ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿಯರು ಜೈ ಶ್ರೀರಾಮ್ ಹಾಡಿಗೆ ಹೆಜ್ಜೆ ಹಾಕಿದರೆ?

ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿಯರು ಜೈ ಶ್ರೀರಾಮ್ ರಿದಂಗೆ ಹೆಜ್ಜೆ ಹಾಕಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಡಿನಲ್ಲಿ ‘ಜೈಶ್ರೀರಾಮ್’ ಎಂಬ ರಿದಂ ಕೇಳಿಸುತ್ತದೆ. ಬುರ್ಖಾ ಧರಿಸಿರುವ ಹುಡುಗಿಯರ ಜತೆ ಕೆಂಪು ದಿರಿಸಿನಲ್ಲಿರುವ ಮಹಿಳೆಯೂ ನೃತ್ಯ ಮಾಡುವುದು ಕಾಣಿಸುತ್ತದೆ. ‘ಶಿಕ್ಷಕಿಯು ಖಟ್ಟರ್ ಹಿಂದೂ ಆಗಿದ್ದಾಗ ಮಾತ್ರ ಇದು ಸಾಧ್ಯ’ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೊ ಜೊತೆ ಉಲ್ಲೇಖಿಸಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದ ಮೂಲ ಬಾಂಗ್ಲಾದೇಶದ್ದು ಎಂದು ತಿಳಿದು ಬಂದಿದೆ. ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿಯರು ಜೈ ಶ್ರೀರಾಮ್ ರಿದಂಗೆ ಹೆಜ್ಜೆ ಹಾಕಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಮೂಲ ವಿಡಿಯೋವನ್ನು ಬಾಂಗ್ಲಾದೇಶದ ಢಾಕಾ ವಲಯದ ಮದರಿಪುರ ಎಂಬ ಬಾಲಕಿಯರ ಪ್ರೌಢಶಾಲೆಯ ವಾರ್ಷಿಕೋತ್ಸವದ ವೇಳೆ ಹುಡುಗಿಯರು ನೃತ್ಯ ಮಾಡಿದ ವಿಡಿಯೊ  ಎಂದು ತಿಳಿದು ಬಂದಿದೆ. ಆದರೆ ಮೂಲ ವಿಡಿಯೊದಲ್ಲಿ ‘ಅಮರ್ ಮೊಂಟಾ ಜೆ ಆಜ್ ಎಮೊಲೆಲೊ’ ಎಂಬ ಬಂಗಾಳಿ ಗೀತೆಯನ್ನು ಬಳಸಲಾಗಿದೆ. ಮೂಲ ವಿಡಿಯೊದ ಗೀತೆಯನ್ನು ಮ್ಯೂಟ್ ಮಾಡಿ, ಭಜರಂಗಿ… ಭಜರಂಗಿ ಎಂಬ ಬೇರೊಂದು ಗೀತೆಯನ್ನು ಸೇರಿಸಿ ತಿರುಚಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಶಾಲೆಯೊಂದರಲ್ಲಿ ಬುರ್ಖಾಧಾರಿ ಹುಡುಗಿಯರು ಶಾಲಾ ವಾರ್ಷಿಕೋತ್ಸವದ ವೇಳೆ ‘ಅಮರ್ ಮೊಂಟಾ ಜೆ ಆಜ್ ಎಮೊಲೆಲೊ’ ಎಂಬ ಬಂಗಾಳಿ ಗೀತೆಗೆ ಮಾಡಿದ ನೃತ್ಯವನ್ನು ಎಡಿಟ್ ಮಾಡಿ ಭಜರಂಗಿ… ಭಜರಂಗಿ ಎಂಬ ಬೇರೊಂದು ಗೀತೆಯನ್ನು ಸೇರಿಸಿ ಮುಸ್ಲಿಂ ಹುಡುಗಿಯರು ಜೈ ಶ್ರೀರಾಮ್ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ABP-C ವೋಟರ್ ಸಮೀಕ್ಷೆಯಲ್ಲಿ BJP ಗೆ ಬಹುಮತ? ಸುಳ್ಳು ಅಂಕಿ ಅಂಶ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights