ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ ಮಹೇಂದ್ರ ಸಿಂಗ್ ಧೋನಿಯ ಹೊಸ ಲುಕ್!

ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಎಂ ಎಸ್ ಧೋನಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮೇಕ್ ಓವರ್‌ಗಳಿಗೆ ಹೆಸರಾದ ಧೋನಿ ಸದ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.

ಹೊಸ ಹೊಸ ಹೇರ್ ಸ್ಟೈಲ್ ಗಳನ್ನು ಟ್ವಿಟರ್ ಮೂಲಕ ಶೇರ್ ಮಾಡುತ್ತಿದ್ದ ಎಂಎಸ್ ಧೋನಿ ಸದ್ಯ ಮತ್ತೇ ಹೊಸದಾದ ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಎಂಎಸ್ ಧೋನಿ ಸ್ಪಂಕಿ ಲುಕ್‌ನಲ್ಲಿರುವ ಹೊಸ ಫೋಟೋವನ್ನು ಪೋಸ್ಟ್ ಮಾಡಿದೆ. ಈ ಫೋಟೋ ವೈರಲ್ ಆಗಿದ್ದು, ಹೊಸ ಲುಕ್ ಗೆ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ.

ಎಂಎಸ್ ಧೋನಿಯ ಹೊಸ ಲುಕ್ ಯುಎಇಯಲ್ಲಿ ಒಂದು ತಿಂಗಳಲ್ಲಿ ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಎರಡನೇ ಹಂತದ ವಾಣಿಜ್ಯ ಭಾಗವಾಗಿರಲಿದೆ ಎಂದು ಊಹಾಪೋಹಗಳು ಹರಡಿವೆ.

2021 ರ ಐಪಿಎಲ್‌ನಲ್ಲಿ ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ (ಎಂಐ) ಅನ್ನು ಎದುರಿಸುವಾಗ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಅರ್ಧಕ್ಕೆ ಮುಂದೂಡಲಾಯಿತು. ಆದ್ರೀಗ ಯುಎಇಯಲ್ಲಿ ಸಿಎಸ್‌ಕೆ ಮತ್ತು ಎಂಐ ನಡುವಿನ ಪಂದ್ಯದೊಂದಿಗೆ ಪುನರಾರಂಭವಾಗಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights