ಫ್ಯಾಕ್ಟ್‌ಚೆಕ್: PFI ರ್ಯಾಲಿಯ ಹಳೆಯ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ತಿರುಚಿದ ಬಲಪಂಥೀಯರು

ಕೇರಳದಲ್ಲಿ ಸಾವಿರಾರು ಸಂಖ್ಯೆಯ ಸಮವಸ್ತ್ರಧಾರಿಗಳು ಶಿಸ್ತುಬದ್ಧವಾಗಿ ರ್ಯಾಲಿ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ” ಕೇರಳದಲ್ಲಿ ಮುಸ್ಲಿಮರ ಖಾಸಗಿ ಸೇನೆಯ ಸದಸ್ಯರು ನಡೆಸುತ್ತಿರುವ ರ್ಯಾಲಿ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ.

ಮೆರವಣಿಗೆಯ ಮುಂದೆ ಮಲಯಾಳಂನಲ್ಲಿ “ಯೂನಿಟಿ ಮಾರ್ಚ್” ಎಂಬ ಬ್ಯಾನರ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಹಾಗಿದ್ದರೆ ಮೆರವಣಿಗೆಯು ಮುಸ್ಲಿಂಮರು ಖಾಸಗಿ ಸೈನ್ಯ ರಚಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಯೂನಿಟಿ ಮಾರ್ಚ್’ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಎಂಬ ಪದಗಳನ್ನು  ಕ್ಲೂ ನಂತೆ ಬಳಸಿ ಕೀವರ್ಡ್ ಸರ್ಚ್ ಮಾಡಿದಾಗ, ವೈರಲ್ ವೀಡಿಯೊಗೆ ಸಂಬಂಧಿಸಿದ ಮೂಲ ವೀಡಿಯೊಗಳನ್ನು ದೊರಕಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಪ್‌ಲೋಡ್ ಮಾಡಿರುವ ಈ ವೀಡಿಯೊಗಳಲ್ಲಿ ಪಕ್ಷದ ಸದಸ್ಯರು ನೀಲಿ ಸಮವಸ್ತ್ರದಲ್ಲಿ ಧರಿಸಿ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಬ್ಯಾನರ್‌ನಲ್ಲಿ  “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯೂನಿಟಿ ಮಾರ್ಚ್” ಎಂದು ಮಲೆಯಾಳಂನಲ್ಲಿ ಬರೆಯಲಾಗಿದೆ.

ಫೆಬ್ರವರಿ 17, 2020 ರಂದು ರಾಷ್ಟ್ರವ್ಯಾಪಿ ಪಾಪ್ಯುಲರ್ ಫ್ರಂಟ್  ದಿನದ ಆಚರಣೆಯ ಭಾಗವಾಗಿ ಎರ್ನಾಕುಲಂನಲ್ಲಿ ಆಯೋಜಿಸಲಾದ ಯೂನಿಟಿ ಮಾರ್ಚ್ ಮತ್ತು ಮಾಸ್ ರ್ಯಾಲಿಯ  ದೃಶ್ಯಗಳಾಗಿವೆ . ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನವನ್ನು ಗುರುತಿಗಾಗಿ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿದೆ. ಭಾರತದಲ್ಲಿ ದ್ವೇಷದ ರಾಜಕಾರಣವನ್ನು ಸೋಲಿಸುವ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಸಂಪರ್ಕಿಸಿದಾಗ ವೈರಲ್ ವಿಡಿಯೋದಲ್ಲಿರಯವ ದೃಶ್ಯಾವಳಿಗಳು ಫೆಬ್ರವರಿ 17, 2020 ರಂದು ಎರ್ನಾಕುಲಂ ಜಿಲ್ಲೆಯಲ್ಲಿ ಪಾಪ್ಯುಲರ್ ಫ್ರಂಟ್ ನಡೆಸಿದ ಯೂನಿಟಿ ಮಾರ್ಚ್‌ನಿಂದ ಬಂದವು ಎಂದು ಖಚಿತಪಡಿಸಿದ್ದಾರೆ.

ರ್ಯಾಲಿಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಹೋರಾಟಗಾರ ಮತ್ತು ದಲಿತ್ ಕ್ಯಾಮೆರಾದ ವೆಬ್‌ಸೈಟ್ ಮುಖ್ಯಸ್ಥರಾದ ರವಿ ಚಂದ್ರನ್ ಬತ್ರನ್, ಪಾಪ್ಯುಲರ್ ಫ್ರಂಟ್ ಕೂಡ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಸಮರ್ಥವಾಗಿ ಎಂದು ಹೇಳಿದ್ದರು. ಪಾಪ್ಯುಲರ್ ಫ್ರಂಟ್ ಆಫ ಇಂಡಿಯಾ ಕೂಡ ಭಾರತದ ಒಂದು ಸಾಮಾಜಿಕ ಸಂಘಟನೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಎರ್ನಾಕುಲಂನಲ್ಲಿ 2020 ರ ಪಾಪ್ಯುಲರ್ ಫ್ರಂಟ್‌ನ “ಯೂನಿಟಿ ಮಾರ್ಚ್”ನ ಹಳೆಯ ವಿಡಿಯೋವನ್ನು ಬಳಸಿಕೊಂಡು ಮುಸ್ಲಿಮರ ಖಾಸಗಿ ಸೈನ್ಯ ಎಂದು ತಪ್ಪಾಗಿ ತೋರಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಕ್ರೆಸೆಂಡೋ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಳೆಯ ವಿಡಿಯೋವನ್ನು ಉತ್ತರ ಪ್ರದೇಶದ ಹಿಂದೂ, ಮುಸ್ಲಿಂ ಘರ್ಷಣೆ ಎಂದು ಸುಳ್ಳು ಹೇಳಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.