ನಟ ಧನುಷ್, ಡಿಎಂಕೆ ಮುಖಂಡ ವಿಜಯಕಾಂತ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ
ನಟ ಧನುಷ್ ಮತ್ತು ಡಿಎಂಕೆ ಮುಖಂಡ ವಿಜಯಕಾಂತ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕರೆ ಬಂದಿದೆ. ಈ ವಿಚಾರ ಕಾಲಿವುಡ್ ಚಿತ್ರ ನಟರನ್ನ ಭಯಬೀತರನ್ನಾಗಿದೆ.
ನಟ ಧನುಷ್ ವಾಸವಿರುವ ಅಭಿರಾಮ್ಪುರಂ ಮನೆ ಮತ್ತು ವಿಜಯಕಾಂತ್ ಅವರ ವಿರಂಬಕಮ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಂಗಳವಾರ ಎರಡು ಹುಸಿ ಬಾಂಬ್ ಕರೆಗಳು ಬಂದಿವೆ.
ಅನಾಮಧೇಯ ವ್ಯಕ್ತಿಗಳಿಂದ ಕರೆಗಳನ್ನು ಸ್ವೀಕರಿಸಿದ ನಂತರ ಪೊಲೀಸರು ಧನುಷ್ ಹಾಗೂ ವಿಜಯಕಾಂತ್ ಅವರುಗಳ ಮನೆಗಳಿಗೆ ಬಾಂಬ್ ಪತ್ತೆ ದಳಗಳನ್ನು ಕಳಿಸಿ ಪರಿಶೀಲಿಸಿದ್ದಾರೆ. ಆದರೆ ಅವೆರಡೂ ಕರೆಗಳು ಹಿಸಿ ಬಾಂಬ್ ಕರೆಗಳೆಂದು ತಿಳಿದುಬಂದಿದೆ. ಸಧ್ಯ ಈ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ನಟ ರಜನಿಕಾಂತ್, ಸೂರ್ಯ ಕೂಡ ಹುಸಿ ಬಾಂಬ್ ಬೆದರಿಕೆ ಕರೆಯನ್ನು ಎದುರಿಸಿದ್ದರು. ಮಾತ್ರವಲ್ಲದೆ ಪೊಲೀಸರಿಗೆ ತಿಳಿಸಿದ್ದರು. ಇದೀಗ ಧನುಷ್ ಮತ್ತು ನಟ ವಿಜಯಕಾಂತ್ ಅವರ ಮನೆಗೆ ಬಾಂಬ್ ಇಡುವುದಾಗಿ ಕರೆ ಬಂದಿದೆ. ಮಾನಸಿಕ ವ್ಯಕ್ತಿಯೊಬ್ಬ ಈ ಹುಸಿ ಬಾಂಬ್ ಕರೆ ಮಾಡಿದ್ದು, ಬೆದರಿಸಿದ್ದಾನೆ ಎಂದು ತಿಳಿದುಬಂದಿದೆ. ನಟ ರಜನಿಕಾಂತ್ಗೆ ಕರೆ ಮಾಡಿದ್ದ ಮಾನಸಿಕ ವ್ಯಕ್ತಿಯೂ ಈ ಇಬ್ಬರು ನಟರಿಗೆ ಹುಸಿ ಬಾಂಬ್ ಬೆದರಿಕೆಯ ಕರೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ತಮಿಳಿನ ಖ್ಯಾತ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಬೆದರಿಕೆಯ ಕರೆಯೊಂದು ಬಂದಿತ್ತು.
ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!