾನ ಸಹಾಯದಿಂದ ಮಾರ್ಪಡಿಸಲಾಗಿದೆ ಎಂದು ಖಚಿತವಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ  ನವೆಂಬರ್ 22, 2021 ರಂದು ಮೂಲ ಫೋಟೋವನ್ನು ಸೆರೆಹಿಡಿಯಲಾಗಿದೆ. ಆದರೆ ಈ ಮೂಲ ಫೋಟೋದಲ್ಲಿ ಮದ್ಯದ ತುಂಬಿದ ಲೋಟಗಳಾಗಲಿ ಅಥವಾ ಮಾಂಸಾಹಾರ ಬಡಿಸಿದ ತಟ್ಟೆಗಳ ಬಾಟಲಿಗಳ ಯಾವ ಗುರುತು ಇಲ್ಲ.

ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ಮನೆಗೆ ಎಎಪಿ ಮುಖ್ಯಸ್ಥರನ್ನು ಪ್ರೀತಿಯಿಂದ ಊಟಕ್ಕೆ ಆಹ್ವಾನಿಸಿದ್ದರು. ಅವರ ಮನೆಯಲ್ಲಿ ಊಟ ಮಡುವಾಗ ಫೋಟೋಗಳನ್ನು ಸೆರೆಹಿಡಿಯಲಾಗಿದೆ ಎಂದು  ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಲೂಧಿಯಾನದಲ್ಲಿ ಕೇಜ್ರಿವಾಲ್ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಎಂದು ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಆಮ್ ಆದ್ಮಿ ಪಕ್ಷದ ನಾಯಕರು ಮಾಂಸಾಹಾರ ಸೇವಿಸಿ, ಮದ್ಯ ಕುಡಿದರೂ ಅದು ಅಪರಾಧವೇನೂ ಅಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

TOI  ಹಂಚಿಕೊಂಡಿರುವ ವೀಡಿಯೊದಲ್ಲಿ ಚಾಲಕನ ಕುಟುಂಬದ ಸದಸ್ಯರ ಮತ್ತು ಕೇಜ್ರಿವಾಲ್ ನಡುವೆ ಸಂಭಾಷಣೆ ನಡೆದಿದೆ ಎಂದು ಹೇಳಿಕೆಯೊಂದಿಗೆ ವರದಿಯಾಗಿದೆ. ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಅಕೌಂಟ್‌ನಿಂದ ಮೂಲ ಮತ್ತು ಹೆಚ್ಚಿನ ರೆಸಲ್ಯೂಶನ್ ಚಿತ್ರವನ್ನು ಅಪ್‌ ಲೋಡ್‌ ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ನವೆಂಬರ್ 22, 2021 ರಂದು ಆಟೋ ರಿಕ್ಷಾ ಚಾಲಕರೊಬ್ಬರ ಮನೆಯಲ್ಲಿ ಊಟ ಮಾಡುತ್ತಿರುವ  ಮೂಲ ಫೋಟೋವನ್ನು ಎಡಿಟ್ ಮಾಡಿ ಮಾಂಸ ಮತ್ತು ಮದ್ಯ ತುಂಬಿದ ಡಿಜಿಟಲ್ ಚಿತ್ರಗಳನ್ನು ಸೇರಿಸಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೃಪೆ: ಇಂಡಿಯಾ ಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೇಸಿಗೆಯಲ್ಲಿ ವಾಹನಗಳಿಗೆ ಫುಲ್ ಟ್ಯಾಂಕ್ ಇಂಧನ ತುಂಬಿಸಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights