‘ಮಮತಾ ಅವರ ಕಾಲಿನ ಗಾಯ ಆಕಸ್ಮಿಕ, ದಾಳಿಗೆ ಪುರಾವೆಗಳಿಲ್ಲ’ ಚುನಾವಣಾ ಆಯೋಗ!
ಮಮತಾ ಅವರ ಕಾಲಿನ ಗಾಯ ಆಕಸ್ಮಿಕ, ದಾಳಿಗೆ ಪುರಾವೆಗಳಿಲ್ಲ ಎಂದು ಚುನಾವಣಾ ಆಯೋಗ ವರದಿ ಪಡೆದಿದೆ.
ನಂದಿಗ್ರಾಮ್ನಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಕಾಲಿಗೆ ಗಾಯವಾಗಿದ್ದು ಆಕಸ್ಮಿಕ ಎಂದು ಚುನಾವಣಾ ಆಯೋಗಕ್ಕೆ ಪ್ರತ್ಯಕ್ಷದರ್ಶಿಗಳು ಸಲ್ಲಿಸಿದ ವಿವರವಾದ ವರದಿಯಲ್ಲಿ ಹೇಳಲಾಗಿದೆ. ಪ್ರತ್ಯಕ್ಷ ದರ್ಶಿಗಳಾದ ವಿವೇಕ್ ದುಬೆ ಮತ್ತು ಅಜಯ್ ನಾಯಕ್ ಅವರಿಂದ ಚುನಾವಣಾ ಆಯೋಗ ಈ ವರದಿಯನ್ನು ಕೋರಿತ್ತು.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಮತಾ ಅವರ ಕಾಲಿಗೆ ಗಾಯವಾಗಿತ್ತು. ಇದು ಆಕಸ್ಮಿತವಲ್ಲ ಹಲ್ಲೆ ಎಂದು ಖುದ್ದು ಮಮತಾ ಅವರೇ ಆರೋಪಿಸಿದ್ದರು. ಇದೊಂದು ರಾಜಕೀಯ ಪಿತೂರಿ ಎಂದು ಹೇಳಿದ್ದರು.
ಆದರೆ ಮಮತಾ ಬ್ಯಾನರ್ಜಿಯ ಬೆಂಗಾವಲು ಮೇಲೆ ಹಲ್ಲೆ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಕಾಲಿಗೆ ಕಾರಿನ ಬಾಗಿಲು ಬಡೆದಿದ್ದು ನಿಜ. ಆದರೆ ಹೇಗೆ ಬಡಿಯಿತು ಎಂಬುದನ್ನು ನಿಖರವಾಗಿ ತಿಳಿದಿಲ್ಲ.
ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಪ್ರತ್ಯಕ್ಷ ದರ್ಶಿಗಳಿಮದ ವಿವರವಾದ ವರದಿಯನ್ನು ಕೋರಿತ್ತು. ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ ಮತ್ತು ವಿಶೇಷ ವೀಕ್ಷಕ ಅಜಯ್ ನಾಯಕ್ ತಮ್ಮ ವಿವರವಾದ ವರದಿಯನ್ನು ಇಸಿಗೆ ಸಲ್ಲಿಸುವ ಮೊದಲು ಬಂಗಾಳದ ನಂದಿಗ್ರಾಮ್ನಲ್ಲಿ ಅಪಘಾತದ ಸ್ಥಳವನ್ನು ಪರಿಶೀಲಿಸಿದ್ದಾರೆ.
ಮಾರ್ಚ್ 10 ರಂದು ನಂದಿಗ್ರಾಮ್ನಲ್ಲಿ ಪ್ರಚಾರ ನಡೆಸುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಕಾರಿನ ಬಾಗಿಲು ಬಡಿಯಿತು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಕಾಲಿಗೆ ಕಾರ್ ಡೋರ್ ತಗುಲಿದ್ದು ಡೋರ್ ಗೆ ಒಂದು ಅಲ್ಲಿದ್ದ ಪುಟ್ಟ ಪೋಲ್ ತಾಗಿದೆ ಎಂದು ಹೇಳಲಾಗಿದೆ. ಜನ ದಟ್ಟಣೆಯಲ್ಲಿ ಪುಟ್ಟ ಪೋಲ್ ಕಂಡುಬಂದಿಲ್ಲ. ಅದು ಕಾರ್ ಡೋರ್ ಗೆ ತಾಗಿ ಬಾಗಿಲಲ್ಲಿ ನಿಂತಿದ್ದ ಮಮತಾ ಅವರ ಕಾಲಿಗೆ ತಾಗಿ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿಯಲ್ಲಿ ತಿಳಿಸಿದ್ದಾರೆ.

