ಫ್ಯಾಕ್ಟ್ಚೆಕ್: ಟರ್ಕಿಯಲ್ಲಿ ನಡೆದ ಘಟನೆಯನ್ನು ಭಾರತದ್ದು ಎಂದು ಸುಳ್ಳು ಹೇಳಿದ ಬಲಪಂಥೀಯರು
ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಗೂಳಿಯೊಂದು ಹಿಂದಿನಿಂದ ಹೋಗಿ ಗುದ್ದಿ ಮಹಿಳೆಯನ್ನು ಎತ್ತಿ ಎಸೆಯುವ ದೃಶ್ಯವು ಮೈಜುಂ ಎನ್ನಿಸುವಂತಿದೆ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದ್ದು, ಈ ಘಟನೆ ಭಾರತದ್ದು ಎಂದು ಹೇಳುತ್ತ ಗೂಳಿ ಕೂಡ ಕೋಮುವಾದಿ ಆಗಿದೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಹಾಗಿದ್ದರೆ ವೈರಲ್ ವಿಡಿಯೊ ಭಾರತದ್ದೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್:
ವೀಡಿಯೊದ ಸ್ಕ್ರೀನ್ಶಾಟ್ಗಳಲ್ಲಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ವೀಡಿಯೊ YouTube ನಲ್ಲಿ ಕಂಡುಬಂದಿದೆ. 30 ಆಗಸ್ಟ್ 2017 ರಂದು YouTubeನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ದುರ್ಘಟನೆಯು ಟರ್ಕಿಯ ಇಸ್ತಾನ್ ಬುಲ್ನಲ್ಲಿರುವ ಮಾಲ್ಟೆಪೆ ಎಂಬ ಜಿಲ್ಲೆಯಲ್ಲಿ ನಡೆದಿದ್ದು, ವೀಡಿಯೊದಲ್ಲಿ ಮಹಿಳೆಯ ಮೇಲೆ ದಾಳಿ ಮಾಡುವ ಗೂಳಿಯು ಸ್ಥಳಿಯ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡು ಜನಬಿಡದಿ ಪ್ರದೇಶಕ್ಕೆ ಬಂದಿದೆ, ಗಾಬರಿಗೊಂಡ ಗೂಳಿ ರಸ್ತೆ ದಾಟುತ್ತಿದ್ದ ಬುರ್ಖಾಧಾರಿ ಮಹಿಳೆಗೆ ಹಿಂದಿನಿದ ಹೋಗಿ ಗುದ್ದಿ ಎತ್ತಿ ಎಸೆಯುವ ವಿಡಿಯೊ ಭಯಾನಕವಾಗಿದೆ. ಎಂದು ವರದಿಯಾಗಿದೆ.
ಟರ್ಕಿಶ್ ನ ಮಾಧ್ಯಮಗಳ ವರದಿಗಳ ಪ್ರಕಾರ, ಘಟನೆಯು 30 ಆಗಸ್ಟ್ 2017 ರಂದು ಇಸ್ತಾನ್ಬುಲ್ನ ಮಾಲ್ಟೆಪೆಯ ಬೀದಿಯಲ್ಲಿ ಸಂಭವಿಸಿದೆ. ಗೂಳಿ ಸಮೀಪದ ಗೋಶಾಲೆಯಿಂದ ತಪ್ಪಿಸಿಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿದೆ. ತಕ್ಷಣವೆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಬಿದ್ದ ರಬಸಕ್ಕೆ ಮಹಿಳೆಯ ಸೊಂಟ ಮುರಿದಿತ್ತು ಸೂಕ್ತ ಚಿಕಿತ್ಸೆ ನೀಡಿ, ಆರೈಕೆ ಮಾಡಿದ ನಂತರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಒಟ್ಟಾರೆಯಾಗ ಹೇಳುವುದಾದರೆ ವಿಡಿಯೊ ಟರ್ಕಿಯದ್ದು, ಭಾರತದ್ದಲ್ಲ, ಈ ಘಟನೆಯು 30 ಆಗಸ್ಟ್ 2017 ರಂದು ಇಸ್ತಾನ್ಬುಲ್ನ ಮಾಲ್ಟೆಪೆಯ ಬೀದಿಯಲ್ಲಿ ಸಂಭವಿಸಿದೆ. ಗೂಳಿ ಸಮೀಪದ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸೊಂಟ ಮೂಳೆ ಮುರಿದಿದ್ದರಿಂದ ಚಿಕಿತ್ಸೆ ನೀಡಿ ಆಕೆಯನ್ನು ಕ್ಷೇಮವಾಗಿ ಮನೆಗೆ ಕಳುಹಿಸಲಾಗಿದೆ.
ಹೇಮಣ್ಣಗೌಡ ಎಂಬ ಬಲಪಂಥೀಯ ಪ್ರತಿಪಾದಕರಬ್ಬರು ಈ ಪೋಸ್ಟ್ನಲ್ಲಿ ಬುರ್ಖಾ ಧರಿಸಿರುವ ಮಹಿಳೆ ಮುಸ್ಲಿಂ ಎನ್ನುವ ಕಾರಣಕ್ಕೆ ಗೂಳಿ ಗುದ್ದಿದೆ ಎಂದು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ ಮುಸ್ಲಿಂ ಚರ್ಚೆಯ ಹಿನ್ನಲೆಯಲ್ಲಿ ವಿಕೃತಿಯ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಭಾರತದಲ್ಲಿ ನಡೆದಿರುವ ವಿಡಿಯೋ ಅಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?

