ಆಂಧ್ರಪ್ರದೇಶ: 2,639 ಪಂಚಾಯತ್‌ ಸ್ಥಾನಗಳಲ್ಲಿ ಕೇವಲ 4ರಲ್ಲಿ ಗೆದ್ದ BJP; ಭಾರೀ ಮುಖಭಂಗ!

ಆಂಧ್ರಪ್ರದೇಶ ಪಂಚಾಯತ್‌ನ 3ನೇ ಹಂತದ ಚುನಾವಣೆ ಫಲಿತಾಂಶ ಪ್ರಕರಟವಾಗಿದ್ದು, 2,639 ಸ್ಥಾನಗಳ ಪೈಕಿ ಈವರೆಗೆ 1,589 ಪಂಚಾಯತ್ ಸ್ಥಾನಗಳ ಫಲಿತಾಂಶಗಳನ್ನು ಘೋಷಿಸಲಾಗಿದೆ. ಈ ಪೈಕಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು 1,270 ಸ್ಥಾನಗಳನ್ನು ಗೆದ್ದರೆ, ಟಿಡಿಪಿ 245, ಜನಸೇನೆ 16, ಬಿಜೆಪಿ 4 ಸ್ಥಾನಗಳು ಮತ್ತು ಇತರರು 54 ಸ್ಥಾನಗಳನ್ನು ಗೆದ್ದಿದ್ದಾರೆ.

ಆಂಧ್ರಪ್ರದೇಶದ ಗ್ರಾಮ ಪಂಚಾಯಿತಿಗಳಿಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಮೂರನೇ ಹಂತದ ಚುನಾವಣೆಯು 2,639 ಪಂಚಾಯಿತಿಗಳಿಗೆ ನಡೆದಿತ್ತು. ಇಂದು ಫಲಿತಾಂಶ ಪ್ರಕರಣವಾಗಿದ್ದು, ಬಿಜೆಪಿ ಹೀನಾಯ ಸೋಲು ಖಂಡಿದೆ.

ಪಂಚಾಯತ್ ರಾಜ್ ಆಯುಕ್ತ ಎಂ.ಗಿರಿಜಾ ಶಂಕರ್ ಮಾತನಾಡಿ, ರಾಜ್ಯದ ಎಲ್ಲಾ 13 ಜಿಲ್ಲೆಗಳಲ್ಲಿ 55.75 ಲಕ್ಷ ಮತದಾರರಲ್ಲಿ 80.71 ರಷ್ಟು ಜನರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 1,977 ಮತಗಟ್ಟೆಗಳು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿದ್ದರೆ, 3,127 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತ್ತು 4,118 ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶ 1st Phase ಚುನಾವಣೆ: YSR ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ; BJPಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights