IND vs ENG: ಶತಕ ಸಿಡಿಸಿದ ರಿಷಭ್‌ ಪಂತ್; ಟೀಂ ಇಂಡಿಯಾಗೆ ಭರ್ಜರಿ ಮುನ್ನಡೆ!

ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ತಂಡಗಳ ನಡುವೆ ನಡೆಯುತ್ತಿರುವ ಕೊನೆಯ (4ನೇ) ಟೆಸ್ಟ್‌ನ ಮೊಲದ ಇನ್ನಿಂಗ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಟೀಂ ಇಂಡಿಯಾ ಭರ್ಜರಿ ಮುನ್ನಡೆ ಸಾಧಿಸಿದ್ದು, ಭಾರತ ತಂಡದ ರಿಷಭ್‌ ಪಂತ್‌ ಶತಕ ಭಾರಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟ ಅಂತ್ಯಗೊಳ್ಳುವ ವೇಳೆಗೆ ಭಾರತ ತಂಡವು 7 ವಿಕೆಟ್ ನಷ್ಟಕ್ಕೆ 294 ರನ್‌ ಗಳಿಸಿದ್ದು, 89 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಇನ್ನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ 118 ಬಾಲ್‌ಗಳಲ್ಲಿ 101 ರನ್‌ (13 ಬೌಂಡರಿ, 2 ಸಿಕ್ಸರ್)ಗಳಿಸಿ ಭರ್ಜರಿ ಶತಕ ಭಾರಿಸಿದ್ದು, ಜೇಮ್ಸ್ ಆಂಡರ್‌ಸನ್ ಬೌಲಿಂಗ್‌ಗೆ ಕ್ಯಾಚ್‌ ನೀಡಿ ಔಟಾದರು.

ಪಂತ್‌ ಅವರಿಗೆ ಸಾಥ್‌ ನೀಡಿದ್ದ ವಾಷಿಂಗ್ಟನ್ ಸುಂದರ್ 60 ರನ್ ಗಳಿಸಿದ್ದು, ಔಟಾಗದೇ ಕ್ಸ್ರೀಸ್‌ ಕಾಯ್ದುಕೊಂಡಿದ್ದಾರೆ. ಅವರೊಂದಿಗೆ, ಅಕ್ಷರ್ ಪಟೇಲ್‌ 11 ರನ್‌ ಗಳಿಸಿದ್ದು ಅವರೂ ಕ್ಸ್ರೀಸ್‌ನಲ್ಲಿದ್ದಾರೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್‌ ಗಳಿಸಿ ಆಲೌಟ್ ಆಗಿತ್ತು.

ಇದನ್ನೂ ಓದಿ: IND vs ENG: ಇಂಗ್ಲೆಂಡ್‌ 205 ರನ್‌ಗೆ ಆಲ್‌ಔಟ್; ಬೌಲಿಂಗ್‌ನಲ್ಲಿ ಅಬ್ಬರಿಸಿದ ಸ್ಪಿನ್ನರ್ಸ್‌!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights