Categories
Breaking News Sandalwood

ಕಿಚ್ಚು ಹತ್ತಿಸಿದ ಭಜರಂಗಿ2 ಫಸ್ಟ್ ಲುಕ್ ಪೋಸ್ಟರ್ : ಕ್ರೇಜ್ ಹುಟ್ಟಿಸಿದ ಶಿವಣ್ಣ- ಹರ್ಷ

ಸೂಪರ್ ಹಿಟ್ ಕಾಂಬಿನೇಷನ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಿರ್ದೇಶಕ ಎ ಹರ್ಷ ಜೋಡಿಯ ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ, ಬಹುಕೋಟಿ ವೆಚ್ಚದ ಬಿಗ್ಗೆಸ್ಟ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.

ಸಂಕ್ರಾಂತಿಯ ಈ ಸುಗ್ಗಿ ಸಂಭ್ರಮಕ್ಕೆ ಶಿವಣ್ಣ ಭಜರಂಗಿ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ಎಕ್ ಧಮ್ ಮಾಸ್ ಆಗಿದೆ. ಕ್ಲಾಸ್ ಆಗಿ ಕಂಗೊಳಿಸ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುತ್ತೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ನಾಲ್ಕಾರು ಕಥೆಗಳನ್ನ ಹೇಳ್ತಿದೆ. ಶಿವಣ್ಣನ ಮಾಸ್ ಲುಕ್ಕು, ಗೆಟಪ್ಪು, ಅನವ್ರ ಲುಕ್ಕಿನ ಎದುರಿಗಿರೋ ಅಜನಾಬಾಹು ವ್ಯಕ್ತಿಯ ಕೈಯಲ್ಲಿರೋ ಕಿಚ್ಚು ಎಲ್ಲಾವೂ ವಿಶಿಷ್ಠ ಕುತೂಹಲವನ್ನ ಹುಟ್ಟಿಸ್ತಿದೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಇದೊಂದು ಪೋಸ್ಟರ್ ಸಿನಿಪ್ರಿಯರಲ್ಲಿ ಮತ್ತೊಂದು ಮೆಗಾ ಸಿನಿಮಾ ನೋಡೋ ಕುತೂಹಲವನ್ನ ಹುಟ್ಟಿಸಿದೆ.

ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ ಭಜರಂಗಿಗೆ ಸಂಗೀತ ಸಂಯೋಜಿಸಿದ್ದ ಅರ್ಜುನ್ ಜನ್ಯ ಅವ್ರೇ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಆಲ್ಮೋಸ್ಟ್ ಎಲ್ಲಾ ಭಜರಂಗಿ ಟೀಮೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ಅಂದ್ಹಾಗೆ, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ, ಸುಗ್ಗಿ ಸಂಭ್ರಮಕ್ಕೆ ಕನ್ನಡ ಸಿನಿಪ್ರಿಯರಲ್ಲಿ, ಸೆಂಚುರಿ ಸ್ಟಾರ್ ಫ್ಯಾನ್ಸ್ ಲ್ಲಿ ಸಂತಸ ಮೂಡಿಸಿದೆ.

Categories
Breaking News Health

ಚಳಿಗಾಲದಲ್ಲಿ ತುಟಿಯ ಆರೈಕೆ ಹೇಗಿರಬೇಕು..? ಡ್ರೈ ಲಿಪ್ ಗಾಗಿ ಇಲ್ಲಿದೆ ಪರಿಹಾರ..

ಚಳಿಗಾಲ ಬಂದ್ರೆ ಸಾಕು ತ್ವಚೆ ಡ್ರೈ ಆಗಲು ಪ್ರಾರಂಭವಾಗುತ್ತದೆ. ಮುಖದ ಆಕರ್ಷಣೆ ಮಾತ್ರವಲ್ಲದೇ ತುಟಿಗಳು ಕೂಡ ಕಾಂತಿ ಕಳೆದುಕೊಂಡು ಬಿರುಕು ಬಿಡುತ್ತದೆ. ಹೀಗಾದರೆ ಚಳಿಗಾಲಕ್ಕೆ ತ್ವಚೆಯ ಆರೈಕೆ ಹೇಗೆ ಮಾಡಬೇಕು..? ಅದರಲ್ಲೂ ತುಟಿಗಳು ಬಿರುಕು ಬಿಡುವುದನ್ನ ತಡೆಯುವುದು ಹೇಗೆ..? ಅನ್ನೋರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್..

ಲೋಳೇರಸ : ಲೋಳೆರಸ ಪ್ರತಿನಿತ್ಯ ತುಟಿಗಳಿಗೆ ಹಾಗೂ ಮುಖಕ್ಕೆ ಹಚ್ಚುವುದರಿಂದ ತ್ವಚೆ ಕಾಂತಿಯುತವಾಗಿ ಕೂಡಿರುತ್ತದೆ.

ಹಾಲಿನ ಕೆನೆ : ಹಾಲಿನ ಕೆನೆ ಹಚ್ಚುವುದರಿಂದ ತುಟಿಗಳು ಒಣಗದೆ ಅಂದವಾಗಿ, ಕೋಮಲವಾಗಿ ಕಾಣಿಸುತ್ತದೆ.

ಜೇನು : ತ್ವಚೆ ಆಕರ್ಷಕವಾಗಿ ಕಾಣಲು ಜೇನು ಉತ್ತಮ ಪರಿಹಾರವಾಗಿದೆ. ಇದನ್ನ ತುಟಿಗಳಿಗೆ ಬಳಕೆ ಮಾಡುವುದರಿಂದ ತುಟಿ ಒಡೆಯದೆ, ಸುಕೋಮಲವಾಗಿರುತ್ತದೆ.

ಪಪ್ಪಾಯ : ಪಪ್ಪಾಯ ಪೇಸ್ಟ್ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವುದನ್ನ ತಡೆಗಟ್ಟಬಹುದು. ಮುಖಕ್ಕೂ ಇದರಿಂದ ಮಸಾಜ್  ಮಾಡಿಕೊಳ್ಳಬಹುದು. ತ್ವಚೆ ಕಾಂತಿಯುತವಾಗಿರಿಸಲು ಇದು ಸಹಕಾರಿಯಾಗಿದೆ.

ವಿಟಮಿನ್ ಕೊರತೆ ನೀಗಿಸಿಕೊಳ್ಳಿ : ಕ್ಯಾರೆಟ್ ನಂತಹ ತರಕಾರಿ ಹಣ್ಣು ಎಂಥೆಚ್ಚವಾಗಿ ಸೇವಿಸುವುದರಿಂದ ಚರ್ಮ ಒಣಗುವುದು, ವಯಸ್ಸಾದಂತೆ ಕಾಣುವುದನ್ನ ತಪ್ಪಿಸಬಹುದು.

ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆ ಒಂದು ನೈಸರ್ಕಿಕ ಪರಿಹಾರವಾಗಿದ್ದು, ತುಟಿ ಹಾಗೂ ಮುಖಕ್ಕೆ ಹಚ್ಚುವುದರಿಂದ ತ್ವಚೆ ಮೃದುವಾಗಿರುತ್ತದೆ.

ಸೌತೇಕಾಯಿ : ಹೆಚ್ಚಿದ ಸೌತೇಕಾಯಿ ತುಟಿಯ ಮೇಲೆ ಇಟ್ಟುಕೊಳ್ಳಿ. ಇದು ತಂಪಾದ ಅನುಭವ ನೀಡುತ್ತದೆ. ಇದರಿಂದ ತುಟಿ ತೇವಾಂಶದಿಂದ ಕೂಡಿರುತ್ತದೆ.

ಮೇಕಪ್ ಅವಾಯಿಡ್ ಮಾಡಿಕೊಳ್ಳಿ : ರಾಸಾಯನಿಕ ಅಂಶವಿರುವ ಮೇಕಪ್ ಸಾಮಾಗ್ರಿಗಳು ತುಟಿಗೆ ಹಾಣಿಕಾರಕ. ಜೊತೆಗೆ ಇವುಗಳ ಬಳಕೆ ಕೂಡ ಮಿತಿಯಲ್ಲಿದ್ದರೆ ಒಳ್ಳೆಯದು.

ಚಳಿಗಾಲಕ್ಕೆ ತ್ವಚೆ ಹಾಗೂ ತುಟಿ ಬಿರುಕು ಬಿಡುವುದು ಸಾಮಾನ್ಯವಾಗಿರುತ್ತದೆ. ಇದನ್ನ ನಿರ್ಲಕ್ಷಿಸಿದರೆ ರಕ್ತ ಬರುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಸೂಕ್ತ ಕ್ರೀಮ್ ಬಳಕೆ ಮಾಡಿ ಆದರೆ ಬೀ ಕೇರ್ ಫುಲ್.

Categories
Breaking News Sandalwood

ಕೆಜಿಎಫ್-2 ಅಭಿಮಾನಿಗಳಿಗ ಸಿಹಿ ಸುದ್ದಿ : ಚಿತ್ರದ ಫಸ್ಟ್ ಲುಕ್ ರಿವೀಲ್ ಗೆ ಡೇಟ್ ಫಿಕ್ಸ್

ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರತಂಡದಿಂದ ಅಭಿಮಾನಿಗಳಿಗ ಸಿಹಿ ಸುದ್ದಿ ಲಭಿಸಿದ್ದು, ಚಿತ್ರದ ಫಸ್ಟ್ ಲುಕ್ ಇದೇ ತಿಂಗಳ 21 ರಂದು ರಿವೀಲ್ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಸಲಾಂ ರಾಕಿ ಬಾಯ್… ರಾಕ್ ರಾಕ್ ರಾಕೀ… ಸಲಾಂ ರಾಕಿ ಬಾಯ್….. ಸಲಾಂ ರಾಕಿ ಬಾಯ್ ಸಾಂಗ್ ಕೆಜಿಎಫ್ ಸಿನಿಮಾದ ದಿ ಮೋಸ್ಟ್ ಫೇಮಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಗೆ ರಾಕಿ ಬಾಯ್ ಎಂದು ಹೆಸರು ತಂದು ಕೊಟ್ಟ ಸಿನಿಮಾ. ಈಗ ಕೆಜಿಎಫ್-2 ಸಿನಿಮಾದ್ದೇ ಎಲ್ಲೆಡೆ ಮಾತು ಕಥೆ ಶುರುವಾಗಿದೆ.

ಹೌದು… ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ ಗೆ ಭಾರೀ ಹೆಸರು ಹಾಗೂ ಕೀರ್ತಿ ತಂದು ಕೊಟ್ಟ ಸಿನಿಮಾ. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲೇ ಧೂಳೆಬ್ಬಿಸಿಬಿಟ್ಟಿತ್ತು. ಹಾಡುಗಳಂತೂ ಔಟ್ ಆಫ್ ಔಟ್ ಮಾರ್ಕ್ ನ ತೆಗೆದುಕಂಡಿವೆ. ಲೋಕಸಭಾ ಚುನಾವಣೆಯ ಬ್ಯೂಸಿ ಸೆಡ್ಯೂಲ್ ನಲ್ಲಿಯೇ ರಾಕಿ ಬಾಯ್ ಕೆಜಿಎಫ್ – 2 ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸದ್ಯ ಅದರ ಫಸ್ಟ್ ಲುಕ್ ಫೋಟ್ ಕೂಡ ರಿಲೀಸ್ ಮಾಡಲು ಚಿತ್ರ ತಂಡ ದಿನಾಂಕ ಫಿಕ್ಸ್ ಮಾಡಿದೆ.

ಅಭಿಮಾನಿಗಳಿಗೆ ಮಾಹಿತಿ ನೀಡಿದಂತೆ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ, ಡಿ.21ರ ಸಂಜೆ 5.45ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಪೋಸ್ಟರನ್ನು ನಟ ಸಂಜಯ್ ದತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಅಧೀರ ಪಾತ್ರದ ಜರ್ನಿ ಆರಂಭವಾಗಿದೆ.

ಚಿತ್ರದಲ್ಲಿ ತಮ್ಮ ನೆಚ್ಚಿನ ನಟ ಯಶ್ ಯಾವ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಚಿತ್ರತಂಡದ ಘೋಷಣೆಯಿಂದ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೇ ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ತಿಳಿಸಿದೆ.

Categories
Breaking News District State

ವಾಹಗಳನ್ನ ನೋಡಿ ಕಕ್ಕಾಬಿಕ್ಕಿಯಾಗಿ ಓಡಾಡಿದ ಕಾಡೆಮ್ಮೆಗಳು : ವಿಡಿಯೋ ನೋಡಿ…

ವಾಹಗಳನ್ನ ನೋಡಿ ಕಾಡೆಮ್ಮೆಗಳು ಕಕ್ಕಾಬಿಕ್ಕಿಯಾಗಿ ಓಡಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪುರದಮಕ್ಕಿಯಲ್ಲಿ ನಡೆದಿದೆ.

ವಾಹನಗಳನ್ನು ನೋಡುತ್ತಲೇ ಒಂದು ಬದಿಯಿಂದ ಮತ್ತೊಂದು ಬದಿಗೆ  ಓಡಾಡಿದ 9 ಕಾಡೆಮ್ಮೆಗಳು ಬಳಿಕ ಗಾಬರಿಯಿಂದ ರಸ್ತೆಯನ್ನು ದಾಟಿವೆ. ವಾಹನ ಸವಾರರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

 

Categories
Breaking News National

ಇದು ಮಣ್ಣಿನ ಗಣೇಶ ಅಲ್ಲ, ಪಿಒಪಿ ಗಣೇಶನೂ ಅಲ್ಲ, ತಿನ್ನುವ ಟೇಸ್ಟಿ ಟೇಸ್ಟಿ ಗಣೇಶ….

ಇಕೋ ಫ್ರಂಡ್ಲಿ ಗಣೇಶ ತಯಾರಿಸಬೇಕು, ಅದನ್ನೇ ಪೂಜೆ ಮಾಡಬೇಕು ಇದರಿಂದ ಪರಿಸರಕ್ಕೆ ಕಡಿಮೆ ಪ್ರಮಾಣದ ಹಾನಿಯುಂಟಾಗುತ್ತದೆ. ಆದರೆ ಕಡಿಮೆ ಪ್ರಮಾಣದ  ಹಾನಿ ಕೂಡ ಪರಿಸರಕ್ಕೆ ಆಗಬಾರದು. ಅಂಥಹ ಗಣೇಶ ತಯಾರಿ ಮಾಡಬೇಕು ಅಂದ್ರೆ ಹೇಗೆ..?

ಅದಕ್ಕೆ ರೆಸ್ಟೋರೆಂಟ್ ಮಾಲೀಕರೊಬ್ಬರು ಒಂದು ಪ್ಲಾನ್ ಮಾಡಿ ಗಣೇಶ ತಯಾರಿಸಿದ್ದಾರೆ. ಅದು ಯಾವುದರಿಂದ ಗೊತ್ತಾ..? ಚಾಕಲೇಟ್ ನಿಂದ..

ಹೌದು..  ಬರೋಬ್ಬರಿ 100 ಕೆಜಿ ಬೆಲ್ಜಿಯನ್ ಚಾಕ್ಲೇಟ್ ನಿಂದ ತಯಾರಿಸಿದ ಗಣೇಶ ಮೂರ್ತಿ ಇದು…! ರೆಸ್ಟೋರೆಂಟ್ ಮಾಲೀಕ ಹಾಗೂ ಚಾಕ್ಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಟ್ವಿಟರ್ ನಲ್ಲಿ ಈ ಚಾಕ್ಲೇಟ್ ಗಣೇಶ ಮೂರ್ತಿಯ ಫೋಟೋವನ್ನು ಶೇರ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ.

ಈ ವಿಶೇಷ ಚಾಕ್ಲೇಟ್ ಅನ್ನು ತಯಾರಿಸಲು 20 ಚೆಫ್ ಗಳು ಸತತ 10 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ 100 ಕೆಜಿಯಷ್ಟು ಬೆಲ್ಜಿಯನ್ ಚಾಕ್ಲೇಟ್ ಅನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಸಿಂಗ್ ನೀಡಿದ್ದಾರೆ.

ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಚಾಕ್ಲೇಟ್ ಗಣಪನನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಂಗ್ ಅವರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Categories
Breaking News Cinema

ಬೆಂಗಳೂರಿಗೆ ಆಗಮಿಸಿದ್ದ ಸೂಪರ್ ಸ್ಟಾರ್ ನೋಡಲು ಜನ ನೂಕುನುಗ್ಗಲು..

ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಅವರ ಸಹೋದರ ಸತ್ಯನಾರಾಯಣ ರಾವ್​ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಯೋಗಕ್ಷೇಮ ವಿಚಾರಿಸಲು ರಜನಿಕಾಂತ್ ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದೆ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ನಿನ್ನೆ ಆಪರೇಷನ್​​​ ಮಾಡಲಾಗಿದೆ. ನಟ ರಜನಿಕಾಂತ್ ಅವರು ಆಸ್ಪತ್ರೆಗೆ ಬರುತ್ತಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಬಂದಿದ್ದರು.

ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಅಪೋಲೋ ಆಸ್ಪತ್ರೆ ಇರುವ ಶೇಷಾದ್ರಿಪುರಂ  ಪ್ರಮುಖ ರಸ್ತೆಗಳಲ್ಲಿ ಇದರಿಂದಾಗಿ ಸಂಚಾರದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಯಿತು.

Categories
Breaking News District State

ರಾತ್ರೋ ರಾತ್ರಿ ಹಸು ಕಳ್ಳತನಕ್ಕೆ ಬಂದ್ರು : ಮುಂದೇನಾಯ್ತು ವಿಡಿಯೋ ನೋಡಿ…

ರಾತ್ರೋ ರಾತ್ರಿ ಹಸು ಕಳ್ಳತನಕ್ಕೆ ಬಂದ್ರು. ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ರು. ಸಿಕ್ಕಾಪಟ್ಟೆ ಒದೆ ತಿಂದ್ರು.

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ದಿಡ್ಡಹಳ್ಳಿ ಗ್ರಾಮದಲ್ಲಿ ಹಸು ಕದಿಯಲು ಬಂದ ನಾಲ್ಕು ಹಸು ಕಳ್ಳರನ್ನು ಗ್ರಾಮಸ್ಥರು ಹಿಡಿದು ಸಿಕ್ಕಾಪಟ್ಟೆ ಥಳಿಸಿದ್ದಾರೆ. ಕಳ್ಳರನ್ನು ಹಿಡಿದ ಗ್ರಾಮಸ್ಥರು ಕಳ್ಳರನ್ನು ರಾತ್ರಿಯಿಡಿ ಕಂಬಕ್ಕೆ ಕಟ್ಟಿ ಹಾಕಿ ಬೆಳಗ್ಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಗೂಡ್ಸ್ ಆಟೋದಲ್ಲಿ ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಸಿಕ್ಕಿಬಿದ್ದ 4ಮಂದಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಾರೆ. ರಾಮಚಂದ್ರ,ದೇವರಾಜನಾಯಕ, ಚಂದ್ರನಾಯಕ,ಬಿರೇಶ ಸಿಕ್ಕಿಬಿದ್ದ ಹಸುಕಳ್ಳರು.

ಬೆಳಗಿನ ಜಾವ 3.30 ಸಮಯದಲ್ಲಿ ಹಸುಗಳ ಶಬ್ದ ಕೇಳಿ ಎಚ್ಚೆತ್ತ ಗ್ರಾಮಸ್ಥರು, ಗೂಡ್ಸ್ ಆಟೋದಲ್ಲಿ ಪರಾರಿಯಾಗಿತ್ತಿದ್ದವರನ್ನ ಹಿಡಿದು ಆಟೋ ಜಖಂ ಮಾಡಿ, ನಂತರ ಕೆ.ಆರ್.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಾಮಿಸಿದ ಪೊಲೀಸರು ಹಸುಕಳ್ಳರನ್ನ ವಶಕ್ಕೆ ಪಡೆದಿದ್ದಾರೆ.

 

Categories
Breaking News National

ದೇವಸ್ಥಾನದಲ್ಲಿ ಈ ಜೋಡಿ ಮಾಡಿದ ಕೆಲಸ ನೋಡಿ ಧರ್ಮದೇಟು ಕೊಟ್ರು ಜನ…

ದೇವಸ್ಥಾನದ ಪವಿತ್ರವಾದ ನೀರಿನಲ್ಲಿ ಅಸಭ್ಯವಾಗಿ ನಡೆದುಕೊಂಡ ಪ್ರವಾಸಿ ದಂಪತಿಗಳು ಸಾರ್ವಜನಿಕರಿಂದ ಗೂಸಾ ತಿಂದಿದ್ದಾರೆ.

ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಬಂದಿದ್ದ ಸಬಿನಾ ಡೊಲೆಜೊವಾಲ ಹಾಗೂ ಡೆನೆಕ್ ಸ್ಲೌಕಾ ಪೆಟ್ಟು ತಿಂದವರು.

ಇವರು ಇಲ್ಲಿನ ಪವಿತ್ರ ಕ್ಷೇತ್ರದ ನೀರನ್ನು ಪರಸ್ಪರರ ನಿತಂಬದ ಮೇಲೆ ಎರಚಿಕೊಂಡು ಅಸಭ್ಯವಾಗಿ ವರ್ತಿಸಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರಿಂದ ವೈರಲ್ ಆಗಿತ್ತು. ಇದನ್ನು ತಿಳಿದ ಸಾರ್ವಜನಿಕರು ಅವರಿಗೆ ಥಳಿಸಿದ್ದಾರೆ.

 

Categories
Breaking News District Political State

ಕರ್ನಾಟಕದಲ್ಲಿ 28ರಲ್ಲಿ 25+1 ಕ್ಷೇತ್ರಗಳನ್ನು ಗೆದ್ದ ಮೇಲೂ ಬಿಜೆಪಿ ಪ್ರಬಲವಾಗಿ ಕಾಣುತ್ತಿಲ್ಲ ಏಕೆ?

ದೇಶದೆಲ್ಲೆಡೆ ಪಕ್ಷಗಳನ್ನೇ ಗುಡಿಸಿ ಗುಂಡಾಂತರ ಮಾಡುತ್ತಿರುವ ಬಿಜೆಪಿಯು, ಕರ್ನಾಟಕದಲ್ಲಿ 28ರಲ್ಲಿ 25+1 ಕ್ಷೇತ್ರಗಳನ್ನು ಗೆದ್ದ ಮೇಲೂ ಪ್ರಬಲವಾಗಿ ಕಾಣುತ್ತಿಲ್ಲ ಏಕೆ? ಲೋಕಸಭಾ ಚುನಾವಣೆಯನ್ನೇ ಆಧಾರವಾಗಿಟ್ಟುಕೊಳ್ಳುವುದಾದರೆ ಬಿಜೆಪಿಯು ಈಗ ಚುನಾವಣೆ ನಡೆದರೂ, 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಸುಲಭದಲ್ಲಿ ಗೆಲ್ಲಬೇಕು. ಆದರೆ, ವಿಧಾನಸಭಾ ಚುನಾವಣೆ ಕಡೆಗೆ ಹೋಗುವ ಬದಲು, ಈಗಲೇ ಸರ್ಕಾರ ರಚನೆ ಮಾಡುವ ಆತುರಕ್ಕೆ ಬಿದ್ದಿದೆ. ಅಷ್ಟೇ ಅಲ್ಲದೇ, ಸುಮಾರು 16 ಜನ ಶಾಸಕರು ರಾಜೀನಾಮೆ ಕೊಟ್ಟ ನಂತರವೂ ದುರ್ಬಲವಾಗಿಯೇ ಕಾಣುತ್ತಿದೆ. ಆ ದೌರ್ಬಲ್ಯದ ಲಕ್ಷಣಗಳನ್ನು ನೋಡಿದರೆ ಯಾರಿಗಾದರೂ ಅದು ಮನವರಿಕೆಯಾಗುತ್ತದೆ.

1. ಮೊದಲನೆಯದಾಗಿ ರಾಜೀನಾಮೆ ಕೊಟ್ಟವರನ್ನು ಸ್ವತಂತ್ರವಾಗಿ ಬಿಟ್ಟರೆ ಅವರು ವಾಪಸ್ಸು ಹೋಗುತ್ತಾರೆ ಎಂದೆನಿಸಿ ಅವರನ್ನು ಕೂಡಲೇ ಬಿಜೆಪಿಯೇ ಅಧಿಕಾರದಲ್ಲಿರುವ ಮಹಾರಾಷ್ಟ್ರಕ್ಕೆ ರವಾನೆ ಮಾಡಲಾಯಿತು. ರಾಜೀನಾಮೆ ಕೊಟ್ಟವರು ವೀರಾವೇಶದಿಂದ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು ಮತ್ತು 2-3 ಜನರನ್ನು ಬಿಟ್ಟರೆ ಮಿಕ್ಕವರೆಲ್ಲರೂ ಘಟಾನುಘಟಿ ಶಾಸಕರೇ. ಹಾಗಿದ್ದೂ ಮುಂಬೈಗೆ ಬಿಜೆಪಿಯೇ ವ್ಯವಸ್ಥೆ ಮಾಡಿದ ವಿಮಾನದಲ್ಲಿ ಹೊರಟು, ಬಿಜೆಪಿಗೆ ಆಪ್ತವಾದ ಉದ್ಯಮಿಯ ಹೋಟೆಲ್‍ನಲ್ಲೇ ಇರುವಂತೆ ನೋಡಿಕೊಳ್ಳಲಾಯಿತು.


2. ಅಲ್ಲಿಗೆ ಹೋದ ಮರುದಿನ ಡಿ.ಕೆ.ಶಿವಕುಮಾರ್ ‘ಮುಂಬೈಗೆ ಹೋಗಿ ಅವರ ಮನವೊಲಿಸಿ ಕರೆತರುತ್ತೇನೆ’ ಎಂದು ಘೋಷಿಸಿದ್ದರು. ಯಾರೇ ಬಂದರೂ, ಈ ಶಾಸಕರು ಜಗ್ಗಲ್ಲ ಎಂಬ ವಿಶ್ವಾಸ ಇರುವುದು ಹೋಗಲಿ, ತಾವೂ ಇದ್ದು (ಅದೇ ಹೋಟೆಲ್‍ನಲ್ಲಿ ಬಿಜೆಪಿ ನಾಯಕರೂ ಇದ್ದರು) ನಿಭಾಯಿಸಬಹುದು ಎಂಬ ಧೈರ್ಯವೂ ಬಿಜೆಪಿಗಿರಲಿಲ್ಲ. ಬದಲಿಗೆ ಡಿ.ಕೆ.ಶಿ ಅಥವಾ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದರೆ, ಇವರೆಲ್ಲರೂ ಓಡಿ ಹೋಗುತ್ತಾರೆಂದು ಬಿಜೆಪಿಯು ಭಾವಿಸಿತು. ಹಾಗಾಗಿ ಮಧ್ಯರಾತ್ರಿ 10 ಜನ ಶಾಸಕರಿಂದ ಪತ್ರ ಬರೆಸಿಕೊಂಡು ಮುಂಬೈನ ಪೊಲೀಸ್ ಕಮೀಷನರ್, ಸ್ಥಳೀಯ ಡಿಸಿಪಿ ಮತ್ತು ಪೊಲೀಸ್ ಠಾಣೆಗೆ ನೀಡಿದರು. ಆ ಪತ್ರವು ಡಿ.ಕೆ.ಶಿ ಮತ್ತು ಎಚ್.ಡಿ.ಕೆ ತಮ್ಮನ್ನು ಮಾತಾಡಿಸದಂತೆ ತಡೆಯಬೇಕು ಎಂಬಂತೆ ಧ್ವನಿಸಿತು. ತಾವು ಮರಳಿ ಹೋಗುವುದಿಲ್ಲ ಎಂದು ಖಚಿತವಿದ್ದು ಪೊಲೀಸರಿಗೇ ದೂರು ಸಲ್ಲಿಸುವವರು, ಎದುರಿಗೆ ಇವರಿಬ್ಬರು ಬಂದರೆ ಯಾಕೆ ಹೆದರಬೇಕು? ಹಾಗಾಗಿ ಈ ಪತ್ರವನ್ನು ಬಿಜೆಪಿಯೇ ಬರೆಸಿಕೊಂಡಿತ್ತು ಎಂದು ನಂಬಲು ಕಾರಣಗಳಿವೆ.


3. ಅಧಿವೇಶನ ಶುರುವಾದ ದಿನ ‘ವಿಶ್ವಾಸಮತ ಯಾಚನೆ ಮಾಡಲು ಸಿದ್ಧ’ ಎಂದು ಕುಮಾರಸ್ವಾಮಿ ಘೋಷಿಸಿದ ತಕ್ಷಣ ಬೆಚ್ಚಿಬಿದ್ದಿದ್ದು ಬಿಜೆಪಿ. ತೃಪ್ತರಲ್ಲದ ಜೆಡಿಎಸ್, ಕಾಂಗ್ರೆಸ್ ಶಾಸಕರ ಕುರಿತಲ್ಲ, ತನ್ನ ಶಾಸಕರ ಕುರಿತಂತೆ. ಕೂಡಲೇ ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಸ್ಥಳಾಂತರಿಸಿತು. ಸದ್ಯ, ಇನ್ನೂ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಿಲ್ಲ ಅಷ್ಟೇ.


4. ನಾಲ್ಕನೆಯದಾಗಿ, ಮುಂಬೈನಲ್ಲಿದ್ದ 12 ಜನ ತೃಪ್ತರಲ್ಲದ ಶಾಸಕರು ಇಂದು ಶಿರಡಿಗೆ ಹೋಗಿ ಬಂದರು. ಸುದ್ದಿಯೇನೆಂದರೆ ಅಲ್ಲಿ ಈ ಶಾಸಕರಿಂದ ಆಣೆ ಪ್ರಮಾಣ ಮಾಡಿಸಿ ನಾವು ಮರಳಿ ನಮ್ಮ ಪಕ್ಷಗಳಿಗೆ ಹೋಗುವುದಿಲ್ಲ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿಸಲಾಗಿದೆ!!

ಹಾಗೆ ನೋಡಿದರೆ, ಬೆಂಗಳೂರಿನಲ್ಲೇ ಇರುವ ರಾಮಲಿಂಗಾರೆಡ್ಡಿ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳುತ್ತಿದ್ದಾರೆ. ಅವರ ಮನೆಗೆ ಪದೇ ಪದೇ ಕಾಂಗ್ರೆಸ್ ನಾಯಕರೂ ಹೋಗುತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ತನ್ನ ಮನೆಯಲ್ಲಿ ಕೂತಿದ್ದರೆಂದು ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಬಂದವರು ಅಜ್ಞಾತ ಸ್ಥಳಕ್ಕೆ ಹೋದರೆಂದು ಹೇಳಲಾಗಿದೆ.
ಅಂದರೆ ವಿಚಾರ ಸ್ಪಷ್ಟವಿದೆ. ಬಿಜೆಪಿ ಆತ್ಮವಿಶ್ವಾಸದಿಂದಿಲ್ಲ. ಈ ಎಲ್ಲಾ ಅಂಶಗಳೂ ಅದರ ದೌರ್ಬಲ್ಯವನ್ನಷ್ಟೇ ತೋರಿಸುತ್ತಿವೆ. ಈಗಾಗಲೇ ತನ್ನ 13 ಶಾಸಕರು ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್ ತನ್ನ ಇತರ ಶಾಸಕರನ್ನು ರೆಸಾರ್ಟ್‍ಗೆ ಒಯ್ದಿಲ್ಲ. ಇದರ ಅರ್ಥವೇನು?
ಬಿಜೆಪಿಯು ಈ ಸಾರಿಯೂ ಅಧಿಕಾರ ಪಡೆದುಕೊಳ್ಳುವುದಿಲ್ಲವಾ? ಮತ್ತೊಂದು ಠುಸ್ ಪಟಾಕಿಯಾ? ಮುಂದಿನ ಮೂರ್ನಾಲ್ಕು ದಿನಗಳು ಈ ಕುರಿತು ಸ್ಪಷ್ಟ ಚಿತ್ರಣ ನೀಡುತ್ತವಾದರೂ, ಈ ಸದ್ಯ ಬಿಜೆಪಿ ದುರ್ಬಲವಾಗಿದೆ ಎಂಬುದು ಎದ್ದು ಕಾಣುತ್ತಿದೆ.

Categories
Breaking News International State

ಗಿನ್ನಿಸ್ ರೆಕಾರ್ಡ್ ಗಾಗಿ 5 ದಿನ ಈ ವ್ಯಕ್ತಿ ಯಾವ ಜಾಗದಲ್ಲಿ ಕುಳಿತಿದ್ದಾನೆ ನೋಡಿ….

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸುವ ಉದ್ದೇಶದಿಂದ ಬೆಲ್ಜಿಯಂನ ನಲವತ್ತೆಂಟು ವರ್ಷದ ಜಿಮ್ಮಿ ಡೆ ಐದು ದಿನಗಳ ಕಾಲ ನಿರಂತರವಾಗಿ ಶೌಚಾಲಯದ ಕಮೋಡ್ ಮೇಲೆ ಕಳೆದ ಪ್ರಸಂಗ ನಡೆದಿದೆ.

ಅತಿ ದೀರ್ಘಕಾಲೀನವಾಗಿ ಶೌಚಾಲಯದಲ್ಲಿ ಕಳೆಯುವ ಮೂಲಕ ದಾಖಲೆ ಬರೆಯುವುದು, ಜನರಿಗೆ ಫನ್ ನೀಡುವುದು ಆತನ ಉದ್ದೇಶವಾಗಿತ್ತು.

165 ತಾಸು ಶೌಚಾಲಯದಲ್ಲಿ ಕಳೆಯುವ ಗುರಿಯನ್ನು ಆತ ಹೊಂದಿದ್ದ, ಆದರೆ ನೂರಾ ಹದಿನಾರು ಗಂಟೆವರೆಗೆ ಮಾತ್ರ ಕುಳಿತುಕೊಳ್ಳಲು ಆತನಿಗೆ ಸಾಧ್ಯವಾಯಿತು.

ಪ್ರತಿ ಗಂಟೆಗೆ ಒಮ್ಮೆ ಐದು ನಿಮಿಷ ಕಾಲ ಆತ ಎದ್ದು ಹೊರ ಬರುತ್ತಿದ್ದ ಎಂದು ತಿಳಿದು ಬಂದಿದೆ.