ಡ್ರಗ್ಸ್ ಸೇವನೆ ಬಗ್ಗೆ ಒಪ್ಪಿಕೊಂಡ ಹಾಸ್ಯ ಕಲಾವಿದೆ ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ..!

ಜನಪ್ರಿಯ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾ ಪ್ರಸ್ತುತ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧನದಲ್ಲಿದ್ದು ಇವರಿಬ್ಬರೂ ಡ್ರಗ್ಸ್ ಸೇವನೆ ಬಗ್ಗೆ ಒಪ್ಪಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ (ನ.21) ಹಾಸ್ಯ ಕಲಾವಿದೆ ಭಾರತಿ ನಿವಾಸದ ಮೇಲೆ ಎನ್‌ಸಿಬಿ ದಾಳಿ ನಡೆಸಿದಾಗ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿತ್ತು. ನಂತರ ದಂಪತಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎನ್‌ಸಿಬಿ ವಿಚಾರಣೆಗೆ ತಬ್ಬಿಬ್ಬಾದ ದಂಪತಿ ಕೊನೆಗೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.

ನಿನ್ನೆ ಭಾರತಿ ಸಿಂಗ್ ಎನ್‌ಸಿಬಿ ಕಚೇರಿಗೆ ಪ್ರವೇಶಿಸುವಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನನ್ನನ್ನು ಇಲ್ಲಿಗೆ ಕರೆತರಲಾಗಿರುವುದು ಕೇವಲ ವಿಚಾರಣೆಗೆ ಮಾತ್ರ” ಎಂದು ಹೇಳಿದ್ದರು. ಎನ್‌ಸಿಬಿ ನಿನ್ನೆ ಮೂರು ಸ್ಥಳಗಳಲ್ಲಿ ದಾಳಿ ಮಾಡಿತ್ತು. ಇದರಲ್ಲಿ ಭಾರತಿ ಮತ್ತು ಹರ್ಷ್ ಅವರ ಪ್ರೊಡಕ್ಷನ್ ಹೌಸ್ ಕಚೇರಿ ಮತ್ತು ಮುಂಬೈನ ನಿವಾಸ ಒಳಗೊಂಡಿವೆ.

ಬಾಲಿವುಡ್ ಮಾದಕವಸ್ತು ತನಿಖೆಯಲ್ಲಿ ಎನ್‌ಸಿಬಿ 23 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇದರಲ್ಲಿ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋಯಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ರಜಪೂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಮನೆ ಸಹಾಯ ದೀಪೇಶ್ ಸಾವಂತ್ ಸೇರಿದ್ದಾರೆ. ರಿಯಾ ಚಕ್ರವರ್ತಿಗೆ ಅಕ್ಟೋಬರ್ 7 ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತು. ಅವರು 28 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ, ಆಕೆಯ ಸಹೋದರ ಶೋಯಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights