ಬಿಜೆಪಿಯಲ್ಲಿ ಮುಗಿಯದ ಸಂಘರ್ಷ; ನಾಯಕತ್ವ ಬದಲಾವಣೆಯ ಭಿನ್ನರಾಗಕ್ಕೆ ಟ್ವಿಸ್ಟ್‌!

ಕೊರೊನಾ ಎರಡನೇ ಅಲೆಯ ಭೀಕರತೆಯ ನಡುವೆಯೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಸಂಘರ್ಷ ಭುಗಿಲೆದ್ದಿದೆ. ಇತ್ತೀಚೆಗೆ ಹಲವಾರು ಸಚಿವ – ಶಾಸಕರ ಹೇಳಿಕೆಗಳಿಂದ ಪಕ್ಷದಲ್ಲಿ ಅಂತರ್‌ ಕಲಹ ಮುಗಿದಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಈ ಚರ್ಚೆಗೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.

ನಾಯಕತ್ವ ಬದಲಾವಣೆ ಮತ್ತು ಶಾಸಕರ ಅಭಿಪ್ರಾಯಗಳ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ರಾಜಕೀಯ ಸಚೇತಕ ವಿ. ಸುನಿಲ್‌ಕುಮಾರ್‌, “ಎಲ್ಲ ಶಾಸಕರ ಅಭಿಪ್ರಾಯ ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು” ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಠೀಲ್‌ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರನ್ನು ಒತ್ತಾಯಿಸಿದ್ದಾರೆ.

ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳು ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯವೂ ಅಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಅಭಿಪ್ರಾಯಗಳನ್ನು ಆಲಿಸಲು ಪಕ್ಷದ ವರಿಷ್ಠರು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಕೆಲವೇ ತಿಂಗಳುಗಳ ಹಿಂದೆ ಸುನೀಲ್ ಕುಮಾರ್ ಪಕ್ಷದ ಮುಖಂಡರಿಗೆ ಸಭೆ ಕರೆಯಲು ಮತ್ತು ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದರು. ಆ ಸಂದರ್ಭದಲ್ಲಿ ಸರ್ಕಾರ ಮತ್ತು ರಾಜ್ಯ ಘಟಕದ ನಡುವಿನ ಸಮನ್ವಯದ ಕೊರತೆಯ ಬಗ್ಗೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿಗಳ ನಿರ್ಧಾರಗಳು ಪಕ್ಷದಲ್ಲಿ ಅನೇಕರನ್ನು ನಿರಾಶೆಗೊಂಡಿದ್ದರು. ಇದೀಗ ನಾಕತ್ವ ಬದಲಾವಣೆಯ ಬಗ್ಗೆ ಚರ್ಚೆ ಮುನ್ನೆಲೆಯಲ್ಲಿದ್ದು, ಈಗಲೂ ಪ್ರತ್ಯೇಕ ಸಭೆಗಾಗಿ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಸಹಿ ಅಭಿಯಾನವನ್ನು ಆಯೋಜಿಸುತ್ತಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುನೀಲ್ ಕುಮಾರ್, ಒಬ್ಬ ಶಾಸಕರ ಹೇಳಿಕೆಯು ಎಲ್ಲಾ ಶಾಸಕರ ನಿಲುವು ಎಂದು ಒಬ್ಬರು ಭಾವಿಸಬಾರದು ಎಂದಿದ್ದರು. ಯಾರಾದರೂ ಮಾಧ್ಯಮದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ, ಇದು ಜನಪ್ರಿಯ ಅಭಿಪ್ರಾಯ ಎಂದು ಅರ್ಥವಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಮರಳುಗಾಡಿನಲ್ಲಿ ಸಿಗದ ನೀರು; ಬಾಯಾರಿಕೆಯಿಂದ 5 ವರ್ಷದ ಬಾಲಕಿ ಸಾವು; ಪ್ರಜ್ಞಾಹೀನ ಸ್ಥಿತಿಯಲ್ಲಿ ಅಜ್ಜಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights