ದರ್ಶನ್‌ನನ್ನು ಚಪ್ಪಲಿಯಿಲ್ದೆ ನಿಲ್ಲಿಸಿದಾಗ ಯಾರು ಬಂದಿದ್ರು? – ಜಗ್ಗೇಶ್ ಗಂಭೀರ ಪ್ರಶ್ನೆ!
ಸಾರಥಿ ವಿರುದ್ಧ ಮತ್ತೆ ಸಿಡಿದೆದ್ದ ಜಗ್ಗೇಶ್ ಹಳೆ ನೆನಪುಗಳನ್ನು ಮೆಲುಕು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗ್ಗೇಶ್ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಚಾರವಾಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಸಣ್ಣ ಹೀರೋಯಿನ್ ಮನೆಯಲ್ಲಿ ದೊಡ್ಡ ನಟ ದರ್ಶನ್ನನ್ನು ಚಪ್ಪಲಿಯಿಲ್ದೆ ನಿಲ್ಲಿಸಿದ್ರು ಆಗ ಯಾರು ಬಂದಿದ್ರು ಸಪೋರ್ಟ್ ಗೆ? ಆಗ ಯಾರೂ ಬಾರದೇ ಹೋದರೂ ನಾನು ಹೋಗಿದ್ದೆ. ಸಣ್ಣ ವಿಚಾರಕ್ಕೆ ದೊಡ್ಡ ನಟನಿಗೆ ನಿಲ್ಲಿಸುವುದು ಸರಿಯಲ್ಲ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೆ. ನೀವು ಕಾನೂನು ಪ್ರಕಾರ ಏನ್ ಮಾಡ್ತೀರಾ ಮಾಡಿ ಅವನನ್ನು ಕಾಯಿಸಬೇಡಿ ಎಂದು ಹೇಳಿದ್ದೇ. ಆ ಪ್ರೀತಿ ನೆನಪಿಗೆ ಬರರಿಲ್ವಾ?” ಎಂದು ನಟ ಜಗ್ಗೇಶ್ ದರ್ಶನ್ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ.
ದರ್ಶನ್ ಕನ್ನಡದ ರಜನಿಕಾಂತ್ :-
“ದರ್ಶನ್ ನ್ನು ಆಗಲೂ ಪ್ರೀತಿಸುತ್ತೇನೆ. ಈಗಲೂ ಪ್ರೀತಿಸುತ್ತೇನೆ. ನಾಳೆನೂ ಪ್ರೀತಿಸುತ್ತೇನೆ. ಕನ್ನಡದ ಹುಡುಗ ದರ್ಶನ್ ಕನ್ನಡದ ರಜನಿಕಾಂತ್ ಅಂತ ಹೇಳಿದ್ದೆ. ದರ್ಶನ್ ಗೆ ಅಪಘಾತ ಆದಾಗ ನೀವು ಕಾಲ್ ಮಾಡಿದ್ರಿ ಈಗ ಎಲ್ಲಿದ್ದಾರೆ ದರ್ಶನ್ ಅಂತ ನನ್ನ ಹೆಂಡತಿ ಪ್ರಶ್ನೆ ಹಾಕುತ್ತಿದ್ದಾರೆ. ನನಗೆ ಬೇಜಾರಾಗಿದ್ದು ಇಷ್ಟೇ. ದರ್ಶನ್ ಈ ವೇಳೆ ನನಗೆ ಕಾಲ್ ಮಾಡಬೇಕಿತ್ತು. ಅವರೆಲ್ಲಾ ಯಾರು ಎಂದು ಕೇಳಬೇಕಿತ್ತು. ಆ ಹುಡುಗರಿಗೆ ಕಾಲ್ ಮಾಡಬೇಕಿತ್ತು. ಆದರೆ ದರ್ಶನ್ ಅದನ್ನ ಮಾಡಲಿಲ್ಲ. ಇದೇ ನನಗೆ ನೋವಾಗಿದ್ದು ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದ ಶೂಟಿಂಗ್ ವೇಳೆ ಮುತ್ತಿಗೆ ಹಾಕಲು ಪ್ರತ್ನಿಸಿದ್ದಾರೆ. ಈ ವೇಳೆ ನಿರ್ಮಾಪಕರು ಹೆದರಿದ್ರು, ಅಂದು ನಾನು ಆಡಿಯೋದಲ್ಲಿ ಮಾತನಾಡಿದ ವ್ಯಕ್ತಿಯ ಮದುವೆ ಇತ್ತು. ಇದರಿಂದ ಅವರಿಗೆ ತೊಂದರೆ ಆಗಬಾರದು ಎಂದು ನಾನು ದರ್ಶನ್ ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡಿದೆ.
ಗಲಾಟೆ ಮಾಡಿದವರು ದರ್ಶನ್ ಅಭಿಮಾನಿಗಳು :-
ದಿನಬೆಳಗಾದರೆ ದರ್ಶನ್ ಜೊತೆಗಿರುವವರೇ ಗಲಾಟೆ ಮಾಡಿದ್ದವರು. ಅವತ್ತು ಮುತ್ತಿಗೆ ಹಾಕಿದವರ ಬಗ್ಗೆ ನಾನು ಮಾತನಾಡುವುದಿಲ್ಲ. ಗಲಾಟೆ ಮಾಡಿದವರು ದರ್ಶನ್ ಜೊತೆ ಇರುವ ಫೋಟೋ ಎಲ್ಲಾ ಕಡೆ ಇದೆ ಎಂದಿದ್ದಾರೆ.
ಮಾನಹರಣ ಮಾಡಲು ದೊಡ್ಡ ಹುನ್ನಾರ :-
ರಾಮಸರ್ಕಲ್ ನಲ್ಲಿ ಅಡ್ಡ ಹಾಕಿ ಹುನ್ನಾರ ಮಾಡಲಾಗಿತ್ತು ಎಂದು ದರ್ಶನ್ ಅಭಿಮಾನಿಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

