3 ವರ್ಷದಲ್ಲಿ ಬೀದಿ ನಾಯಿ ಹಿಡಿಯಲು ನಗರಸಭೆ ವ್ಯಯಿಸಿದ್ದು 47 ಲಕ್ಷ ರೂ!; ಒಂದು ನಾಯಿಗೆ ಹಿಡಿಯಲು 743 ರೂ.!

ಬೀದಿ ನಾಯಿಗಳನ್ನು ಹಿಡಿಯಲು ಬೆಳಗಾವಿಯ ನಗರ ಪಾಲಿಕೆಯ ಮೂರು ವರ್ಷದಲ್ಲಿ ಬರೋಬ್ಬರಿ 47 ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ ಎಂದು ಆರ್‌ಟಿಐ ಮೂಲಕ ತಿಳಿದು ಬಂದಿದೆ.

ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿ ಕೋರಿದ್ದ ಆರ್‌ಟಿಐನಿಂದಾಗಿ, 2014-15, 2017-18 ಹಾಗೂ 2019-20ನೇ ಸಾಲಿನಲ್ಲಿ ಬೀದಿನಾಯಿಗಳನ್ನು ಹಿಡಿಯಲು ನಗರ ಸಭೆ 47 ಲಕ್ಷ  ರೂ ವೆಚ್ಚ ಮಾಡಿದೆ ಎಂಬುದು ಬಹುರಂಗವಾಗಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಇಷ್ಟು ಹಣ ವೆಚ್ಚ ಮಾಡಲಾಗಿದೆ. 2014-15ರಲ್ಲಿ 3,944 ನಾಯಿಗಳನ್ನು ಹಿಡಿಯಲಾಗಿದೆ. ಆಗ, 25,65,805 ರೂ ವ್ಯಯಿಸಲಾಗಿದೆ. 2017-18ರಲ್ಲಿ 972 ನಾಯಿಗಳನ್ನು ಹಿಡಿಯಲು 6,97,220 ರೂ ಮತ್ತು 2019-20ರಲ್ಲಿ 1,598 ನಾಯಿಗಳನ್ನು ಹಿಡಿಯಲು 14,95,531 ರೂ ವೆಚ್ಚ ಮಾಡಲಾಗಿದೆ.

ಈ ವೆಚ್ಚವನ್ನು ತಾಳೆ ಹಾಕಿದರೆ ಪ್ರತಿ ನಾಯಿ ಹಿಡಿದು ಸಾಗಿಸಲು ಸರಾಸರಿ 730 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ, ನಾಯಿಗಳ ಉಟಪಳ ನಿವಾರಣೆಯಾಗಿಲ್ಲ. ಶಾಹೂನಗರ, ಅಜಂನಗರ, ನೆಹರೂ ನಗರ, ಸದಾಶಿವನಗರ ಸೇರಿದಂತೆ ನಗರದ ಬಹತೇಕ ಕಡೆಗಳಲ್ಲಿ ಬೀದಿನಾಯಿಗಳ ಹಿಂಡು ಕಂಡುಬರುತ್ತಿವೆ ಎಂದು ಸ್ಥಳೀಯ ತಿಳಿಸಿದ್ದಾರೆ.

Read Also: ಲಾಕ್‌ಡೌನ್‌ನಿಂದ ಸಿಗಲಿದೆ ರಿಲೀಫ್‌?; ಮೂರು ಹಂತಗಳಲ್ಲಿ ಅನ್‌ಲಾಕ್‌ ಪ್ರಕ್ರಿಯೆಗೆ ಸಿದ್ಧತೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights