ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಕ್ತಿಯಿಂದ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ! ವಾಸ್ತವವೇನು?
ಕರ್ತವ್ಯ ನಿರತ ಸಂಚಾರಿ ಪೊಲೀಸ್ ಅಧಿಕಾರಿಯ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾನೆ ಎಂದು ಪೋಸ್ಟ್ ಮೂಲಕ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೊಲೀಸ್ ಅಧಿಕಾರಯ ಮೇಲೆ ಹಲ್ಲೆ ಹೇಗೆ ನಡೆದಿದೆ ಅದನ್ನು ನಡೆಸಿರುವ ವ್ಯಕ್ತಿಯ ಹಿನ್ನಲೆ ಏನು? ಘಟನೆಯ ಸತ್ಯಾಸತ್ಯೆತೆಗಳು ಏನೆಂದು ? ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
Scared MusIim of India with a Policeman pic.twitter.com/qQfxEOkW7r
— Rosy (@rose_k01) April 5, 2022
ಫ್ಯಾಕ್ಟ್‌ಚೆಕ್:
ಫೋಟೋವನ್ನು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದ ಜೊತೆ ಫೋಟೋವನ್ನು ಸುಮಾರು ಎರಡು ವರ್ಷಗಳಿಂದ ಅಂದರೆ 2020 ರಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವೃತ್ತಪತ್ರಿಕೆ ಕ್ಲಿಪ್ಪಿಂಗ್ ಪ್ರಕಾರ, ರಾಜಸ್ಥಾನದ ಜೋಧ್‌ಪುರದ ಘಂಟಾಘರ್‌ನ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ (ಅನುಮತಿ ಇಲ್ಲದೆ) ಗಾಡಿ ನಿಲ್ಲಿಸಿಕೊಂಡು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೈಗಾಡಿಗಳನ್ನು ತೆರೆವುಗೊಳಿಸುವ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬರ ಗಾಡಿಯನ್ನು ವಶಪಡಿಸಿಕೊಳ್ಳಲು ಮುಂದಾದಾಗ ವ್ಯಾಪಾರಿಯೂ ಕೋಪಗೊಂಡು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ್ದಾನೆ.

ಮತ್ತಷ್ಟು ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ Google ಸರ್ಚ್ ಮಾಡಿದಾಗ, 2016 ರಲ್ಲಿ ಪ್ರಕಟವಾದ ಕೆಲವು ಸುದ್ದಿಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ. ದೈನಿಕ್ ಭಾಸ್ಕರ್ ಲೇಖನದ ಪ್ರಕಾರ, ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ತಳ್ಳು ಗಾಡಿಯ ವ್ಯಾಪಾರಿ ನಾಗೋರಿಯಾ ಬೇರಾ ನಿವಾಸಿ ಪ್ರೇಮಚಂದ್ ಮಾಲಿ ಎಂದು ತಿಳಿದು ಬಂದಿದೆ ಅವನ ತಂದೆಯ ಹೆಸರು ಧರ್ಮೇಂದ್ರ ಎಂದು ತಿಳಿದು ಬಂದಿದೆ. ಟ್ರಾಫಿಕ್ ಹೆಡ್ ಕಾನ್ ಸ್ಟೇಬಲ್ ಹೆಸರು ಶೋಭರಾಮ್ ಎನ್ನಲಾಗಿದೆ.

ಇದಲ್ಲದೆ, 2016 ರಲ್ಲಿ ಈ ಘಟನೆ ನಡೆದಾಗ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು ಮತ್ತು ಆದ್ದರಿಂದ ಅಶೋಕ್ ಗೆಹ್ಲೋಟ್ ಅಥವಾ ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. 2016 ರಲ್ಲಿ ಹಲ್ಲೆಗೊಳಗಾದ ಹೆಡ್ ಕಾನ್‌ಸ್ಟೆಬಲ್ ಈಗ ಜೋಧ್‌ಪುರ ಪೊಲೀಸ್‌ನಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿದ್ದಾರೆ. ಘಟನೆ ಕುರಿತು BOOM ತಂಡ ಶೋಭರಾಮ್ ಅವರನ್ನು ಸಂಪರ್ಕಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ ವ್ಯಾಪಾರಿ ಮುಸ್ಲಿಂ ಅಲ್ಲ ಎಂದು ಖಚಿತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಚಾರಿ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಹಿಂದು ವ್ಯಕ್ತಿಯನ್ನು, ಮುಸ್ಲಿಂ ವ್ಯಕ್ತಿ ಎಂದು ತಪ್ಪಾಗಿ ಹಂಚಿಕೊಂಡು 2016ರ ಘಟನೆಯನ್ನು ಇತ್ತೀಚಿನದ್ದು ಕೋಮು ದ್ವೇಷ ಹರಡವ ದುರುದ್ದೇಶದಿಂದ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ದಿವಾಳಿಯಾಗುತ್ತದೆ ಎಂದು ಬರಾಕ್ ಒಬಾಮ ಹೇಳಿದ್ದು ನಿಜವೆ?

