ಭಾರೀ ಕುತೂಹಲ ಕೆರಳಿಸಿದ ಅಮೇರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ : ಟ್ರಂಪ್-ಬಿಡೆನ್ ನಡುವೆ ತೀವ್ರ ಪೈಪೋಟಿ!

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಟ್ರಂಪ್ ಮುನ್ನಡೆಯಲ್ಲಿದ್ದ ರಾಜ್ಯಗಳು ಒಂದೊಂದಾಗಿ ಕೈ ತಪ್ಪಿ ಹೋಗಿ ಮಿಶ್ರ ಹಂಚಿಕೆಯಾಗುತ್ತಿವೆ. ಹೀಗಾಗಿ ಟ್ರಂಪ್ ಜೋ ಬಿಡೆನ್ ಸನಿಹಕ್ಕೂ ಬರಲು ಸಾಧ್ಯವಾಗುತ್ತಿಲ್ಲ.

ಟ್ರಂಪ್ ಬಹುಮತ ಪಡೆಯಲು ಕನಿಷ್ಟ 56 ಎಲೆಕ್ಟ್ರೋಲ್ ಮತಗಳು ಬೇಕು. ಆದ್ರೆ, ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಬಹುಮತ ಗಿಟ್ಟಿಸಲು ಕೇವಲ 6 ಎಲೆಕ್ಟ್ರೋಲ್ ಮತಗಳು ಸಾಕು.

ಈ ಪೈಕಿ ನವೆಡಾ ರಾಜ್ಯದಲ್ಲಿ 6 ಎಲೆಕ್ಟ್ರೋಲ್ ಮತಗಳಿದ್ದು, ಈ ಪೈಕಿ 2ರಲ್ಲಿ ಬಿಡೆನ್ ಮುನ್ನಡೆಯಲ್ಲಿದ್ದಾರೆ. ಇನ್ನುಳಿದಂತೆ ಜಾರ್ಜಿಯಾ, ನಾರ್ಥ್ ಕೆರೋಲಿನಾ, ಪೆನ್ಸೆಲ್ವೇನಿಯಾ ಹಾಗೂ ಅಲಾಸ್ಕಾ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದ್ರೆ, ಇಲ್ಲಿಯೂ ಕೂಡಾ ಎಲೆಕ್ಟ್ರೋಲ್ ಮತಗಳು ಮಿಶ್ರ ಹಂಚಿಯಾಗುವ ಸಾಧ್ಯತೆಗಳಿವೆ.

ಮತ ಎಣಿಕೆ ಪ್ರಗತಿಯಲ್ಲಿರುವ ಐದೂ ರಾಜ್ಯಗಳ ಎಲ್ಲಾ ಎಲೆಕ್ಟ್ರೋಲ್ ಮತಗಳೂ ಟ್ರಂಪ್‌ ಅವರಿಗೇ ಬಂದರೂ ಕೂಡಾ ಮತ್ತೊಮ್ಮೆ ಅವರು ಅಧ್ಯಕ್ಷ ಪದವಿಗೆ ಏರಲು ಸಾಧ್ಯವಿಲ್ಲದಂಥಾ ಪರಿಸ್ಥಿತಿ ಇದೀಗ ಎದುರಾಗಿದೆ..! ಏಕೆಂದರೆ, ಟ್ರಂಪ್ ಗೆಲ್ಲಲು ಕನಿಷ್ಟ 56 ಎಲೆಕ್ಟ್ರೋಲ್ ಮತಗಳು ಬೇಕೇ ಬೇಕು.

ನ್ಯಾಶನಲ್ ಪಬ್ಲಿಕ್ ರೇಡಿಯೊ(ಎನ್ ಪಿಆರ್) ವರದಿ ಪ್ರಕಾರ, 2008ರಲ್ಲಿ ಬರಾಕ್ ಒಬಾಮಾ 6 ಕೋಟಿಯ 94 ಲಕ್ಷದ 98 ಸಾವಿರದ 516 ಮತಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ಬಾರಿ ಜೊ ಬಿಡೆನ್ ಈಗಾಗಲೇ ಅವರಿಗಿಂತ 3 ಲಕ್ಷ ಹೆಚ್ಚು ಮತಗಳನ್ನು ಗಳಿಸಿದ್ದಾರೆ.

ಈ ಬಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೊ ಬೈಡನ್ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಎಲೆಕ್ಟೊರಲ್ ವೋಟಿಂಗ್ ನಲ್ಲಿ ಜೊ ಬಿಡೆನ್ ಮುಂದಿದ್ದಾರೆ. ಜನಪ್ರಿಯ ಮತಗಳಲ್ಲಿ ಟ್ರಂಪ್ ಅವರು 2 ಲಕ್ಷದ 7 ಸಾವಿರ ಮತಗಳಷ್ಟು ಬೈಡನ್ ಗಿಂತ ಮುಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights