ಫ್ಯಾಕ್ಟ್‌ಚೆಕ್: ಹಳೆಯ ವಿಡಿಯೋವನ್ನು ಉತ್ತರ ಪ್ರದೇಶದ ಹಿಂದೂ, ಮುಸ್ಲಿಂ ಘರ್ಷಣೆ ಎಂದು ಸುಳ್ಳು ಹೇಳಿದ ಕಿಡಿಗೇಡಿಗಳು
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಹಿಳೆಯರ ಮೇಲೆ ಕಬ್ಬಿಣದ ಸಲಾಕೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ತಮ್ಮ ಮನೆಯ ಮುಂದೆ ಕಸ ಎಸೆಯಬೇಡಿ ಎಂದು ಹೇಳೀದ್ದಕ್ಕೆ ಅಬ್ದುಲ್ ಎಂಬ ವ್ಯಕ್ತಿ ಪಕ್ಕದ ಮನೆಯ ಹಿಂದೂ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಈ ಪೋಸ್ಟ್‌ನಲ್ಲಿ ಆಪಾದಿಸಲಾಗಿದೆ. ಪೋಸ್ಟ್‌ನಲ್ಲಿ ಘಟನೆ ಕುರಿತು ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡವ ವೇಳೆ ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ಜನವರಿ 2022 ರಲ್ಲಿ ಇದೇ ವೀಡಿಯೊವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸುದ್ದಿ ವಾಹಿನಿಗಳ ಪ್ರಕಾರ ಕೊತ್ವಾಲಿ ಕತ್ರಾ ಪ್ರದೇಶದಲ್ಲಿ ಕಸ ವಿಲೇವಾರಿ ವಿಚಾರಕ್ಕೆ ಮಹಿಳೆಯರ ನಡುವೆ ಸಣ್ಣ ಜಗಳ ಶುರುವಾಗಿದೆ ನಂತರ ಎರಡು ಮನೆಯ ಯುವಕರು ಜಗಳ ನಡೆಯುವ ವೇಳೆ ಮದ್ಯಪ್ರವೇಶ ಮಾಡಿದ್ದಾರೆ ಪರಸ್ಪರ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕ ಕಬ್ಭಿಣದ ಸಲಾಕೆಯಿಂದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿ ಆಗಿದೆ. ಆದರೆ ಹಲ್ಲೆಗೊಳಗಾದ ಮಹಿಳೆಯ ಕುಟುಂಬವು ಹಿಂದೂ ಧರ್ಮಕ್ಕೆ ಸೇರಿದವರು ಎಂದು ಸುದ್ದಿ ವಾಹಿನಿಗಳು ಎಲ್ಲಿಯೂ ವರದಿ ಮಾಡಿಲ್ಲ.

ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ
ಆದರೆ ಕೆಲವು ಕಿಡಿಗೇಡಿಗಳು ವಿಡಿಯೋವನ್ನು ಕೋಮು ದ್ವೇಷದ ಹೇಳಿಕೆಯೊಂದಿಗೆ ವೈರಲ್ ಮಾಡಿದ್ದಾರೆ, ಹಾಗಾಗಿ ಮಿರ್ಜಾಪುರ ನ ಮುಖ್ಯ ವಾಹಿನಿಗಳು ಘಟನೆಯ ಕುರಿತು ಸ್ಪಷ್ಟೀಕರಣಕ್ಕಾಗಿ ಮಿರ್ಜಾಪುರ ಹೆಚ್ಚುವರಿ ಎಸ್ಪಿ ಸಂಜಯ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿವೆ, ಅಧಿಕಾರಿಗಳ ಪ್ರಕಾರ ಘಟನೆಯು 16 ಜನವರಿ 2022 ರಂದು ನಡೆದಿದೆ ಎಂದು ದೃಢಪಡಿಸಿರುವ ಅವರು ಘಟನೆಯಲ್ಲಿ ಭಾಗಿಯಾದ ಆರೋಪಿಗಳು ಮತ್ತು ಸಂತ್ರಸ್ತರು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಆರೋಪಿ ಸಲ್ಮಾನ್ ಎಂದು ಉಲ್ಲೇಖಿಸಿದರು.
ಕಸ ವಿಲೇವಾರಿಯ ಕಾರಣಕ್ಕೆ ಕತ್ರಾ ಪ್ರದೇಶದ ಎರಡು ಮನೆಯವರ ನಡುವೆ ಹೊಡೆದಾಟ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಕೋಟ್ವಾಲಿ ಕತ್ರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಸಂಜಯ್ ಕುಮಾರ್ ಹೇಳಿದ್ದು. ಮಿರ್ಜಾಪುರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್‌ನಿಂದ ಸ್ಪಷ್ಟೀಕರಣ ನೀಡಿ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
#थाना_को0कटरा की पुलिस चौकी लालडिग्गी अन्तर्गत मोहल्ला बालकुंजल गिरी में दिनांकः 16.01.2022 को एक ही समुदाय के दो पक्षो के मध्य हुई मारपीट की घटना के वॉयरल हो रहे वीडियों के सम्बन्ध में #Addl_SP_City की बाइट।#UPPolice #Mzp pic.twitter.com/nUUcNSN4Fd
— Mirzapur Police (@mirzapurpolice) April 6, 2022
‘UPCOP’ ಎಂಬ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ಘಟನೆಯ ಎಫ್‌ಐಆರ್ ಪ್ರತಿಗಳು ಲಭ್ಯವಾಗಿದ್ದು, ಎಫ್‌ಐಆರ್‌ನಲ್ಲಿ ದೂರುದಾರರ ಹೆಸರನ್ನು ನಸ್ರೀನ್ ಬೇಗಂ ಎಂದು ನಮೂದಿಸಲಾಗಿದ್ದು, ಆರೋಪಿಗಳ ಹೆಸರು ಸಲ್ಮಾನ್, ಅಂಜುಮ್, ತಹ್ವರ್ ಪೈತಾರ್, ಬಿಟ್ಟಿ ತಮನ್ನಾ ಮತ್ತು ಉರ್ಫ್ ಆಯೇಶಾ ಎಂದು ನಮೂದಿಸಲಾಗಿದೆ. ಈ ಎಲ್ಲಾ ಆಧಾರಗಳ ಮೂಲಕ, ಹಲ್ಲೆಗೊಳಗಾದ ಮ್ತು ಹಲ್ಲೆ ಮಾಡಿದ ಎರಡು ಕುಟುಂಬವು ಮುಸ್ಲಿಂ ಸಮುದಾಯಕ್ಕೆ ಸೇರಿವೆ ಎಂದು ಖಾತ್ರಿಯಾಗಿದೆ. ವೈರಲ್ ವಿಡಿಯೊದಲ್ಲಿ ಹೇಳೀರುವಂತೆ ಹಿಂದೂ ಕುಟುಂಬದ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಜನವರಿ 2022 ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದ ಕೊತ್ವಾಲಿ ಕತ್ರಾ ಪ್ರದೇಶದಲ್ಲಿ ಎರಡು ಮುಸ್ಲಿಂ ಕುಟುಂಬಗಳ ನಡುವೆ ನಡೆದಿರುವ ವಿವಾದದ ವೀಡಿಯೊವನ್ನು ಕೋಮು ದ್ವೇಷದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಘಟನೆಯ ಆರೋಪಿಗಳು ಮತ್ತು ಸಂತ್ರಸ್ತರು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮಿರ್ಜಾಪುರ ಪೊಲೀಸರು ಈ ಮಾಹಿತಿಯನ್ನು 06 ಏಪ್ರಿಲ್ 2022 ರಂದು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ವೈಷಮ್ಯ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಪ್ ಗಾಯಕಿ ರಿಹಾನ್ನಾ ತನ್ನ ಮಗುವಿಗೆ ರೈತ ನಾಯಕ ರಾಕೇಶ್ ಟಿಕಾಯತ್ ಹೆಸರಿಡುವುದಾಗಿ ಹೇಳಿದ್ದು ನಿಜವೆ?

