ಭಾರತವು ಇನ್ನುಮುಂದೆ ಪ್ರಜಾಪ್ರಭುತ್ವ ರಾಷ್ಟ್ರವಲ್ಲ; ಸ್ವೀಡಿಷ್ ವರದಿ ಟ್ವೀಟ್ ಮಾಡಿದ ರಾಹುಲ್ಗಾಂಧಿ
ಭಾರತದ ಪ್ರಜಾಪ್ರಭುತ್ವವು ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂಬ ಸ್ವೀಡಿಷ್ ಸಂಸ್ಥೆಯ ಹೇಳಿಕೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತವು “ಇನ್ನು ಮುಂದೆ” ಪ್ರಜಾಪ್ರಭುತ್ವ ರಾಷ್ಟ್ರವಲ್ಲ ಎಂದು ಹೇಳಿದ್ದಾರೆ.
ಭಾರತವನ್ನು “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ” ದಿಂದ “ಚುನಾವಣಾ ಪ್ರಜಾಪ್ರಭುತ್ವ”ಕ್ಕೆ ಇಳಿದಿದೆ. ಭಾರತ ಈಗ ಪಾಕಿಸ್ತಾನದಂತೆ ಸರ್ವಾಧಿಕಾರ ರಾಷ್ಟ್ರವಾಗಿದ್ದು, ಬಾಂಗ್ಲಾದೇಶಕ್ಕಿಂತಲೂ ಹದಗೆಟ್ಟಿದೆ ಎಂದು ಸ್ವೀಡನ್ನ ವಿ-ಡೆಮ್ ಸಂಸ್ಥೆಯು ಪ್ರಜಾಪ್ರಭುತ್ವ ವರದಿಯನ್ನು ಪ್ರಕಟಿಸಿದೆ. ಅದರ ವರದಿಯನ್ನು ಉಲ್ಲೇಖಿಸಿರುವ ಸುದ್ದಿ ವರದಿಯನ್ನು ಟ್ಯಾಗ್ ಮಾಡಿರುವ ರಾಹುಲ್, “ಭಾರತ ಇನ್ನು ಮುಂದೆ ಪ್ರಜಾಪ್ರಭುತ್ವ ರಾಷ್ಟ್ರವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಯುಎಸ್ ಸರ್ಕಾರದ ಅನುದಾನಿತ ಎನ್ಜಿಒ ಫ್ರೀಡಂ ಹೌಸ್ನ ಮತ್ತೊಂದು ಜಾಗತಿಕ ವರದಿಯು ಭಾರತದ ಸ್ಥಾನಮಾನವನ್ನು “ಉಚಿತ” ದಿಂದ “ಭಾಗಶಃ ಉಚಿತ”ಕ್ಕೆ ಇಳಿದೆ ಎಂದು ಹೇಳಿದೆ. ಅಲ್ಲದೆ, “2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ಕುಸಿದುಹೋಗಿವೆ” ಎಂದು ಹೇಳಿದೆ.
India is no longer a democratic country. pic.twitter.com/iEwmI4ZbRp
— Rahul Gandhi (@RahulGandhi) March 11, 2021
ಫ್ರೀಡಂ ಹೌಸ್ ವರದಿಯನ್ನು ಸರ್ಕಾರ ಬಲವಾಗಿ ಖಂಡಿಸಿದೆ ಮತ್ತು ಅದನ್ನು “ದಾರಿತಪ್ಪಿಸುವ ತಪ್ಪು ಮಾಹಿತಿ” ಎಂದು ಹೇಳಿದ್ದು, ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉತ್ತಮವಾಗಿ ಪಾಲಿಸುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅದಾನಿಯ ಖಾಲಿ ಗೋಡೌನ್ಗೆ 6.5 ಕೋಟಿ ಬಾಡಿಗೆ ಕಟ್ಟಿದೆ ಸರ್ಕಾರ!

