ಟೂಲ್ಕಿಟ್ ಪ್ರಕರಣ : ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ!
ಟೂಲ್ಕಿಟ್ ಪ್ರಕರಣದಲ್ಲಿ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಕೃಷಿ ಕಾಯ್ದೆಗಳನ್ನು ವಿರೋದಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಟೂಲ್ ಕಿಟ್ ಬಳಸಿದ ಆರೋಪದ ಮೇಲೆ ಈ ತಿಂಗಳ ಆರಂಭದಲ್ಲಿ ಬಂಧಿತರಾಗಿ ಪೊಲೀಸರ ವಶದಲ್ಲಿದ್ದ ಹವಾಮಾನ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ 3 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
5 ದಿನಗಳ ಪೊಲೀಸ್ ವಶದಲ್ಲಿದ್ದ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಜೊತೆಗೆ ಪೊಲೀಸರ ವಿಚಾರಣೆಗೂ ಅನುಮತಿ ನೀಡಲಾಗಿದೆ. ಟೂಲ್ ಕಿಟ್ ಬಳಸಿದ ಆರೋಪದ ಮೇಲೆ ಬಂಧಿತರಾಗಿದ್ದ ಶಾಂತಾನು ಮತ್ತು ನಿಖಿತಾ ಅವರನ್ನು ದಿಶಾ ರವಿ ಅವರೊಂದಿಗೆ ಮುಖಾಮುಖಿ ಕೂರಿಸಿ ಪೊಲೀಸರು ವಿಚಾರಣೆ ನಡೆಸಿದ್ದರು.
ದಿಶಾ ರವಿ ಅವರನ್ನು ಇನ್ನಷ್ಟು ವಿಚಾರಣೆ ಮಾಡುವ ಅಗತ್ಯವಿದೆ ಹೀಗಾಗಿ ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರ ಪರ ವಕೀಲರು ವಾದ ಮಂಡಿಸಿದ್ದರು. ಫೆ. 13 ರಂದು ದಿಶಾ ರವಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ನ್ಯಾಯಾಲಯದ 5 ದಿನಗಳ ಕಾಲ ಪೋಲೀಸರ ವಿಚಾರಣೆಗೆ ನೀಡಿತ್ತು. ಆ ಅವಧಿ ಮುಗಿದ ಹಿನ್ನೆಲೆಯಲ್ಲಿ 3 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

