ಫ್ಯಾಕ್ಟ್ಚೆಕ್ : ಕೇರಳದ ಹಿಂದೂ ಮುಸ್ಲಿಂ ಭಾವೈಕ್ಯತೆ ಬೆಸೆಯುವ ತೆಯ್ಯಂ ಆಚರಣೆಯಲ್ಲಿ ಕೋಮು ದ್ವೇಷದ ಪೋಸ್ಟ್ ಹಂಚಿಕೊಂಡ BJP
ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿಕೊಳ್ಳುವ ಕೇರಳ ಸರ್ಕಾರದ ಕ್ರಮದ ಪರಿಣಾಮವಾಗಿ, ಈ ಪುರೋಹಿತರು ಹಿಂದೂ ಆಚರಣೆಗಳಲ್ಲಿ ಮಾಂಸ ಬಡಿಸಿ ಅಲ್ಲಾ ಹೋ ಅಕ್ಬರ್ ಎಂದು ಅದಾನವನ್ನು ಪಠಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
केरला सरकार ने मन्दिरों में मुस्लिम और क्रिश्चियन पुजारी नियुक्त कर दिए,
अब हालात ये हैं कि हनुमान जी के प्रतिरूप को शराब पिलाई जा रही है मांस परोसा जा रहा है और अल्लाह हो अकबर का उद्घोष हो रहा है। pic.twitter.com/XMiYliurBb
— VIRENDRA TIWARI (@RealVirendraBJP) March 24, 2023
ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಹಿಂದೂ ಆಚರಣೆಯನ್ನು ತೋರಿಸುವ 1:26 ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ಟ್ವಿಟರ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಕೇರಳ ಸರ್ಕಾರವು ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದ್ದನ್ನು ಆಪಾಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಪ್ರತಿಪಾದನೆಯನ್ನು ಹೊಂದಿರುವ ಬಹುತೇಕ ಪೋಸ್ಟ್ಗಳನ್ನು BJP ಬೆಂಬಲಿತ ಮತ್ತು ಬಲಪಂಥೀಯ ಪ್ರತಿಪಾದಕರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಆದನೆಯ ಹಿನ್ನಲೆ ಏನು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :.
ವಿಡಿಯೋ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಸುಮಾರು 400 ಕ್ಕೂ ಹೆಚ್ಚು ಪ್ರತ್ಯೇಕ ತೆಯ್ಯಂ ಪ್ರಕಾರಗಳು ಇರುವ ಮಾಹಿತಿ ಲಭ್ಯವಾಗಿದೆ. ಪ್ರತಿ ತೆಯ್ಯಂ ತಮ್ಮದೇ ಆದ ಸಂಗೀತ, ಶೈಲಿ ಮತ್ತು ನೃತ್ಯ ಸಂಯೋಜನೆಯನ್ನು ಹೊಂದಿದ್ಇದುವುಗಳಲ್ಲಿ ಪ್ರಮುಖವಾದವು ರಕ್ತ ಚಾಮುಂಡಿ, ಕರಿ ಚಾಮುಂಡಿ, ಮುಚ್ಚಿಲೊಟ್ಟು ಭಗವತಿ, ವಯನಾಡು ಕುಲವೆನ್, ಗುಳಿಕನ್ ಮತ್ತು ಪೊಟ್ಟನ್ (ಇಲ್ಲಿ ಮತ್ತು ಇಲ್ಲಿ) ಎಂದು ತಿಳಿದುಬಂದಿದೆ.

ಉತ್ತರ ಕೇರಳದಲ್ಲಿ, ಮಣಿಚಿ ತೆಯ್ಯಂ ಮತ್ತು ಬಪಿರಿಯನ್ (ಬಪ್ಪೂರನ್) ತೆಯ್ಯಂಗಳನ್ನು ಮುಸ್ಲಿಂ/ ಮಾಪ್ಪಿಲ ತೆಯ್ಯಂ ಎಂದು ಕರೆಯಲಾಗುತ್ತದೆ, ಏಕೆಂದರೆ ಮುಸ್ಲಿಮರನ್ನು ಮಾಪ್ಪಿಲ ಎಂದು ಸಂಬೋಧಿಸಲಾಗುತ್ತದೆ. ಇವುಗಳಲ್ಲಿ ಹಿಂದೂಗಳು ಮುಸ್ಲಿಂ ಪಾತ್ರಗಳನ್ನು ನಿರ್ವಹಿಸುತ್ತಾರೆ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ಮಾಡುತ್ತಾರೆ. ಮತ್ತು ಹಿಂದೂ-ಮುಸ್ಲಿಂ ಧಾರ್ಮಿಕ ಸಾಮರಸ್ಯವನ್ನು ಬಿಂಬಿಸುವ ಸುಮಾರು 15 ಮಾಪ್ಪಿಲ ತೆಯ್ಯಂಗಳಿವೆ.

ಇದಲ್ಲದೆ, ಈ ವರದಿಗಳ ಪ್ರಕಾರ, ಉತ್ತರ ಕೇರಳದ ಕೆಲವು ತೆಯ್ಯಂಗಳು ಪ್ರದರ್ಶನಕಾರರಿಗೆ ಮದ್ಯ ಮತ್ತು ಮಾಂಸವನ್ನು ನೀಡುವ ಪದ್ದತಿ ಚಾಲ್ತಿಯಲ್ಲಿದೆ. ಆದ್ದರಿಂದ, ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವೈರಲ್ ದೃಶ್ಯಗಳು ಉತ್ತರ ಕೇರಳದಲ್ಲಿ ಮುಸ್ಲಿಂ ಸಮುದಾಯ ಮತ್ತು ಮದ್ಯವನ್ನು ಒಳಗೊಂಡಿರುವ ಧಾರ್ಮಿಕ ಪ್ರಾಬಲ್ಯದ ಭಾಗವಾಗಿದೆ ಎಂದು ಈ ವಿವರಗಳು ಖಚಿತಪಡಿಸುತ್ತವೆ.
ಕೇರಳ ಸರ್ಕಾರವು ಮುಸ್ಲಿಮರನ್ನು/ಕ್ರೈಸ್ತರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆಯೇ?
ಈ ಲೇಖನದ ಪ್ರಕಾರ, ಕೇರಳವು ರಾಜ್ಯದ ದೇವಸ್ಥಾನ ಮಂಡಳಿಗಳು, ಖಾಸಗಿ ದೇವಸ್ಥಾನ ಮಂಡಳಿಗಳು ಅಥವಾ ನಾಯರ್ ಸರ್ವೀಸ್ ಸೊಸೈಟಿ (NSS) ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನಾ (SNDP) ಯೋಗಂ, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಗಳಂತಹ ಸಮುದಾಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ದೇವಾಲಯಗಳನ್ನು ಹೊಂದಿದೆ.
ಅರ್ಚಕರು ಸೇರಿದಂತೆ ಸಿಬ್ಬಂದಿಯನ್ನು ಆಯಾ ದೇವಸ್ಥಾನ ಮಂಡಳಿಗಳು ನೇಮಕ ಮಾಡಿಕೊಳ್ಳುತ್ತವೆ. ಮತ್ತು ಬೋರ್ಡ್ಗಳ ಅಡಿಯಲ್ಲಿ ದೇವಸ್ಥಾನಗಳಿಗೆ ನೇಮಕಾತಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯಿದೆ 1951 ರ ಪ್ರಕಾರ ಮಾಡಲಾಗುತ್ತದೆ, ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರಿಗೆ ನೀಡಲಾಗುವ ಪೋಸ್ಟ್ಗಳನ್ನು ಹೊರತುಪಡಿಸಿ. ಇದಲ್ಲದೆ, ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ, ಎಸ್ಸಿಗಳು 10% ಮೀಸಲಾತಿಯನ್ನು ಪಡೆಯುತ್ತಾರೆ, ಹಾಗೆಯೇ ಎಸ್ಟಿಗಳು ನೇಮಕಾತಿಯಲ್ಲಿ 2% ಪಾಲನ್ನು ಪಡೆಯುತ್ತಾರೆ.

2017 ರಲ್ಲಿ, ತಿರುವಾಂಕೂರು ಮಂಡಳಿಯು ಮೊದಲ ಬಾರಿಗೆ ದಲಿತರನ್ನು ತನ್ನ ಅಡಿಯಲ್ಲಿ ವಿವಿಧ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ ಎಂದು ಹೇಳುವ ವರದಿಗಳಿವೆ. ಆದರೆ, ಸರ್ಕಾರದಿಂದ ಪಾದ್ರಿಗಳಾಗಿ ಮುಸ್ಲಿಮರು/ಕ್ರೈಸ್ತರು ನೇಮಕಗೊಂಡಿರುವ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ/ಸುದ್ದಿ ವರದಿಗಳು ಸಿಗಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳು ಉತ್ತರ ಕೇರಳದಲ್ಲಿ ಪ್ರಬಲವಾಗಿರುವ ತೆಯ್ಯಂ ಎಂಬ ಆಚರಣೆಯನ್ನು ತೋರಿಸುತ್ತವೆ. ಮತ್ತು ನಿರ್ದಿಷ್ಟ ವೀಡಿಯೋ ಕಾಸರಗೋಡಿನದ್ದು, ಅಲ್ಲಿ ಮಾಪ್ಪಿಲ ತೆಯ್ಯಂ ಪ್ರದರ್ಶಿಸಲಾಗುತ್ತದೆ. ಸಾಮಾನ್ಯವಾಗಿ ಮಾಪಿಲ ತೆಯ್ಯಂಗಳ ಸಮಯದಲ್ಲಿ, ಹಿಂದೂ ಕಲಾವಿದರು ಮುಸ್ಲಿಮರಂತೆ ವೇಷ ಧರಿಸುತ್ತಾರೆ ಮತ್ತು ಅದಾನವನ್ನು ಪಠಿಸುತ್ತಾರೆ. ಅಲ್ಲದೆ, ಕೆಲವು ತೆಯ್ಯಂಗಳು ಮದ್ಯ ಮತ್ತು ಮಾಂಸದ ಅರ್ಪಣೆಗಳನ್ನು ಒಳಗೊಂಡಿರುತ್ತವೆ.
ಒಟ್ಟಾರೆಯಾಗಿ ಕೇರಳದ ಹಿಂದೂ ಮುಸ್ಲಿಂ ಭಾವೈಕ್ಯತೆ ಬೆಸೆಯುವ ತೆಯ್ಯಂ ಆಚರಣೆಯಲ್ಲಿ ಕೋಮು ದ್ವೇಷದ ಹೇಳಿಕೆಯನ್ನು ಮತ್ತು ಇದೆಲ್ಲ ಕೇರಳ ಸರ್ಕಾರವು ಹಿಂದೂ ದೇವಾಲಯಗಳಲ್ಲಿ ಮುಸ್ಲಿಮರು/ಕ್ರೈಸ್ತರನ್ನು ಅರ್ಚಕರನ್ನಾಗಿ ನೇಮಿಸಿಕೊಂಡದಕ್ಕೆ ಸಾಕ್ಷಿ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ BJP ಪೋಸ್ಟ್ ಹಂಚಿಕೊಂಡಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ವೆನಿಜುವೆಲ್ಲಾ ರಸ್ತೆಯಲ್ಲಿ ಬಿದ್ದ ರಾಶಿ ರಾಶಿ ಕರೆನ್ಸಿ ನೋಟುಗಳು! ಕಾರಣ ಏನು ಗೊತ್ತಾ?

